ಬೆಂಗಳೂರು: ಲಕ್ಷ ಲಕ್ಷ ಕೊಟ್ಟು ಬೈಕ್ ಖರೀದಿ ಮಾಡೋ ಜನ ಸಾವಿರ ರೂಪಾಯಿ ಕೊಟ್ಟು ಒಂದು ಹೆಲ್ಮೆಟ್ ಖರೀದಿ ಮಾಡಲ್ಲ. ಹದಿನೈದು ಇಪ್ಪತ್ತು ಸಾವಿರ ರೂಪಾಯಿ ಮೊಬೈಲ್ ಗೆ ಸಾವಿರಾರು ರೂಪಾಯಿ ಖರ್ಚು ಮಾಡಿ ಸ್ಕ್ರೀನ್ ಗಾರ್ಡ್, ಪೌಚ್ ಹಾಕಿಸ್ತಾರೆ. ಆದ್ರೆ ತಮ್ಮ ಜೀವ ಕಾಪಾಡೋ ಹೆಲ್ಮೆಟ್ ಗೆ ಬಂಡವಾಳ ಹಾಕಲ್ಲ.
ದಿನೇ ದಿನೇ ಹೆಚ್ಚಾಗ್ತಿರೋ ಅಪಘಾತಗಳ ಪೈಕಿ ಹೆಲ್ಮೆಟ್ ಇಲ್ಲದೆ, ಗುಣಮಟ್ಟದ ಹೆಲ್ಮೆಟ್ ಧರಿಸದೇ ಮೃತ ಪಡೋರ ಸಂಖ್ಯೆ ಹೆಚ್ಚು. ವಾಹನ ಸವಾರರಿಗೆ ಅದೆಷ್ಟೇ ಬುದ್ಧಿ ಹೇಳಿದ್ರು ಜನ ಕೇಳಲ್ಲ ಅಂತ ಇಂದು ಸಂಚಾರಿ ಪೊಲೀಸ್ರ ಜೊತೆಗೆ ರೋಟರಿ ಸಂಸ್ಥೆ ಕೈ ಜೋಡಿಸಿ ಇಂದು ಉತ್ತಮ ಗುಣಮಟ್ಟದ ಹೆಲ್ಮೆಟ್ ವಿತರಿಸಿದ್ರು.
ಕಬ್ಬನ್ ಪಾರ್ಕ್ ಸಂಚಾರಿ ಉಪವಿಭಾಗದ ಎಸಿಪಿ ಶಶಿಕಲಾ, ರೋಟರಿ ಸಂಸ್ಥೆ ಬೆಂಗಳೂರು ಅಧ್ಯಕ್ಷ ಪಳನಿ ಲೋಗನಾಥನ್ ನೇತೃತ್ವದಲ್ಲಿ ಇಂದು ನಗರದ ಹಲವು ಕಡೆ ಹೆಲ್ಮೆಟ್ ವಿತರಿಸಿದ್ರು. ಯಾರೆಲ್ಲ ಹಾಫ್ ಹೆಲ್ಮೆಟ್ ಹಾಕೊಂಡು ಬರ್ತಾರೆ. ಯಾರಿಗೆಲ್ಲ ಹೆಲ್ಮೆಟ್ ಅವಶ್ಯಕತೆ ಇದೆ, ಮತ್ತೆ ಹೆಲ್ಮೆಟ್ ಖರೀದಿಸಲು ಯಾರೆಲ್ಲ ಅಶಕ್ತರಿದ್ದಾರೆ ಅಂತಹವರನ್ನ ಗುರುತಿಸಿ ಹೆಲ್ಮೆಟ್ ವಿತರಿಸಿದ್ರು. ಅಷ್ಟೇ ಅಲ್ಲದೇ ಹಾಫ್ ಹೆಲ್ಮೆಟ್ ಗೆ ಸುತ್ತಿಗೆಯಿಂದ ಹೊಡೆದು ಹೆಲ್ಮೆಟ್ ಗುಣಮಟ್ಟ ಹೇಗಿದೆ ಈ ಹೆಲ್ಮೆಟ್ ಧರಿಸಿದ್ರೆ ನಿಮ್ಮ ಸ್ಥಿತಿ ಹೀಗೆ ಆಗುತ್ತೆ ಅನ್ನೋ ಅರಿವನ್ನ ಮೂಡಿಸಿದ್ರು. ನಗರದಾದ್ಯಂತ ಸುಮಾರು 250ಕ್ಕೂ ಹೆಚ್ಚು ಹೆಲ್ಮೆಟ್ ನ ಇಂದು ವಿತರಿಸಲಾಗಿದೆ.
PublicNext
20/01/2025 04:01 pm