", "articleSection": "Infrastructure,Government,Public News", "image": { "@type": "ImageObject", "url": "https://prod.cdn.publicnext.com/s3fs-public/421698-1738151299-V8~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Sridhar Pujar" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕುಂದಗೋಳ : ತಮ್ಮೂರಿಗೆ ನೂತನವಾಗಿ ಪ್ರಯಾಣ ಸೇವೆ ನೀಡಲು ಸರ್ಕಾರ ರಾಜ್ಯ ಸಾರಿಗೆ ನಿಗಮದಿಂದ ನೀಡಿದ ಬಸ್ಸಿಗೆ ಬೆಟದೂರು ಗ್ರಾಮಸ್ಥರು ಅದ್ದೂರಿ ಸ್ವ...Read more" } ", "keywords": ",Hubballi-Dharwad,Infrastructure,Government,Public-News", "url": "https://publicnext.com/node" }
ಕುಂದಗೋಳ : ತಮ್ಮೂರಿಗೆ ನೂತನವಾಗಿ ಪ್ರಯಾಣ ಸೇವೆ ನೀಡಲು ಸರ್ಕಾರ ರಾಜ್ಯ ಸಾರಿಗೆ ನಿಗಮದಿಂದ ನೀಡಿದ ಬಸ್ಸಿಗೆ ಬೆಟದೂರು ಗ್ರಾಮಸ್ಥರು ಅದ್ದೂರಿ ಸ್ವಾಗತ ಕೋರಿದ್ದಾರೆ.
ಹೌದು ! ಕುಂದಗೋಳ ತಾಲೂಕಿನ ಬೆಟದೂರು ಗ್ರಾಮದಿಂದ ನಿತ್ಯ ಹುಬ್ಬಳ್ಳಿಗೆ ಸೇವೆ ನೀಡಲು ಸಾರಿಗೆ ಇಲಾಖೆ ಬಸ್ಸೊಂದು ನೀಡಿದೆ.
ಈ ಬಸ್ಸನ್ನು ವಿಶೇಷವಾಗಿ ತಳಿರು ತೋರಣ, ಬಲೂನ್ ಕಟ್ಟಿ ಅಲಂಕರಿಸಿದ ಗ್ರಾಮಸ್ಥರು, ಪೂಜೆ ಸಲ್ಲಿಸಿ ರಿಬ್ಬನ್ ಕತ್ತರಿಸುವ ಮೂಲಕ ಬಸ್ಸನ್ನು ಪ್ರಯಾಣಕ್ಕೆ ಸ್ವಾಗತ ಕೋರಿದ್ದಾರೆ.
ಬೆಟದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಸರ್ವ ಸದಸ್ಯರು ಸೇರಿದಂತೆ ಗ್ರಾಮದ ಮುಖಂಡರು ಸೇರಿ ಸಾರ್ವಜನಿಕ ಆಸ್ತಿಯನ್ನು ನಮ್ಮದು ಎಂಬಂತೆ ಸ್ವಾಗತಿಸಿ ಪ್ರಯಾಣಕ್ಕೆ ಬಳಸುತ್ತಿದ್ದಾರೆ.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್,ಕುಂದಗೋಳ
Kshetra Samachara
29/01/2025 05:18 pm