", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/229640-1737307538-bng3.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಐಶ್ವರ್ಯಗೌಡ ವಿರುದ್ಧ ಮತ್ತೊಂದು ವಂಚನೆ ಪ್ರಕರಣ ದಾಖಲಾಗಿದೆ.ಅಷ್ಟೇ ಹಿಂದಿನ ಕೇಸ್ ಒಂದರಲ್ಲಿ ಮತ್ತಿಬ್ಬರು ಶಾಸಕರ ಹೆಸರು ಕೂಡ ಪ್ರಕರ...Read more" } ", "keywords": "Bangalore, DK Suresh, Hesareddy, Cheating Case, Aishwarya, Karnataka Politics, Congress Leader, Fraud Allegations, Bengaluru Crime, Karnataka News.,Bangalore-Rural,Crime,Law-and-Order", "url": "https://publicnext.com/node" } ಬೆಂಗಳೂರು: ಡಿಕೆ ಸುರೇಶ್ ತಂಗಿ ಹೆಸ್ರಲ್ಲಿ ವಂಚನೆ ಪ್ರಕರಣ- ಐಶ್ವರ್ಯ ಮೇಲೆ ಮತ್ತೊಂದು ಕೇಸ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಡಿಕೆ ಸುರೇಶ್ ತಂಗಿ ಹೆಸ್ರಲ್ಲಿ ವಂಚನೆ ಪ್ರಕರಣ- ಐಶ್ವರ್ಯ ಮೇಲೆ ಮತ್ತೊಂದು ಕೇಸ್

ಬೆಂಗಳೂರು: ಐಶ್ವರ್ಯಗೌಡ ವಿರುದ್ಧ ಮತ್ತೊಂದು ವಂಚನೆ ಪ್ರಕರಣ ದಾಖಲಾಗಿದೆ.ಅಷ್ಟೇ ಹಿಂದಿನ ಕೇಸ್ ಒಂದರಲ್ಲಿ ಮತ್ತಿಬ್ಬರು ಶಾಸಕರ ಹೆಸರು ಕೂಡ ಪ್ರಕರಣದಲ್ಲಿ ಕೇಳಿ ಬರ್ತಿದೆ.

ಐಶ್ವರ್ಯಳ ವಂಚನೆ ಸರಪಳಿಗೆ ಒಂದೊಂದೆ ಕೊಂಡಿ ಸೇರಿಕೊಳ್ತಿವೆ. ಐಶ್ವರ್ಯ ವಿರುದ್ಧ ಮೂರು ವಂಚನೆ ಪ್ರಕರಣಗಳು ದಾಖಲಾಗಿದ್ದು ನಿನ್ನೆ ಮತ್ತೊಂದು ವಂಚನೆ ಪ್ರಕರಣ ದಾಖಲಾಗಿದೆ. ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಐಶ್ವರ್ಯಗೌಡ ಹಾಗೂ ಪತಿ ಹರೀಶ್ ಸೇರಿ ಏಳು ಮಂದಿಯ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.

ಕೋಟಿ ಕೋಟಿ ವಂಚಿಸಿ ಮೂರು ಪ್ರಕರಣದಲ್ಲಿ ಪೊಲೀಸರಿಂದ ಬಚಾವ್ ಆಗಿರೋ ಐಶ್ವರ್ಯ ಗೌಡ ಹಾಗೂ ಆಕೆ ಗಂಡನಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಅಮೆರಿಕಾದಲ್ಲಿ ಡಾಕ್ಟರ್ ದಯಾನಂದ ಲಿಂಗೇಗೌಡ ಗೆ ಸ್ನೇಹಿತ ಟಿ.ಪಿ ರಮೇಶ್ ಮೂಲಕ ವಂಚಕಿ ಐಶ್ವರ್ಯಗೌಡ ಪರಿಚಯವಾಗಿರುತ್ತಾಳೆ. ಹೊಸದಾಗಿ ರಿಯಲ್ ಎಸ್ಟೆಟ್ ಕಂಪನಿ ತೆರೆದಿದ್ದೇವೆ, ಅದಕ್ಕೆ ಮಾಜಿ ಸಂಸದ ಡಿಕೆ ಸುರೇಶ್ ಅವರೇ ಪಾಲುದಾರರು ಎಂದು ನಂಬಿಸಿದ್ದಾಳೆ.ನಮ್ಮ ಕಂಪನಿಯಲ್ಲಿ ಠೇವಣಿ ಹೂಡಿದ್ರೆ ಒಳ್ಳೆ ಲಾಭ ಬರುತ್ತೆ ಅಂಥ ಹೇಳಿದಲ್ಲದೆ, ನಾವು ಸಿನಿಮಾ, ಸಿರೀಯಲ್ ಗಳಿಗೂ ಹಣ ಹೂಡಿಕೆ ಮಾಡ್ತೀವಿ ಎಂದು ಅಮಿಷಾ ಒಡ್ಡಿ ಡಾಕ್ಟರ್ ದಯಾನಂದ್ ಲಿಂಗೇಗೌಡರಿಂದ ಹಂತ ಹಂತವಾಗಿ 1 ಕೋಟಿ 40 ಲಕ್ಷದಷ್ಟು ಹಣ ಪಡೆದಿದ್ದಾಳೆಂದು ಆರೋಪಿಸಲಾಗಿದೆ.

