", "articleSection": "Crime,Human Stories", "image": { "@type": "ImageObject", "url": "https://prod.cdn.publicnext.com/s3fs-public/378325-1737727122-17.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Praveen Onkari" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಧಾರವಾಡ: ಪ್ರೀತಿ ಕುರುಡು ಪ್ರೇಮಿನೂ ಕುರುಡು ಎಂಬುದನ್ನು ಧಾರವಾಡದಲ್ಲಿ ನಡೆದ ಘಟನೆಯೊಂದು ಮತ್ತೊಮ್ಮೆ ಸಾಬೀತುಪಡಿಸಿದೆ. ಹೌದು! ಫೋಟೋದಲ್ಲಿ ಇ...Read more" } ", "keywords": "Dharwad News, Instagram Obsession, Bird Sacrificed, Pigeon Love, Social Media Addiction, Tragic Incident, Dharwad City, Karnataka News, Instagram Influence, Youth Obsession.,Hubballi-Dharwad,Crime,Human-Stories", "url": "https://publicnext.com/node" }
ಧಾರವಾಡ: ಪ್ರೀತಿ ಕುರುಡು ಪ್ರೇಮಿನೂ ಕುರುಡು ಎಂಬುದನ್ನು ಧಾರವಾಡದಲ್ಲಿ ನಡೆದ ಘಟನೆಯೊಂದು ಮತ್ತೊಮ್ಮೆ ಸಾಬೀತುಪಡಿಸಿದೆ.
ಹೌದು! ಫೋಟೋದಲ್ಲಿ ಇಷ್ಟೊಂದು ಅಂದವಾಗಿ ಪೋಸ್ ಕೊಟ್ಟಿರುವ ಈಕೆಯ ಹೆಸರು ಶ್ವೇತಾ ಗುಡದಾಪುರ. ವಯಸ್ಸು ಈಗಷ್ಟೇ 24 ವರ್ಷ. ಮೂಲತಃ ಗಜೇಂದ್ರಗಡದವಳಾದ ಈಕೆಯನ್ನು ರಾಮದುರ್ಗ ಮೂಲದ ಯುವಕ ವಿಶ್ವನಾಥನ ಜೊತೆ ಕಳೆದ ನಾಲ್ಕೈದು ವರ್ಷಗಳ ಹಿಂದಷ್ಟೇ ಮದುವೆ ಮಾಡಿಕೊಡಲಾಗಿತ್ತು. ಈ ದಂಪತಿ ಮಧ್ಯೆ ಬಿರುಕು ತಂದಿಟ್ಟಿದ್ದೇ ಇನ್‌ಸ್ಟಾಗ್ರಾಂ ಪ್ರೀತಿ. ಹೌದು! ಮದುವೆಯಾದ ಬಳಿಕವೂ ಶ್ವೇತಾ ಇನ್‌ಸ್ಟಾಗ್ರಾಂ ಪ್ರೀತಿಗೆ ಮರುಳಾಗಿದ್ದಳು. ಧಾರವಾಡ ಮೂಲದ ಯುವಕನೊಬ್ಬನ ಜೊತೆ ಇನ್‌ಸ್ಟಾಗ್ರಾಂನಲ್ಲೇ ಪ್ರೀತಿಯ ಏಣಿ ಏರಿದ್ದ ಈ ಶ್ವೇತಾ ಈಗ ನೇಣು ಕುಣಿಕೆಯನ್ನೇ ಏರಿದ್ದಾಳೆ.
ಇನ್‌ಸ್ಟಾಗ್ರಾಂ ಪ್ರಿಯಕರನನ್ನು ನಂಬಿ ಗಂಡನಿಗೂ ಗೊತ್ತಾಗದಂತೆ ಮನೆ ಬಿಟ್ಟು ಧಾರವಾಡಕ್ಕೆ ಹೊರಟೇ ಬಂದಿದ್ದ ಶ್ವೇತಾ, ಕಳೆದ ಒಂದೂವರೆ ವರ್ಷದಿಂದ ಗಂಡನನ್ನು ಬಿಟ್ಟು ಪ್ರಿಯಕರನೊಂದಿಗೆ ಧಾರವಾಡದಲ್ಲೇ ವಾಸವಾಗಿದ್ದಳು. ಧಾರವಾಡದಲ್ಲಿದ್ದುಕೊಂಡೇ ತನ್ನ ಗಂಡನಿಗೆ ವಿಚ್ಛೇದನ ನೋಟಿಸ್ ಕೂಡ ಕಳುಹಿಸಿದ್ದಳು. ಇಷ್ಟಕ್ಕೂ ಪತಿ-ಪತ್ನಿ ಮಧ್ಯೆ ಬಿರುಕು ತಂದಿಟ್ಟು ಶ್ವೇತಾಳ ತಲೆ ಕೆಡಿಸಿದ ಆ ಯುವಕ ಯಾರು? ಆತ ಏನೆಲ್ಲ ಸಮಸ್ಯೆ ಮಾಡಿದ್ದ ಅನ್ನೋದನ್ನ ಸ್ವತಃ ಶ್ವೇತಾಳ ತಾಯಿಯೇ ಹೇಳುತ್ತಾಳೆ ಕೇಳಿ.
