", "articleSection": "Cultural Activity,Government", "image": { "@type": "ImageObject", "url": "https://prod.cdn.publicnext.com/s3fs-public/405356-1737769742-swa.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "MadhuKeshavSorab" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಸೊರಬ : ಗೋ ಸೇವಾ ಗತಿವಿಧಿ ಕರ್ನಾಟಕ, ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್ ನಿಂದ ಡಿಸೆಂಬರ್ 31ರಿಂದ ಮಾರ್ಚ್ 29ರ...Read more" } ", "keywords": "Nandi Rathayatra, Hindu Organizations, Welcoming Ceremonies, Religious Events, Karnataka Festivals, Gou Seva Gatividhi Karnataka, Radha Surabhi Gaumandir, Rastriya Gau Seva Sanstana Trust, Indian Culture, Hindu Traditions, Rath Yatra Celebrations,Shimoga,Cultural-Activity,Government", "url": "https://publicnext.com/node" }
ಸೊರಬ : ಗೋ ಸೇವಾ ಗತಿವಿಧಿ ಕರ್ನಾಟಕ, ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್ ನಿಂದ ಡಿಸೆಂಬರ್ 31ರಿಂದ ಮಾರ್ಚ್ 29ರ ವರೆಗೆ ರಾಜ್ಯಾದ್ಯಂತ ನಡೆಯಲಿರುವ ನಂದಿ ರಥಯಾತ್ರೆಯನ್ನು ಹಿಂದೂಪರ ಸಘಟನೆಗಳು ಶ್ರೀ ರಾಮಚಂದ್ರ ದೇವಸ್ಥಾನದ ಆವರಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಿದರು.
ನಂದಿ ರಥಯಾತ್ರೆಯ ಗೋವಿಗೆ ಹಣ್ಣು ಹಂಪಲು ನೀಡಿ ಶ್ರೀ ಕೃಷ್ಣನಿಗೆ ಪೂಜೆ ಸಲ್ಲಿಸಿ, ಮೆರವಣಿಗೆಯುದ್ದಕ್ಕೂ ಜೈ ಶ್ರೀ ರಾಮ್ ಹರ ಹರ ಮಹಾದೇವ ಘೋಷಣೆ ಮೂಲಕ ಶ್ರೀ ಕೃಷ್ಣ ದೇವರು ಮತ್ತು ಗೋವಿನ ರಥಯಾತ್ರೆಯನ್ನು ಪಟ್ಟಣದ ರಥಬೀದಿ ಮುಖೇನ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.
ನಂದಿ ರಥಯಾತ್ರೆಯು ವಿಷ ಮುಕ್ತ ಗಾಳಿ, ಮಣ್ಣು, ಆಹಾರ, ಪ್ರಕೃತಿ, ಪರಿಸರ ಸಂರಕ್ಷಣೆ, ಪಂಚಗವ್ಯ ಚಿಕಿತ್ಸೆ, ರೋಗಮುಕ್ತ ಭಾರತ, ಸಾಮೂಹಿಕ 1,11,108 ವಿಷ್ಣು ಸಹಸ್ರನಾಮ ಪಠಣ, ಒಂದು ಕೋಟಿ ಗೋಮಯ ದೀಪ ಬೆಳಗಿಸುವುದು, ನಂದಿ ಪೂಜೆ, ಗೋ ಕಥೆ, ಮನೆ ಮನೆಯಲ್ಲಿ ಗೋವು, ಗವ್ಯ ಉತ್ಪನ್ನ ಬಳಕೆ ಪ್ರಚಾರ, ದೇಸೀ ಗೋ ಮಾತೆಯ ಮಹಿಮೆ ಜನರಿಗೆ ತಿಳಿಸುವುದು, ದೇಸೀ ಗೋ ಮಾತೆ ಹಾಗೂ ಭೂ ಮಾತೆಗೆ ಇರುವ ಸಂಬಂಧ ಜನರಿಗೆ ತಿಳಿಸುವುದು, ಗೋ ಮಾತೆಗೆ ರಾಷ್ಟ್ರೀಯ ಮಾನ್ಯತೆ ದೊರಕಿಸುವುದು, ಸಹಜ ಕೃಷಿ ವಿಸ್ತರಣೆ, ಸ್ವದೇಶಿ/ಗವ್ಯ ಉತ್ಪನ್ನ ಬಳಕೆ, ದೇಸೀ ಬೀಜ ಸಂರಕ್ಷಣೆ, ಧರ್ಮ ಜಾಗೃತಿ, ಸಾಮಾಜಿಕ ಸಾಮರಸ್ಯ, ಗ್ರಾಮ ವಿಕಾಸ, ಭಾರತೀಯ ಕುಟುಂಬ ಪದ್ಧತಿ ಸಂರಕ್ಷಣೆ, ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವುದು, ಉದ್ಯೋಗ ಸೃಷ್ಟಿ, ಋಣಮುಕ್ತ ಭಾರತ, ಸಮೃದ್ಧ ಭಾರತ, ವಿಶ್ವಗುರು ಭಾರತದ ಉದ್ದೇಶ ಹೊಂದಿದೆ.
88 ದಿನಗಳ ಕಾಲ ನಡೆಯುತ್ತಿರುವ ಈ ರಥಯಾತ್ರೆಯಲ್ಲಿ 9 ಮಂದಿ ಕಾರ್ಯಕರ್ತರು ನಿರಂತರವಾಗಿ ಭಾಗವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸಾರ್ವಜನಿಕರು ಭಾಗವಹಿಸಿದರು.
PublicNext
25/01/2025 07:19 am