", "articleSection": "Politics,Government", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/400836_1738250134_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "VeereshChikkamangaluru" }, "editor": { "@type": "Person", "name": "9731141698" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿವಮೊಗ್ಗ : ಜಿಲ್ಲೆಯ ವಿವಿಧ ಜನನಿಬಿಡ ಸ್ಥಳಗಳಲ್ಲಿ ಆಗಾಗ್ಗೆ ಸಂಭವಿಸುತ್ತಿರುವ ವಾಹನ ಅಪಘಾತಗಳು, ಸಾವು-ನೋವುಗಳನ್ನು ನಿಯಂತ್ರಿಸಲು ಸಾರಿಗೆ, ಲೋ...Read more" } ", "keywords": "Shivamogga Accident, Raghavendra Warning, Senior Officials Alert, Road Safety Measures, Accident Prevention, Karnataka Road Accidents, Shivamogga News, Raghavendra Appeal, Safety Guidelines, Accident Investigation ¹,Shimoga,Politics,Government", "url": "https://publicnext.com/node" }
ಶಿವಮೊಗ್ಗ : ಜಿಲ್ಲೆಯ ವಿವಿಧ ಜನನಿಬಿಡ ಸ್ಥಳಗಳಲ್ಲಿ ಆಗಾಗ್ಗೆ ಸಂಭವಿಸುತ್ತಿರುವ ವಾಹನ ಅಪಘಾತಗಳು, ಸಾವು-ನೋವುಗಳನ್ನು ನಿಯಂತ್ರಿಸಲು ಸಾರಿಗೆ, ಲೋಕೋಪಯೋಗಿ ಸೇರಿದಂತೆ ಸಂಬಂಧಿಸಿದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ವಿಶೇಷ ಗಮನಹರಿಸುವಂತೆ ಸಂಸದ ಬಿ.ವೈ.ರಾಘವೇಂಧ್ರ ಅವರು ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸಾರಿಗೆ ಸುರಕ್ಷತಾ ಕ್ರಮಗಳ ಕುರಿತು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಪದೇಪದೇ ಆಕಸ್ಮಿಕ ಅನಾಹುತಗಳು ಸಂಭವಿಸುವ ಸ್ಥಳಗಳನ್ನು ಆಯಾ ತಾಲೂಕುಗಳ ಪೊಲೀಸ್‌ಠಾಣೆಗಳಿಂದ ಪಡೆದು, ಅದರ ನಿಯಂತ್ರಣಕ್ಕಾಗಿ ಕೈಗೊಳ್ಳಬಹುದಾದ ಸುರಕ್ಷತಾ ಕ್ರಮಗಳ ಕುರಿತು ಅಗತ್ಯವಿರುವ ಅನುದಾನ ಬಿಡುಗಡೆಗೊಳಿಸಲು ಕ್ರಿಯಾಯೋಜನೆಯನ್ನು ತಯಾರಿಸಿ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಕೇಂದ್ರ ಸಾರಿಗೆ ಮತ್ತು ರಸ್ತೆ ಮಂತ್ರಾಲಯದಿಂದ ಅಗತ್ಯವಿರುವ ಅನುದಾನವನ್ನು ಬಿಡುಗಡೆಗೊಳಸಲು ಯತ್ನಿಸಲಾಗುವುದು ಎಂದರು.
ದೇಶದ ಪ್ರತಿಯೊಬ್ಬ ಪ್ರಜೆಯೂ ಅಮೂಲ್ಯ ಆಸ್ತಿಯಾಗಿದ್ದು, ಯಾವುದೇ ವ್ಯಕ್ತಿ ಅಪಘಾತಗಳಿಂದ ಮರಣ ಹೊಂದಬಾರದು. ಆಕಸ್ಮಿಕ ಸಾವು ದೇಶಕ್ಕೂ ಅವರ ಅವಲಂಬಿತ ಕುಟುಂಬಕ್ಕೂ ಅತೀವ ನಷ್ಟ ಉಂಟುಮಾಡಲಿದೆ. ಆದ್ದರಿಂದ ಅಪಘಾತಗಳ ನಿಯಂತ್ರಣ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಆಶಯವೂ ಇದೇ ಆಗಿದೆ ಎಂದು ತಿಳಿಸಿದರು .
Kshetra Samachara
30/01/2025 08:45 pm