", "articleSection": "Infrastructure,Government", "image": { "@type": "ImageObject", "url": "https://prod.cdn.publicnext.com/s3fs-public/462628-1738160611-lad.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Mallesh Suranagi" }, "editor": { "@type": "Person", "name": "Manjunath.TV9" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ನಮ್ಮೆಲ್ಲರ ಕನಸಿನ ಮನೆಯನ್ನು ಕಟ್ಟುವ ಶ್ರಮಿಕ ವರ್ಗವೇ ಕಟ್ಟಡ ಕಾರ್ಮಿಕರು‌. ಅದೆಷ್ಟೋ ಕನಸಿನ ಮನೆ ನಿರ್ಮಾಣ ಮಾಡಿದರೂ ಕೂಡ ಕನಸು ನನ...Read more" } ", "keywords": "Hubballi, Karnataka, India, construction workers, labor department, Santosh Lad, minister, workers welfare, building laborers, labor laws, worker safety, social security, labor rights, construction industry, Indian labor market, worker benefits, labor union, worker protection, ministry of labor, labor policies, worker empowerment,Hubballi-Dharwad,Infrastructure,Government", "url": "https://publicnext.com/node" } ಹುಬ್ಬಳ್ಳಿ: ಕಟ್ಟಡ ಕಾರ್ಮಿಕರ ಭವಿಷ್ಯದ ಕನಸು ಕಟ್ಟಿದ ಸರದಾರ - ಶ್ರಮಿಕರಿಗೆ ಸಚಿವ ಸಂತೋಷ ಲಾಡ್ ಹೆಮ್ಮೆಯ ನೇತಾರ..!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಟ್ಟಡ ಕಾರ್ಮಿಕರ ಭವಿಷ್ಯದ ಕನಸು ಕಟ್ಟಿದ ಸರದಾರ - ಶ್ರಮಿಕರಿಗೆ ಸಚಿವ ಸಂತೋಷ ಲಾಡ್ ಹೆಮ್ಮೆಯ ನೇತಾರ..!

ಹುಬ್ಬಳ್ಳಿ: ನಮ್ಮೆಲ್ಲರ ಕನಸಿನ ಮನೆಯನ್ನು ಕಟ್ಟುವ ಶ್ರಮಿಕ ವರ್ಗವೇ ಕಟ್ಟಡ ಕಾರ್ಮಿಕರು‌. ಅದೆಷ್ಟೋ ಕನಸಿನ ಮನೆ ನಿರ್ಮಾಣ ಮಾಡಿದರೂ ಕೂಡ ಕನಸು ನನಸಾಗದೇ ಉಳಿದಿರುವ ಲಕ್ಷಾಂತರ ಕಾರ್ಮಿಕರ ಕನಸನ್ನು ನನಸಾಗಿಸಲು ಹೊರಟವರೇ ಸಚಿವ ಸಂತೋಷ್ ಲಾಡ್. ಹಿಡಿದ ಕಾರ್ಯವನ್ನು ಕೈ ಬಿಡದೇ ನಡೆಸುವ ನೇತಾರ, ಬಡವರ ಪಾಲಿಗೆ ಆಗಿದ್ದಾರೆ ಹಮ್ಮೀರ.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಿಗಾಗಿ ಊರಿಂದ ಊರಿಗೆ ವಲಸೆ ಬರುವ ಕಾರ್ಮಿಕರಿಗೆ ಸರಿಯಾದ ವಸತಿ ಸೌಕರ್ಯಗಳಿಲ್ಲದೇ ಪರದಾಡು ಪರಿಸ್ಥಿತಿ ಇತ್ತು. ಶ್ರಮಿಕರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಸ್ಥಳೀಯವಾಗಿ ಕಾರ್ಮಿಕರ ಸಮಸ್ಯೆ ಆಲಿಸಿದ ಸಚಿವ ಸಂತೋಷ ಲಾಡ್ ಕಟ್ಟಡ ಕಾರ್ಮಿಕರ ಭವಿಷ್ಯದ ಕನಸನ್ನು ಸಾಕಾರಗೊಳಿಸಲು ಕಂಕಣಬದ್ಧರಾಗಿದ್ದಾರೆ. ಹೌದು.. ಕಟ್ಟಡ ಕೆಲಸಕ್ಕೆ ವಲಸೆ ಬರುವ ಹಾಗೂ ಕಟ್ಟಡ ಕಾರ್ಮಿಕರಿಗೆ ಹಾಗೂ ಕಾರ್ಮಿಕ ವಲಯದ ಕಲ್ಯಾಣಕ್ಕಾಗಿ ತಾತ್ಕಾಲಿಕ ವಸತಿ ಸಮುಚ್ಛಯ ನಿರ್ಮಾಣಕ್ಕೆ ಹೊಸ ವೇಗ ನೀಡಿದ್ದಾರೆ.

ಇನ್ನೂ ಚಾಮರಾಜನಗರ ಜಿಲ್ಲೆಯ ಬುದನಕುಪ್ಪೆ ಎಲ್ಲಂಲ್ಲ ಕೈಗಾರಿಕಾ ಪ್ರದೇಶ ಹಾಗೂ ಕಲಬುರಗಿಯ ನಂದನೂರು, ಕಪನೂರು ಕೈಗಾರಿಕಾ ಪ್ರದೇಶದಲ್ಲಿ ತಾತ್ಕಾಲಿಕ ವಸತಿ ಸಮುಚ್ಛಯ ನಿರ್ಮಾಣಗೊಂಡಿದ್ದು, ಹಸ್ತಾಂತರ ಹಂತದಲ್ಲಿವೆ. ಸಾರ್ವಜನಿಕರ ಬದುಕಿನಲ್ಲಿ ಎಲ್ಲರಿಗೂ ನೆರಳನ್ನು ಕಲ್ಪಿಸುವ ಕಾರ್ಮಿಕರ ಕನಸನ್ನು ಭದ್ರಗೊಳಿಸಿ ನೆರಳು ನೀಡಿರುವ ಕೀರ್ತಿ ಸಂತೋಷ್ ಲಾಡ್ ಅವರಿಗೆ ಸಲ್ಲುತ್ತದೆ.

ಒಟ್ಟಿನಲ್ಲಿ ಕಾರ್ಮಿಕ ಇಲಾಖೆಗೆ ಸಚಿವ ಸಂತೋಷ ಲಾಡ್ ಅವರು, ಮಂತ್ರಿಯಾಗಿದ್ದೇ ತಡ ಸಮರೋಪಾದಿಯಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ಆಗಿರುವುದು ನಿಜಕ್ಕೂ ವಿಶೇಷವಾಗಿದೆ. ಹಿಡಿದ ಕಾರ್ಯವನ್ನು ಬಿಡದೇ ನಡೆಸುವ ಛಲಗಾರನ ಕಾರ್ಯಕ್ಕೆ ಶ್ರಮಿಕ ವರ್ಗ ಅಭಿನಂದನೆ ಸಲ್ಲಿಸಿದೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

29/01/2025 07:54 pm

Cinque Terre

60.3 K

Cinque Terre

5

ಸಂಬಂಧಿತ ಸುದ್ದಿ