", "articleSection": "Infrastructure,Government", "image": { "@type": "ImageObject", "url": "https://prod.cdn.publicnext.com/s3fs-public/462628-1738163175-ladd.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Mallesh Suranagi" }, "editor": { "@type": "Person", "name": "Manjunath.TV9" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ರಾಜ್ಯದಲ್ಲಿನ ಕಟ್ಟಡ, ನಿರ್ಮಾಣ ಕಾರ್ಮಿಕರಿಗೆ ಸುಧಾರಿತ ಸೇವೆ, ನೆರವು, ಸವಲತ್ತು ಕಲ್ಪಿಸುವ ಸಂಬಂಧ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ...Read more" } ", "keywords": "Hubballi, labor department, worker welfare, labor ministry, employment opportunities, job security, social security, labor laws, worker protection, ministry of labor and employment, labor rights, construction workers, unorganized workers, labor union, worker benefits, employment news, job market, career development, skill development, vocational training, labor market, employment exchange, job portal, career counseling, labor commissioner, labor court, industrial disputes, worker safety, health insurance, retirement benefits, pension scheme, labor welfare, social welfare, government schemes, labor policies, employment policies, job creation, economic growth, labor force, demographic dividend, skill India, make in India, startup India, labor reforms, industrial relations, collective bargaining, labor legislation, labor codes, workers rights, labor movement, trade union, labor leader, labor organization, international labor organization, ILO, labor standards, labor conventions, labor recommendations, labor statistics, labor research, labor studies, labor economics, labor law, labor policy, labor practice, labor management, labor relations, human resource management, HRM, labor market analysis, labor market research, employment trends, job market trends, career trends, skill trends, labor trends, future of work, labor future, workforce development, talent management, labor productivity, labor efficiency, labor effectiveness, labor quality, labor compliance, labor governance, labor leadership, labor history, labor culture, labor society, labor community, labor development, labor progress, labor reform, labor change, labor innovation, labor technology, labor automation, labor artificial intelligence, labor robotics, labor transformation,Hubballi-Dharwad,Infrastructure,Government", "url": "https://publicnext.com/node" }
ರಾಜ್ಯದಲ್ಲಿನ ಕಟ್ಟಡ, ನಿರ್ಮಾಣ ಕಾರ್ಮಿಕರಿಗೆ ಸುಧಾರಿತ ಸೇವೆ, ನೆರವು, ಸವಲತ್ತು ಕಲ್ಪಿಸುವ ಸಂಬಂಧ 'ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳ (ಉದ್ಯೋಗ ಮತ್ತು ಸೇವಾ ಷರತ್ತುಗಳು) ನಿಯಮ'ಗಳಿಗೆ ತಿದ್ದುಪಡಿ ಮಾಡಿ ಕರ್ನಾಟಕ ರಾಜ್ಯ ಸರಕಾರ ಮಹತ್ವದ ಕಾರ್ಯವನ್ನು ಮಾಡಿದೆ.
ಸಚಿವ ಸಂತೋಷ ಲಾಡ್ ದೂರದೃಷ್ಟಿಯಿಂದ ಕಾರ್ಮಿಕರ ಬದುಕು ಕಲ್ಯಾಣವಾಗಿದ್ದು, ಶ್ರಮಿಕ ಬಂಧು ಸಂತೋಷ ಲಾಡ್ ನೇತೃತ್ವದಲ್ಲಿ ಬಹುದೊಡ್ಡ ಕ್ರಾಂತಿಯಾಗಿದೆ.
ಕಟ್ಟಡ, ನಿರ್ಮಾಣ ಕಾರ್ಮಿಕರಿಗೆ ನೀಡುವ ಸಹಾಯಧನ, ಸಾಮಾಜಿಕ ಭದ್ರತೆ ಯೋಜನೆಗಳ ಮೊತ್ತ ಏರಿಕೆಯಾಗಿದೆ. ಮುಖ್ಯವಾಗಿ ಕಾರ್ಮಿಕರಿಗೆ ಪಿಂಚಣಿ, ಹೆರಿಗೆ ಸೌಲಭ್ಯದಡಿ ನೀಡಲಾಗುವ ಸಹಾಯಧನ, ಗೃಹ ಭಾಗ್ಯ ಸೌಲಭ್ಯದಡಿ ನೋಂದಾಯಿತ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ಸಾಲ ನೀಡಲು ನಿಯಮಗಳನ್ನು ಸಡಿಲಿಸಲಾಗಿದೆ.
ಹೌದು.. ಭದ್ರತೆಯೇ ಇಲ್ಲದೇ ಇರುವ ಅದೆಷ್ಟೋ ಕುಟುಂಬಕ್ಕೆ ಹಾಗೂ ಕಾರ್ಮಿಕರ ಅವಲಂಬಿತರಿಗೆ ಪಿಂಚಣಿ ಹಾಗೂ ಇನ್ನಿತರ ಆರ್ಥಿಕ ನೆರವು ನೀಡುವ ಮಹತ್ವದ ಕಾರ್ಯಕ್ರಮಕ್ಕೆ ಸಚಿವ ಸಂತೋಷ ಲಾಡ್ ಮುನ್ನುಡಿ ಬರೆದಿದ್ದಾರೆ. ನೋಂದಾಯಿತ ಕಟ್ಟಡ ಕಾರ್ಮಿಕರ ಬದುಕಿನಲ್ಲಿ ಹೊಸ ಅಧ್ಯಾಯ ರೂಪಿಸಿರುವ ಸಚಿವ ಸಂತೋಷ ಲಾಡ್ ಅವರು, ಕಾರ್ಮಿಕರ ಕಲ್ಯಾಣದ ಹಿತದೃಷ್ಟಿಯಿಂದ ಪಿಂಚಣಿ ಸೌಲಭ್ಯಗಳನ್ನು ಜಾರಿಗೆ ತಂದಿದ್ದು, ಮಹತ್ವದ ಮುನ್ನುಡಿ ಬರೆದಿದ್ದಾರೆ.
ಪಿಂಚಣಿಯ ಭದ್ರತೆ ಎಂಬುವುದು ನಿಜಕ್ಕೂ ಕಾರ್ಮಿಕ ವಲಯಕ್ಕೆ ಒಂದು ವರವಾಗಿದೆ. ಈ ನಿಟ್ಟಿನಲ್ಲಿ ಸಚಿವ ಸಂತೋಷ ಲಾಡ್ ಅವರ ಕಾರ್ಯವೈಖರಿಯಿಂದ ಅದೆಷ್ಟೋ ಜನರು ದುಡಿಯುವ ಶಕ್ತಿ ಕಳೆದುಕೊಂಡಾಗಲೂ ಜೀವನ ನಡೆಸುವ ಬಹುದೊಡ್ಡ ಸಾಧನೆಯ ಪ್ರತೀಕವಾಗಿದೆ.
ಒಟ್ಟಿನಲ್ಲಿ ಸಂತೋಷ ಲಾಡ್ ಅವರು ಕಾರ್ಮಿಕ ಸಚಿವರಾಗಿ ಕಾರ್ಮಿಕ ವಲಯದ ಜನರ ಅಭಿವೃದ್ಧಿಗೆ ಬಹುದೊಡ್ಡ ಅಡಿಪಾಯ ಹಾಕಿದ್ದಾರೆ. ಜನರ ಪರವಾಗಿ ಹಲವಾರು ಯೋಜನೆ ತಂದಿರುವ ಜನನಾಯಕನಿಗೆ ಕಾರ್ಮಿಕ ವಲಯ ಜೈಕಾರ ಹಾಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
29/01/2025 08:36 pm