ಶಿವಮೊಗ್ಗ : ಮಲ್ಲಿಕಾರ್ಜುನ್ ಖರ್ಗೆ ಬರೀ ಕುಂಭಮೇಳದ ಆಚರಣೆ ಬಗ್ಗೆ ಹೇಳಿಕೆ ನೀಡಿಲ್ಲ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆ ಕುರಿತು ಶಿವಮೊಗ್ಗದಲ್ಲಿ ಮಾತನಾಡಿದ ಅವರು ಖರ್ಗೆ ಹೇಳಿಕೆಯಿಂದ ಕೇಂದ್ರ ಸರ್ಕಾರ ಜನರ ಕಣ್ಣೊರೆಸುವ ಕೆಲಸ ಮಾಡುತ್ತಿದೆ. ಡಾಲರ್ ಮುಂದೆ ಭಾರತದ ರೂಪಾಯಿ ಕುಸಿತ ಆಗುತ್ತಿದೆ, ಈ ಅರ್ಥದಲ್ಲಿ ಖರ್ಗೆ ಅವರು ಮಾತನಾಡಿದ್ದಾರೆ.
ಆದರೆ ಬಿಜೆಪಿಯವರಿಗೆ ಇದೆಲ್ಲ ಕಾಣುವುದಿಲ್ಲ ಎಂದರು. ಇನ್ನು ಕುಂಭಮೇಳದಲ್ಲಿ ಬೆಳಗಾವಿಯ ನಾಲ್ವರು ಮೃತಪಟ್ಟಿರುವ ಬಗ್ಗೆ ಘಟನೆಯ ಸತ್ಯಾಸತ್ಯತೆ ತಿಳಿದುಕೊಂಡು ಸರ್ಕಾರ ನೆರವು ನೀಡಲಿದೆ ಎಂದರು.
PublicNext
30/01/2025 07:56 pm