ನವಲಗುಂದ : ದುಶ್ಚಟಗಳಿಂದ ದೂರವಿದ್ದು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ ಭೋವಿ ಅವರು ವಡ್ಡರ ಸಮಾಜದವರಿಗೆ ಕರೆ ನೀಡಿದರು.
ನವಲಗುಂದ ಹಾಗೂ ತಿರ್ಲಾಪುರ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಸಮಾಜದ ಏಳಿಗೆಗಾಗಿಯೇ ಅಭಿವೃದ್ದಿ ನಿಗಮ ಇದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರಿ ಸೌಲಭ್ಯ ದೊರಕುವಂತಾಗಿ ಸ್ವಾವಲಂಬಿ ಬದುಕು ಸಾಗಿಸಲು ನೆರವು ನೀಡಲು ನಿಗಮ ಬದ್ಧ ಎಂದರು.
ಅರ್ಹ ಅನುದಾನ ಫಲಾನುಭವಿಗಳಿಗೆ ತಲುಪಿಸಲು ಆನ್ಲೈನ್ ಮೂಲಕ ಅರ್ಜಿ ಪಡೆಯಲಾಗುತ್ತಿದೆ. ಶೀಘ್ರದಲ್ಲೇ ಸರ್ಕಾರದ ಅನುದಾನ ಬಿಡುಗಡೆಯಾಗಲಿದೆ. ಅರ್ಜಿ ಸಲ್ಲಿಸಿ ಸಮುಚಿತ ಮಾರ್ಗದಲ್ಲಿ ಸಹಾಯಧನ ಪಡೆಯಬಹುದಾಗಿದೆ ಎಂದು ಹೇಳಿದರು.
ಸಮಾಜದ ಮುಖಂಡರಾದ ಮಾರುತಿ ಬೆಳವಟಗಿ, ಬಸವರಾಜ ಕಟ್ಟಿಮನಿ, ಜಯಪ್ರಕಾಶ ಬದಾಮಿ, ರಾಘವೇಂದ್ರ ಪೂಜಾರ, ಅಂಜನೇಯ ಕಟಗಿ, ದುರ್ಗಪ್ಪ ಸಾತಾಳಿ, ರಾಮಪ್ಪ ಕಾಲವಾಡ, ತಿಪ್ಪಣ್ಣ ವಡ್ಡರ, ಶೇಖಪ್ಪ ಕಲಕೇರಿ, ಯಲ್ಲಪ್ಪ ಬೆಳವಟಗಿ, ರಾಮಲಿಂಗಪ್ಪ ಪೂಜಾರ, ಚಂದ್ರಶೇಖ ಬೆಳವಟಗಿ, ಜಗದೀಶ ವಡ್ಡರ ಇದ್ದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/01/2025 12:44 pm