", "articleSection": "Infrastructure", "image": { "@type": "ImageObject", "url": "https://prod.cdn.publicnext.com/s3fs-public/286525-1738207097-WhatsApp-Image-2025-01-30-at-8.48.09-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "JameelSagar" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಸಾಗರ: ಶಿವಮೊಗ್ಗ ಜಿಲ್ಲೆಯ ಸಾಗರ ನಗರಸಭೆ ವ್ಯಾಪ್ತಿಯ 31ನೇ ವಾರ್ಡಿನ ಜನರ ಸಮಸ್ಯೆ ಕೇಳುವವರು ಯಾರು ಇಲ್ಲದಂತಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ ಒಟ...Read more" } ", "keywords": "Sagara, Poor Road Conditions, Ward 31, Public Grievance, Karnataka News, Sagara News, Civic Issues, Infrastructure Development, Citizen Concerns.,Shimoga,Infrastructure", "url": "https://publicnext.com/node" }
ಸಾಗರ: ಶಿವಮೊಗ್ಗ ಜಿಲ್ಲೆಯ ಸಾಗರ ನಗರಸಭೆ ವ್ಯಾಪ್ತಿಯ 31ನೇ ವಾರ್ಡಿನ ಜನರ ಸಮಸ್ಯೆ ಕೇಳುವವರು ಯಾರು ಇಲ್ಲದಂತಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 31 ವಾರ್ಡ್ ಗಳು ಇದ್ದು ಅದರಲ್ಲೂ ಸಹ 31ನೇ ವಾರ್ಡ್ ದೊಡ್ಡ ವಾರ್ಡ್ ಆಗಿದೆ. ಈ ವಾರ್ಡಿನ ಜನರ ಸಮಸ್ಯೆ ಒಂದಾ ಎರಡಾ, ಚರಂಡಿಗಳು ಸ್ವಚ್ಛತೆ ಇಲ್ಲದೇ ಗಬ್ಬು ನಾರುತ್ತಿವೆ. 13 ವರ್ಷಗಳ ನಂತರ ರಸ್ತೆ ಮಾಡಿದ್ರೂ ಅದು ಕೂಡ ಕಳಪೆ ಕಾಮಗಾರಿಯಾಗಿದೆ.
ಚರಂಡಿಯಲ್ಲಿ ನಿಂತಿರುವ ಗಬ್ಬು ನಾರುತ್ತಿರುವ ನೀರಿನಿಂದ ಅನೇಕ ಕಾಯಿಲೆಗಳು ಬರುವ ಸಾಧ್ಯತೆಗಳು ಹೆಚ್ಚು ಕಂಡು ಬರುತ್ತಿದೆ. 13 ವರ್ಷಗಳ ನಂತರ ಮಾಡಿರುವ ರಸ್ತೆಯಲ್ಲಿ ವಾಹನ ನಿಲ್ಲಿಸಿದ್ರೆ ಅಲ್ಲಿ ಡಾಂಬರ್ ಕಿತ್ತು ಬರುತ್ತಿದೆ. ಇನ್ನು ಒಂದು ಕಡೆ ಚರಂಡಿ ಇದ್ದರೆ ಮತ್ತೊಂದು ಕಡೆ ಚರಂಡಿನೇ ಇಲ್ಲ. ಮಳೆ ಬಂತು ಎಂದರೆ ಮಳೆ ನೀರು ಎಲ್ಲ ಮನೆ ಒಳಗೆ ಬರುತ್ತಿದೆ. ನಮ್ಮ ಗೋಳು ಕೇಳುವವರು ಯಾರು ಇಲ್ಲ ಎಂದು ಹೇಳುತ್ತಾರೆ ಸ್ಥಳೀಯರು.
ಇನ್ನು ಇಲ್ಲಿನ ಸದಸ್ಯರು ಇದ್ದರೂ ಇಲ್ಲದಂತಾಗಿದೆ. ಅಮಾವಾಸ್ಯೆಗೆ ಒಮ್ಮೆ ಕಾಣಿಸುವ ಸದಸ್ಯರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.ತಾಲೂಕಿನಲ್ಲಿ ಜಾಂಡೀಸ್ ವೈರಾಣು ಸಂಖ್ಯೆ ಹೆಚ್ಚಾಗುತ್ತಿದ್ದು ಆದಷ್ಟು ಬೇಗ ನಗರಸಭಾ ಸದಸ್ಯರಾಗಿರುವ ಶಬೀನಾ ತನ್ವೀರ್ ಈ ಸಮಸ್ಯೆಯನ್ನು ತಕ್ಷಣ ಸರಿಪಡಿಸಿ ಕೊಡಬೇಕು ಎನ್ನುವುದೇ ಸ್ಥಳೀಯರ ಪರವಾಗಿ ಪಬ್ಲಿಕ್ ನೆಕ್ಸ್ಟ್ ಆಶಯವಾಗಿದೆ.
ವರದಿ: ಜಮೀಲ್ ಸಾಗರ್, ಪಬ್ಲಿಕ್ ನೆಕ್ಸ್ಟ್, ಸಾಗರ
PublicNext
30/01/2025 08:48 am