ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಕ್ರೋ ಫೈನಾನ್ಸ್‌ದಿಂದ ಆತ್ಮಹತ್ಯೆ ಜೊತೆಗೆ ಮಹಿಳೆಯರು ಮಾಂಗಲ್ಯ ಕಳೆದುಕೊಳ್ಳುತ್ತಿದ್ದಾರೆ : ಸರ್ಕಾರದ ವಿರುದ್ಧ ಕಿಡಿ ಕಾರಿದ ಬೊಮ್ಮಾಯಿ

ಹುಬ್ಬಳ್ಳಿ : ಮೈಕ್ರೋ ಫೈನಾನ್ಸ್ ಹಾವಳಿ ವಿಚಾರ, ಮೈಕ್ರೋ ಫೈನಾನ್ಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸರ್ಕಾರ ಇದಕ್ಕೆ ಕಡಿವಾಣ ಹಾಕುತ್ತಿಲ್ಲ. ಸಾಕಷ್ಟು ಜನರು ಕಿರುಕುಳದಿಂದ ಆತ್ಮಹತ್ಯ ಮಾಡಿಕೊಳ್ತಿದ್ದಾರೆ.‌ ಮಹಿಳೆಯರು ಮಾಂಗಲ್ಯ ಮಾರುತ್ತಿದ್ದಾರೆಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಈ ಸರ್ಕಾರ ಒಂದು ಕಡೆ ಮಹಿಳೆಯರ ಬಗ್ಗೆ ಕಾಳಜಿ ವಹಿಸುತ್ತೇವೆ ಅಂತಾರೆ, ಇನ್ನೊಂದು ಕಡೆ ಕಿತ್ತುಕೊಳ್ತಾ ಇದ್ದಾರೆ. ಮಹಿಳೆಯರು ಇದರಿಂದ ಬೇಸತ್ತು ಹೋಗಿದ್ದಾರೆ. ಈ ಬಗ್ಗೆ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕಿದೆ ಎಂದರು.

ಇನ್ನು ಸಿಎಂಗೆ ಮುಡಾ ಹಗರಣ ಕ್ಲೀನ್ ಚಿಟ್ ವಿಚಾರ, ಅಧಿಕೃತವಾಗಿ ಬರಲಿ ಆಮೇಲೆ ಮಾತಾಡ್ತೇನೆ ಎಂದರು.

Edited By : Somashekar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

23/01/2025 02:38 pm

Cinque Terre

59.45 K

Cinque Terre

3

ಸಂಬಂಧಿತ ಸುದ್ದಿ