", "articleSection": "Politics,Government", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/400836_1738249843_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "VeereshChikkamangaluru" }, "editor": { "@type": "Person", "name": "9731141698" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿವಮೊಗ್ಗ : ನಕ್ಸಲ್ ಶರಣಾಗತಿ ಹಾಗೂ ಪುನರ್ವಸತಿ ಸಮಿತಿಯ ಶ್ರೀಪಾಲ್ ರವರ ಕೆಲಸವನ್ನು ಮೆಚ್ಚಿ ಅವರನ್ನು ಗೌರವಿಸುವ ಕಾರ್ಯಕ್ರಮವನ್ನು ಸೌಹಾರ್ದವೇ ...Read more" } ", "keywords": ""Naxal Surrender, Sripal Honored, Anti-Naxal Operations, Police Achievement, Naxalite Rehabilitation, Surrender Ceremony, Karnataka Police, Law and Order, Naxal Menace, Sripal Felicitation,Shimoga,Politics,Government", "url": "https://publicnext.com/node" } ಶಿವಮೊಗ್ಗ : ನಕ್ಸಲ್ ಶರಣಾಗತಿ ಶ್ರಮಿಸಿದ ಶ್ರೀಪಾಲ್ ಗೆ ಸನ್ಮಾನ - ಗುರುಮೂರ್ತಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ : ನಕ್ಸಲ್ ಶರಣಾಗತಿ ಶ್ರಮಿಸಿದ ಶ್ರೀಪಾಲ್ ಗೆ ಸನ್ಮಾನ - ಗುರುಮೂರ್ತಿ

ಶಿವಮೊಗ್ಗ : ನಕ್ಸಲ್ ಶರಣಾಗತಿ ಹಾಗೂ ಪುನರ್ವಸತಿ ಸಮಿತಿಯ ಶ್ರೀಪಾಲ್ ರವರ ಕೆಲಸವನ್ನು ಮೆಚ್ಚಿ ಅವರನ್ನು ಗೌರವಿಸುವ ಕಾರ್ಯಕ್ರಮವನ್ನು ಸೌಹಾರ್ದವೇ ಹಬ್ಬ ಬಳಗ ವತಿಯಿಂದ ಜನವರಿ 31 ರಂದು ಪತ್ರಿಕಾ ಭವನದಲ್ಲಿ ಸಂಜೆ 5:30 ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ರಾಜ್ಯ ಸಂಚಾಲಕ ಡಿ ಎಸ್ ಎಸ್ ಗುರುಮೂರ್ತಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಕ್ಸಲರ ನಿಯಂತ್ರಣಕ್ಕಾಗಿ ಸರ್ಕಾರವು ನಕ್ಸಲ್ ಶರಣಾಗತಿ ಹಾಗು ಪುನರ್ವಸತಿ ಎಂಬ ಸಮಿತಿಯನ್ನು ಜಾರಿಗೊಳಿಸಿತ್ತು. ಆ ಸಮಿತಿ ಮೂರು ಜನ ಸದಸ್ಯರನ್ನು ಒಳಗೊಂಡಿದ್ದು ಅದರಲ್ಲಿ ಕೆ.ಪಿ. ಶ್ರೀಪಾಲ್ ಕೂಡಾ ಒಬ್ಬರು. ಶಿವಮೊಗ್ಗದಲ್ಲಿ ಶಾಂತಿ- ಸೌಹಾರ್ದ ಹಾಗೂ ಸಂವಿಧಾನಾತ್ಮಕ ಆಶಯಗಳ ಸಮಾಜ ನಿರ್ಮಾಣ ಮಾಡಲು ನಗರದಲ್ಲಿ ಆಯೋಜನೆಗೊಂಡ ಶಾಂತಿ ನಡಿಗೆ, ಸೌಹಾರ್ದವೇ ಹಬ್ಬ ಎಂಬ ಇತ್ಯಾದಿ ಕಾರ್ಯಕ್ರಮಗಳಲ್ಲಿ ಶ್ರೀಪಾಲ್ ಸದಾ ಮುಂಚೂಣಿಯಲ್ಲಿ ಇದ್ದರು. ಈಗ ನಕ್ಸಲರನ್ನು ಸಂಧಿಸಿ, ಚರ್ಚಿಸಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಂತಹ ಕೆಲಸವನ್ನು ಶ್ರೀಪಾಲ್ ಮಾಡಿದ್ದಾರೆ. ಅವರ ತಂಡ ಮತ್ತು ಅವರು ಮಾಡಿದ ಅದ್ಭುತವಾದ, ಸಮಾಜಮುಖಿ, ಮಾನವೀಯ ಕೆಲಸಕ್ಕೆ ಗೌರವಿಸುವ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.

Edited By : PublicNext Desk
PublicNext

PublicNext

30/01/2025 08:40 pm

Cinque Terre

12.38 K

Cinque Terre

0

ಸಂಬಂಧಿತ ಸುದ್ದಿ