ಕೇಳಿದ್ರಲ್ಲ. ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದ ಯುವಕನೋರ್ವ ಶ್ವೇತಾಳನ್ನು ಪ್ರೀತಿ, ಪ್ರೇಮ ಎಂದು ತಲೆ ಕೆಡಿಸಿ ಗಂಡನಿಂದ ದೂರ ಮಾಡಿದ್ದ. ಆಕೆಯನ್ನು ಕರೆದುಕೊಂಡು ಬಂದು ಶ್ರೀನಗರ ಬಡಾವಣೆಯ ಬಾಡಿಗೆ ಮನೆಯೊಂದರಲ್ಲಿ ಇಟ್ಟಿದ್ದ. ಆಕೆಯನ್ನು ಮದುವೆಯಾಗುವುದಾಗಿ ಹೇಳಿ ಮದುವೆಯನ್ನೂ ಮಾಡಿಕೊಂಡಿರಲಿಲ್ಲ. ತನ್ನ ಪತ್ನಿಯನ್ನು ಕರೆದುಕೊಂಡು ಹೋಗಲು ಮೊದಲ ಪತಿ ವಿಶ್ವನಾಥ ಹಾಗೂ ಶ್ವೇತಾಳ ಪಾಲಕರು ಬಂದಾಗ ಅವರಿಗೆ ಧಮ್ಕಿ ಹಾಕಿ ವಾಪಸ್ ಕಳುಹಿಸಿದ್ದನಂತೆ. ಇಷ್ಟೆಲ್ಲ ಬೆಳವಣಿಗೆ ನಂತರ ಇದೀಗ ಶ್ವೇತಾ ತಾನಿದ್ದ ಬಾಡಿಗೆ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ. ತನ್ನ ಪತ್ನಿ ನೇಣಿಗೆ ಶರಣಾಗಿದ್ದನ್ನು ಕಂಡು ಪತಿ ವಿಶ್ವನಾಥ ಮಮ್ಮಲ ಮರುಗಿದ್ದಾನೆ.
ಶ್ವೇತಾಳ ಪ್ರಿಯಕರ ಆಕೆಯನ್ನು ಧಾರವಾಡದ ಬಾಡಿಗೆ ಮನೆಯಲ್ಲಿಟ್ಟು ಆಕೆಯ ಖರ್ಚು, ವೆಚ್ಚ ನೋಡಿಕೊಂಡಿದ್ದ. ಆದರೆ, ಇವರಿಬ್ಬರ ಮಧ್ಯೆ ಅದೇನು ಕಲಹ ಉಂಟಾಗಿದೆಯೋ ಗೊತ್ತಿಲ್ಲ. ಶ್ವೇತಾ ಮಾತ್ರ ಇನ್‌ಸ್ಟಾಗ್ರಾಂ ಪ್ರೀತಿ ನಂಬಿ ನೇಣಿಗೆ ಕೊರೊಳೊಡ್ಡಿದ್ದಾಳೆ. ತನ್ನ ಮಗಳು ನೇಣಿಗೆ ಕೊರೊಳೊಡ್ಡಿದ್ದನ್ನು ಕಂಡು ಆಕೆಯ ಪಾಲಕರು ಹಾಗೂ ಪೋಷಕರು ಗೋಳಾಡುತ್ತಿದ್ದ ದೃಶ್ಯ ಕರುಳು ಹಿಂಡುವಂತಿತ್ತು. ಇನ್‌ಸ್ಟಾಗ್ರಾಂ ಪ್ರೀತಿಗೆ ಮರುಳಾಗಿ ಕೊನೆಗೆ ಗಂಡನೂ ಇಲ್ಲ ಪ್ರಿಯಕರನೂ ಇಲ್ಲದೇ ಶ್ವೇತಾ ಕುರುಡು ಪ್ರೀತಿಗೆ ಬಲಿಯಾಗಿದ್ದಾಳೆ. ಆಕೆಯ ಪಾಲಕರು ಇದೀಗ ಧಾರವಾಡ ಉಪನಗರ ಠಾಣೆಯಲ್ಲಿ ಶಿವಳ್ಳಿ ಮೂಲದ ಯುವಕನ ವಿರುದ್ಧ ದೂರು ದಾಖಲಿಸಿದ್ದಾರೆ.
-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
24/01/2025 07:28 pm