", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/286525-1737378954-WhatsApp-Image-2025-01-20-at-6.40.31-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಸರ್ಕಾರಿ ಕಚೇರಿಗಳು ಅಂದ್ರೆ ಅಧಿಕಾರಿ ಮತ್ತು ಸಿಬ್ಬಂದಿಗೆ ಅದೇನೋ ಅಸಡ್ಡೆ. ಬೇಕಾಬಿಟ್ಟಿ ಬರೋದು, ಇಲ್ಲಾ ಸುಮ್ಮನೆ ಸಹಿ ಹಾಕಿ ತಿಂಗಳ ...Read more" } ", "keywords": " Lokayukta Raid, Bangalore News, Measurement Office, Corruption Probe, Karnataka Lokayukta, Government Office Raid, Lokayukta Investigation, Bangalore Scam, Karnataka News, Anti-Corruption Drive,Bangalore,Bangalore-Rural,Crime,Law-and-Order", "url": "https://publicnext.com/node" }
ಬೆಂಗಳೂರು: ಸರ್ಕಾರಿ ಕಚೇರಿಗಳು ಅಂದ್ರೆ ಅಧಿಕಾರಿ ಮತ್ತು ಸಿಬ್ಬಂದಿಗೆ ಅದೇನೋ ಅಸಡ್ಡೆ. ಬೇಕಾಬಿಟ್ಟಿ ಬರೋದು, ಇಲ್ಲಾ ಸುಮ್ಮನೆ ಸಹಿ ಹಾಕಿ ತಿಂಗಳ ಸಂಬಳ ಜೇಬಿಗೆ ಇಳಿಸ್ತಿರ್ತಾರೆ. ಹೀಗೆ ವಾರದ ಮೊದಲನೇ ದಿನವೇ ಕಚೇರಿಗೆ ಬೀಗ ಹಾಕಿ ಕಾಲ್ಕಿತ್ತಿದ್ದ ಇಲಾಖೆಯೊಂದರ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದು, ಅಧಿಕಾರಿಗಳ ಕರ್ಮಕಾಂಡ ಬಯಲಿಗೆಳೆದಿದ್ದಾರೆ. ಹಾಗಾದ್ರೆ ಯಾವುದು ಆ ಇಲಾಖೆ, ದಾಳಿ ವೇಳೆ ಏನೆಲ್ಲಾ ಸಿಕ್ತು ಅಂತೀರಾ ಈ ಸ್ಟೋರಿ ನೋಡಿ...
ಹೀಗೆ ಸಾಲು ಸಾಲಾಗಿ ನಿಂತಿರುವ ಅಧಿಕಾರಿಗಳು, ಒಂದು ಗಂಟೆಯಾದ್ರೂ ಬೀಗ ತೆಗೆಯದೇ ಇರೋ ಕಚೇರಿಗಳು, ಇನ್ನೊಂದು ಕಡೆ ಇದ್ದ ಕೆಲವು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಳ್ತಿರುವ ಲೋಕಾಯುಕ್ತರು. ಹೌದು... ಇಂದು ಲೋಕಾಯುಕ್ತ ನ್ಯಾಯಮೂರ್ತಿಗಳು ಹಾಗೂ ಲೋಕಾ ಪೊಲೀಸರು ತೂಕ ಮತ್ತು ಮಾಪನ ಇಲಾಖೆ ಕಚೇರಿಗಳ ಮೇಲೆ ದಿಢೀರ್ ದಾಳಿ ನಡೆಸಿದ್ದರು. ದಾಳಿ ನಡೆಸಿ ಪರಿಶೀಲನೆ ನಡೆಸುವಾಗ ಅಧಿಕಾರಿಗಳ ಭಯಾನಕ ಕರ್ಮಕಾಂಡ ಬೆಳಕಿಗೆ ಬಂದಿದ್ದು, ಲೋಕಾಯುಕ್ತ ನ್ಯಾಯಮೂರ್ತಿಗಳು ಫುಲ್ ಗರಂ ಆಗಿದ್ದಾರೆ.
