", "articleSection": "Politics,Government", "image": { "@type": "ImageObject", "url": "https://prod.cdn.publicnext.com/s3fs-public/462628-1738258546-WhatsApp-Image-2025-01-30-at-11.00.34-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "VeereshShimogga" }, "editor": { "@type": "Person", "name": "Manjunath.TV9" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿವಮೊಗ್ಗ : ವಿಮಾನ ನಿಲ್ದಾಣದ ನಿರ್ವಹಣೆ ಕುರಿತು ಪ್ರಮುಖ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಸದ್ಯ ಸಾಧಕ ಬಾಧಕದ ಕುರಿತು ರಾಜ್ಯ ಸರ್ಕಾರ ಗಂಭೀರ ಚಿ...Read more" } ", "keywords": "Shivamogga airport, Karnataka government, MB Patil, airport development, infrastructure growth, aviation news, Indian airports, airport operations, maintenance, Shivamogga news, Karnataka news, Indian news, airport connectivity, air travel, transportation, tourism, economic growth, infrastructure development, government initiatives, MB Patil statement, Shivamogga airport updates, Karnataka government plans, airport expansion, aviation industry, Indian aviation, airport management, ,Shimoga,Politics,Government", "url": "https://publicnext.com/node" } ಶಿವಮೊಗ್ಗ: ವಿಮಾನ ನಿಲ್ದಾಣ ಸಾಧಕ ಬಾಧಕ ಕುರಿತು ರಾಜ್ಯ ಸರ್ಕಾರದಿಂದ ಗಂಭೀರ ಚಿಂತನೆ - ಎಂ.ಬಿ.ಪಾಟೀಲ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ವಿಮಾನ ನಿಲ್ದಾಣ ಸಾಧಕ ಬಾಧಕ ಕುರಿತು ರಾಜ್ಯ ಸರ್ಕಾರದಿಂದ ಗಂಭೀರ ಚಿಂತನೆ - ಎಂ.ಬಿ.ಪಾಟೀಲ್

ಶಿವಮೊಗ್ಗ : ವಿಮಾನ ನಿಲ್ದಾಣದ ನಿರ್ವಹಣೆ ಕುರಿತು ಪ್ರಮುಖ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಸದ್ಯ ಸಾಧಕ ಬಾಧಕದ ಕುರಿತು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಬೃಹತ್‌ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್‌ ತಿಳಿಸಿದರು.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ವಿಮಾನ ನಿಲ್ದಾಣದ ನಿರ್ವಹಣೆಯನ್ನು ತಮಗೆ ವಹಿಸಬೇಕು ಎಂದು ವಿಮಾನ ಯಾನ ಪ್ರಾಧಿಕಾರ ಕೇಳಿದೆ. ಆದರೆ, ಹಾಗೆ ಹಸ್ತಾಂತರ ಮಾಡಿದರೆ ಇಲ್ಲಿನ ಜಮೀನು ಕೂಡ ವಿಮಾನ ಯಾನ ಪ್ರಾಧಿಕಾರಕ್ಕೆ ಸೇರಲಿದೆ. ಹಾಗಾಗಿ ಲೀಸ್‌ಗೆ ನೀಡುವ ಕುರಿತು ಯೋಜಿಸಲಾಗುತ್ತಿದೆ. ಇದರಿಂದ ಈ ಜಮೀನು ರಾಜ್ಯ ಸರ್ಕಾರದ ಆಸ್ತಿಯಾಗಿಯೇ ಉಳಿಯಲಿದೆ ಎಂದರು.

ಕಲಬುರಗಿಯಲ್ಲಿ 1500 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ವಿಮಾನ ನಿಲ್ದಾಣವನ್ನು ವಿಮಾನ ಯಾನ ಪ್ರಾಧಿಕಾರಕ್ಕೆ ವಹಿಸಲಾಗಿದೆ. ಜಮೀನು ಕೂಡ ಪ್ರಾಧಿಕಾರದ ಹೆಸರಿಗೆ ಆಗಲಿದೆ. ಆದ್ದರಿಂದ ಶಿವಮೊಗ್ಗ ವಿಮಾನ ನಿಲ್ದಾಣದ ನಿರ್ವಹಣೆ ಕುರಿತು ಮಹತ್ವದ ತೀರ್ಮಾನ ಕೈಗೊಳ್ಳಲಾಗುತ್ತಿದೆ. ಹಿಂದಿನ ಸರ್ಕಾರವೂ ಜಮೀನು ರಾಜ್ಯ ಸರ್ಕಾರದ ಬಳಿಯೇ ಉಳಿಯುವಂತೆ ನಿರ್ಣಯ ಕೈಗೊಂಡಿದೆ ಎಂದರು.

ಇನ್ನು, ಭೂಮಿ ಕಳೆದುಕೊಂಡವರಿಗೆ ವಸತಿ ಸಲುವಾಗಿ ಜಾಗ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಕೆಐಎಡಿಬಿಯಿಂದ 21 ಎಕರೆ ಜಾಗ ನೀಡುವ ಕುರಿತು ಸಕಾರಾತ್ಮಕ ನಿರ್ಣಯ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.

Edited By :
PublicNext

PublicNext

30/01/2025 11:06 pm

Cinque Terre

6.86 K

Cinque Terre

0

ಸಂಬಂಧಿತ ಸುದ್ದಿ