ಹಣವನ್ನ ಕೇಳಿದ್ರೆ ಬೆದರಿಕೆ ಹಾಕುತ್ತಿದ್ದಾಳೆಂದು ಆರೋಪಿಸಿ ಡಾ. ದಯಾನಂದ್ ಲಿಂಗೇಗೌಡ ದೂರು ನೀಡಿದ್ದಾರೆ‌.

ಐಶ್ವರ್ಯ ಗೌಡ ವಂಚನೆ ಪ್ರಕರಣ ತನಿಖೆಯ ವೇಳೆ ಹತ್ತು ಹಲವು ವಿಚಾರಗಳು ಬೆಳಕಿಗೆ ಬರುತ್ತಿದೆ. ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಯ ಜೊತೆ ಮತ್ತೊಬ್ಬ ಕಾಂಗ್ರೆಸ್ ಶಾಸಕ ಹಾಗೂ ಜೆಡಿಎಸ್ ಶಾಸಕ ಒಬ್ಬರ ಹೆಸರು ತಳಕು ಹಾಕಿಕೊಳ್ಳುತ್ತಿದೆ. ಮತ್ತೊಬ್ಬ ಕಾಂಗ್ರೆಸ್ ಶಾಸಕ ಹಾಗೂ ಜೆಡಿಎಸ್ ಶಾಸಕ, ವಂಚಕಿ ಐಶ್ವರ್ಯಗೌಡ ಜೊತೆ ವ್ಯವಹಾರಿಕ ಸಂಬಂದವನ್ನ ಇಟ್ಟುಕೊಂಡಿರೋ ವಿಚಾರಗಳು ಪೊಲೀಸರ ತನಿಖೆಯ ವೇಳೆ ಬಯಲಿಗೆ ಬಂದಿದೆ.

ಹಾಗಾಗಿ ಪೊಲೀಸರು ಶಾಸಕರುಗಳು ವ್ಯವಹಾರಿಕ ಸಂಬಂಧಗಳ ಮಾಹಿತಿ ಕಲೆ ಹಾಕಲಾಗುತ್ತಿದೆ ಎನ್ನಲಾಗಿದೆ. ಐಶ್ವರ್ಯಗೌಡ ಯಾರ ಜೊತೆಯೆಲ್ಲ ವ್ಯವಹಾರ ಮಾಡಿದ್ದಾಳೋ ಅವರ ಎಲ್ಲರ ಹೆಸರನ್ನ ಡೈರಿಯಲ್ಲಿ ಬರೆದಿಟ್ಟಿರುವ ವಿಚಾರ ಬೆಳಕಿಗೆ ಬಂದಿದ್ದು ಡೈರಿಯೊಂದರಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರ ಹೆಸರುಗಳಿರುವಂತ ವಿಷಯಗಳು ಬೆಳಕಿಗೆ ಬಂದಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Edited By : Manjunath H D
PublicNext

PublicNext

19/01/2025 10:55 pm

Cinque Terre

13.73 K

Cinque Terre

0