ಶಕ್ತಿ ಸೌಧದ ಕೂದಲಳತೆ ದೂರದಲ್ಲಿರುವ ಆಲಿ ಅಸ್ಕರ್ ರಸ್ತೆಯಲ್ಲಿರುವ ತೂಕ ಮತ್ತು ಮಾಪನ ಇಲಾಖೆ ಕಚೇರಿ ಮೇಲೆ ಸುಮಾರು 50 ಕ್ಕೂ ಹೆಚ್ಚು ಅಧಿಕಾರಿ ಸಿಬ್ಬಂದಿ ದಾಳಿ ಮಾಡಿ ಪರಿಶೀಲನೆ ಮಾಡಿದರು. ಈ ವೇಳೆ ಕಚೇರಿಯಲ್ಲಿ ಕೆಲವೇ ಕೆಲವು ಅಧಿಕಾರಿಗಳು ಹಾಜರಿದ್ದು, ಉಳಿದ ಅಧಿಕಾರಿ ಸಿಬ್ಬಂದಿ ತಮ್ಮ ಚೇಂಬರ್ ಬೀಗ ಕೂಡ ತೆಗೆಯದೇ ಗೈರಾಗಿದ್ದರು. ಇದನ್ನ ಕಂಡ ಲೋಕಾಯುಕ್ತರು ಹಿರಿಯ ಅಧಿಕಾರಿ ಅನಿತಾ ಅವರನ್ನ ತರಾಟೆಗೆ ತೆಗೆದುಕೊಂಡರು. ಅಧಿಕಾರಿ ಸಿಬ್ಬಂದಿ ಲಾಗಿನ್ ಲಾಗೌಟ್ ರಿಜಿಸ್ಟರ್ ಬುಕ್ ಮೆಂಟೈನ್ ಆಗಿಲ್ಲ. ಯಾವಾಗ್ ಬಂದ್ರು, ಯಾವಾಗ ಹೊರಗೆ ಹೋದ್ರು ಅನ್ನೋ ಬಗ್ಗೆ ಮಾಹಿತಿ ಇಲ್ಲ ಅಂತಾ ವಾರ್ನ್ ಮಾಡಿದರು.
ಇನ್ನು ಕೆಲವು ಅಧಿಕಾರಿಗಳು ನಾಳೆ ಮತ್ತು ನಾಡಿದ್ದಿನ ಹಾಜರಾತಿಯನ್ನ ಇಂದೇ ಹಾಕಿರೋದು ಕಂಡು ಬಂದಿತ್ತು. ಹಾಗೂ ನಾಳೆ ಮತ್ತು ನಾಡಿದ್ದು ಕಲೆಕ್ಷನ್ ಮಾಡಬೇಕಿದ್ದ ಹಣದ ನಮೂದನ್ನ ಇವತ್ತೇ ಎಂಟ್ರಿ ಮಾಡಿರೋದು ಕೂಡ ಕಂಡಿದ್ದು, ಇದನ್ನ ಗಮನಿಸಿದ ಉಪಲೋಕಾಯುಕ್ತರು ಅಧಿಕಾರಿಗಳನ್ನ ಫುಲ್ ತರಾಟೆಗೆ ತೆಗೆದುಕೊಂಡರು. ಚೇಂಬರ್ ಗಳು ಲಾಕ್ ಆಗಿದ್ದು, ಗೈರು ಹಾಜರಾತಿ ಬಗ್ಗೆ ವಿವರಣೆ ನೀಡುವಂತೆ ಖಡಕ್ ಸೂಚನೆ ನೀಡಿದರು. ಇದೇ ವೇಳೆ ಓರ್ವ ಅಧಿಕಾರಿ ಜ್ಯೋತಿ ಎಂಬುವವರ ಯುಪಿಐ ಐಡಿಯಲ್ಲಿ ಒಂದೇ ತಿಂಗಳಲ್ಲಿ ಲಕ್ಷ ಲಕ್ಷ ಹಣ ಟ್ರಾನ್ಸಾಕ್ಷನ್ ಆಗಿದ್ದು, ನಾಲ್ಕೂವರೆ ಲಕ್ಷ ವಹಿವಾಟು ಆಗಿತ್ತು. ಇದರ ಬಗ್ಗೆ ವಿಚಾರಣೆ ನಡೆಸಿದಾಗ ಇಲ್ಲ ಸಲ್ಲದ ಸಬೂಬು ಹೇಳಿದ್ದರು. ಅಲ್ಲದೇ ಹಣ ಟ್ರಾನ್ಸಾಕ್ಷನ್ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೂ ತಂದಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದರು.
ಹೀಗೆ ಸುಮಾರು ಮೂರ್ನಾಲ್ಕು ಗಂಟೆಗಳ ಮಾಪನ ಇಲಾಖೆಯಲ್ಲಿ ಪರಿಶೀಲನೆ ನಡೆಸಿದ ಲೋಕಾಯುಕ್ತ ನ್ಯಾಯಮೂರ್ತಿಗಳು ಮತ್ತು ಪೊಲೀಸರು, ಅಧಿಕಾರಿ ಮತ್ತು ಸಿಬ್ಬಂದಿ ಕಳ್ಳಾಟವನ್ನ ಬಯಲಿಗೆಳೆದರು. ಅಲ್ಲದೇ ಬೀಗ ಹಾಕಿ ಹೋಗಿರೋ ಅಧಿಕಾರಿ ಸಿಬ್ಬಂದಿ ಕಚೇರಿಗಳನ್ನ ಸೀಜ್ ಮಾಡಲು ಸೂಚನೆ ನೀಡಿದ್ದು, ಈ ಬಗ್ಗೆ ಸುಮೋಟೊ ಕೇಸ್ ದಾಖಲಿಸಿ ತನಿಖೆ ನಡೆಸಲು ಲೋಕಾಯುಕ್ತರು ಮುಂದಾಗಿದ್ದಾರೆ.
PublicNext
20/01/2025 06:54 pm