ಧಾರವಾಡ: ಪ್ರಯಾಗರಾಜ್ನಲ್ಲಿ ನಡೆಯುತ್ತಿರವ ಮಹಾಕುಂಭ ಮೇಳದಲ್ಲಿ ನಡೆದ ಕಾಲ್ತುಳಿತದಲ್ಲಿ ಬೆಳಗಾವಿಯ ನಾಲ್ವರು ಸಾವನ್ನಪ್ಪಿದ್ದಾರೆ. ಧಾರವಾಡದ ಯಾರೂ ಪ್ರಯಾಗರಾಜ್ನಲ್ಲಿ ಸಿಲುಕಿಕೊಂಡಿಲ್ಲ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರವಾಡ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ವಿಪತ್ತು ನಿರ್ವಹಣಾ ಘಟಕ ಪ್ರಯಾಗರಾಜ್ನ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಧಾರವಾಡದ ಯಾರೂ ಕಾಲ್ತುಳಿತಕ್ಕೆ ಒಳಗಾದ ಬಗ್ಗೆ ವರದಿಯಾಗಿಲ್ಲ. ಕುಂಭಮೇಳ ಬಹಳ ದಿನಗಳವರೆಗೆ ನಡೆಯುವುದರಿಂದ ಜನರೇ ಪ್ಲ್ಯಾನ್ ಮಾಡಿಕೊಂಡು ಹೋಗುತ್ತಿದ್ದಾರೆ. ಕೆಲವರು ಈಗಾಗಲೇ ವಾಪಸ್ ಕೂಡ ಬಂದಿದ್ದಾರೆ. ಸದ್ಯಕ್ಕಂತೂ ಧಾರವಾಡದ ಯಾರೂ ಕಾಲ್ತುಳಿತಕ್ಕೆ ಒಳಗಾದ ಬಗ್ಗೆ ವರದಿಯಾಗಿಲ್ಲ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/01/2025 06:34 pm