ಹುಬ್ಬಳ್ಳಿ: ನೂರು ಇನ್ನೂರು ದುಡಿದು ಮನೆ ನಡೆಸುವುದೇ ಸವಾಲಿನ ಸಂಗತಿ. ಅದರಲ್ಲೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದು ಶ್ರಮಿಕ ವರ್ಗದ ಜನರಿಗೆ ಗಗನಕುಸುಮ. ಈ ನಿಟ್ಟಿನಲ್ಲಿ ಶ್ರಮಿಕ ವರ್ಗದ ಜನರ ಕಲ್ಯಾಣಕ್ಕಾಗಿ ಹಾಗೂ ಕಾರ್ಮಿಕರ ಮಕ್ಕಳ ಶಿಕ್ಷಣದಲ್ಲಿ ಹೊಸ ಕ್ರಾಂತಿ ಮಾಡಲು ಕಾರ್ಮಿಕ ಸಚಿವ ಸಂತೋಷ ಲಾಡ್ ಮಹತ್ವದ ಮೈಲಿಗಲ್ಲನ್ನು ಸೃಷ್ಟಿಸಿದ್ದಾರೆ. ಅಷ್ಟಕ್ಕೂ ಏನಿದು ಕಾರ್ಮಿಕ ಇಲಾಖೆಯ ಕಾರ್ಯ ಅಂತೀರಾ ತೋರಸ್ತಿವಿ ನೋಡಿ..
ಕಾರ್ಮಿಕ ಕಾರ್ಡ್ ವಿದ್ಯಾರ್ಥಿವೇತನವನ್ನು ಕರ್ನಾಟಕ ಸರ್ಕಾರದ ಕಾರ್ಮಿಕ ಕಲ್ಯಾಣ ಮಂಡಳಿಯು ಕರ್ನಾಟಕ ರಾಜ್ಯದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ಶಿಕ್ಷಣವನ್ನು ಬೆಂಬಲಿಸಲು ಪರಿಚಯಿಸಿದೆ. ಹೌದು. ಕಾರ್ಮಿಕ ಕಲ್ಯಾಣ ಮಂಡಳಿಯ ಶಿಕ್ಷಣ ಸಹಾಯ ಕಾರ್ಯಕ್ರಮದ ಅಡಿಯಲ್ಲಿ ಅರ್ಹ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸುವವರೆಗೆ ಅವರ ಶೈಕ್ಷಣಿಕ ಮಟ್ಟವನ್ನು ಅವಲಂಬಿಸಿ 1100 ರೂ.ರಿಂದ 11,000 ರೂ.ವರೆಗಿನ ವಾರ್ಷಿಕ ವಿದ್ಯಾರ್ಥಿವೇತನವನ್ನು ಪಡೆಯುತ್ತಾರೆ. ಅರ್ಹತಾ ಮಾನದಂಡಗಳು, ಅಗತ್ಯ ದಾಖಲೆಗಳು ಮತ್ತು ಅಪ್ಲಿಕೇಶನ್ ಪ್ರಕ್ರಿಯೆಯ ಮೂಲಕ ಲಾಭವನ್ನು ಪಡೆಯಬಹುದಾಗಿದ್ದು, ಕಾರ್ಮಿಕರ ಮಕ್ಕಳ ಭವಿಷ್ಯದ ಕನಸು ಈಗ ಸಾಕಾರಗೊಳ್ಳಲಿದೆ.
ಇನ್ನು ಸಚಿವ ಸಂತೋಷ ಲಾಡ್ ಅವರು ಕಾರ್ಮಿಕರ ಮಕ್ಕಳು ಕಾರ್ಮಿಕರಾಗಿಯೇ ಉಳಿಯಬಾರದು. ಅವರು ಕೂಡ ಸಾಂವಿಧಾನಿಕವಾಗಿ ಸರ್ಕಾರಿ ನೌಕರಿ ಹಾಗೂ ಉನ್ನತಮಟ್ಟದ ಗೌರವ ಅಲಂಕರಿಸುವಂತಾಗಬೇಕು ಎಂಬುವಂತ ಸದುದ್ದೇಶದಿಂದ ಹಲವಾರು ಯೋಜನೆ ಜಾರಿಗೆ ತಂದಿದ್ದಾರೆ. ಮನೆಗೊಂದು ಮರ ಊರಿಗೊಂದ ವನ ಎಂಬುವಂತೇ ಕಾರ್ಮಿಕರ ಕುಟುಂಬದಲ್ಲಿ ಮಕ್ಕಳು ವಿದ್ಯಾವಂತರಾದರೇ ಬದುಕು ಬಂಗಾರವಾಗುತ್ತದೇ. ಈ ನಿಟ್ಟಿನಲ್ಲಿ ಸಚಿವ ಸಂತೋಷ ಲಾಡ್ ಅವರು ಕಾರ್ಮಿಕರ ಮಕ್ಕಳ ಶೈಕ್ಷಣಿಕ ಬದುಕಿಗೆ ಹೊಸ ಅಧ್ಯಾಯ ಬರೆದಿದ್ದಾರೆ.
ಒಟ್ಟಿನಲ್ಲಿ ಕಾರ್ಮಿಕರ ಕಲ್ಯಾಣದ ಜೊತೆಗೆ ಕಾರ್ಮಿಕರ ಮಕ್ಕಳ ಬದುಕನ್ನು ಹಸನಾಗಿಸುವ ಮಹತ್ವದ ಕಾರ್ಯವನ್ನು ಕಾರ್ಮಿಕ ಇಲಾಖೆಯು ಮಾಡುತ್ತಿರುವುದು ನಿಜಕ್ಕೂ ವಿಶೇಷವಾಗಿದೆ. ಅಲ್ಲದೇ ಸಚಿವರ ಶಿಕ್ಷಣ ಪ್ರೇಮ ಹಾಗೂ ಕಾರ್ಮಿಕರ ಮೇಲಿನ ಕಾಳಜಿ ಈಗ ಮಹತ್ವದ ಕಾರ್ಯಕ್ಕೆ ಮುನ್ನುಡಿ ಬರೆಯುವಂತಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
29/01/2025 11:10 pm