ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮೆಟ್ರೋ ಟ್ರ್ಯಾಕ್‌ ಮೇಲೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಬಿಹಾರ ಮೂಲದ ವ್ಯಕ್ತಿ

ಬೆಂಗಳೂರು: ಆತ್ಮಹತ್ಯೆ ಮಾಡಿಕೊಳ್ಳಲು 49 ವರ್ಷದ ವ್ಯಕ್ತಿ ಮೆಟ್ರೋ ಟ್ರ್ಯಾಕ್‌ಗೆ ಜಿಗಿದಿದ್ದಾನೆ. ಇಂದು ಬೆಳಿಗ್ಗೆ 10-26 ಕ್ಕೆ ಹಸಿರು ಮಾರ್ಗದ ಜಾಲಹಳ್ಳಿ ಮೆಟ್ರೋ ಸ್ಟೇಷನ್‌ನಲ್ಲಿ ಈ ಘಟನೆ ನಡೆದಿದೆ.

ಮೆಟ್ರೋ ಟ್ರೈನ್ ಬರುತ್ತಿದ್ದಂತೆ ಟ್ರ್ಯಾಕ್‌ಗೆ ಜಿಗಿದು, ಎರಡು ಟ್ರ್ಯಾಕ್ ಗಳ ಮಧ್ಯೆ ಈ ವ್ಯಕ್ತಿ ಮಲಗಿದ್ದ. ಈ ಹಿನ್ನೆಲೆ ಹಸಿರು ಮಾರ್ಗದಲ್ಲಿ ಮೆಟ್ರೋ ಸಂಚಾರವನ್ನು ಬಿಎಂಆರ್‌ಸಿಎಲ್ ಕೂಡಲೇ ನಿಲ್ಲಿಸಿದೆ.

49 ವರ್ಷದ ಅನಿಲ್ ಕುಮಾರ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಅಂತ ತಿಳಿದು ಬಂದಿದೆ. ಬಿಹಾರ ಮೂಲದ ವ್ಯಕ್ತಿ

ಬೆಂಗಳೂರಿನ ಜಾಲಹಳ್ಳಿಯ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ. ವಾಯುಸೇನೆಯ ನಿವೃತ್ತ ಯೋಧರು ಆಗಿರುವ ಅನಿಲ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಎಮರ್ಜೆನ್ಸಿ ಟ್ರಿಪ್ ಸಿಸ್ಟಮ್ ಆಫ್ ಮಾಡಿ ರೈಲು ನಿಲ್ಲಿಸಿ ಬಿಎಂಆರ್‌ಸಿಎಲ್ ಸಿಬ್ಬಂದಿ ಈತನನ್ನು ರಕ್ಷಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಲು ಕಾರಣ ಏನು? ಎಂಬ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Edited By : Ashok M
PublicNext

PublicNext

20/01/2025 01:46 pm

Cinque Terre

11.97 K

Cinque Terre

0

ಸಂಬಂಧಿತ ಸುದ್ದಿ