", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/405356-1737293826-vaaa.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಗಿಫ್ಟ್ ಹೆಸರಿನಲ್ಲಿ ಮೊಬೈಲ್ ಫೋನ್, ಟ್ಯಾಬ್ ನಿಮ್ಮ ಮನೆ ಬಾಗಿಲಿಗೆ ಬಂದರೆ ಅವುಗಳನ್ನ ಬಳಸುವ ಮುನ್ನ ಎಚ್ಚರವಿರಲಿ. ಇದು ಸೈಬರ್ ವಂ...Read more" } ", "keywords": "Cybercrime, Mobile Gift Scam, Online Fraud, Woman Duped, Rs 2.8 Crore Scam, Cyber Scammers, Digital Fraud, Indian Cybercrime, Online Safety, Scam Alert.,Bangalore,Bangalore-Rural,Crime,Law-and-Order", "url": "https://publicnext.com/node" }
ಬೆಂಗಳೂರು : ಗಿಫ್ಟ್ ಹೆಸರಿನಲ್ಲಿ ಮೊಬೈಲ್ ಫೋನ್, ಟ್ಯಾಬ್ ನಿಮ್ಮ ಮನೆ ಬಾಗಿಲಿಗೆ ಬಂದರೆ ಅವುಗಳನ್ನ ಬಳಸುವ ಮುನ್ನ ಎಚ್ಚರವಿರಲಿ. ಇದು ಸೈಬರ್ ವಂಚಕರ ಹೊಸ ವರಸೆಯೂ ಆಗಿರಬಹುದು. ಕ್ರೆಡಿಟ್ ಕಾರ್ಡ್ ಮಂಜೂರಾಗಿದೆ ಎಂದು ನಂಬಿಸಿದ ಸೈಬರ್ ವಂಚಕರು ಸಾಫ್ಟ್‌ವೇರ್ ಉದ್ಯೋಗಿಯೊಬ್ಬರ ಖಾತೆಯಿಂದ 2.8 ಕೋಟಿ ರೂ ದೋಚಿರುವ ಪ್ರಕರಣ ಬೆಂಗಳೂರಿನಲ್ಲಿ ವರದಿಯಾಗಿದೆ.
ಖಾಸಗಿ ಬ್ಯಾಂಕ್ ಪ್ರತಿನಿಧಿಗಳ ಹೆಸರಿನಲ್ಲಿ ತಾವೇ ಮೊಬೈಲ್ ಫೋನ್ ಕಳಿಸಿ ವಂಚಿಸಿರುವ ಖದೀಮರ ವಿರುದ್ಧ ವೈಟ್ ಫೀಲ್ಡ್ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರ ವ್ಯಕ್ತಿಗೆ ನವೆಂಬರ್ ತಿಂಗಳಿನಲ್ಲಿ ಕರೆ ಮಾಡಿದ್ದ ವಂಚಕರು ನಿಮ್ಮ ರಿವಾರ್ಡ್ ಪಾಯಿಂಟ್ಸ್ ಉತ್ತಮವಾಗಿರುವುದರಿಂದ ಕ್ರೆಡಿಟ್ ಕಾರ್ಡ್ ಆಫರ್ ಮಾಡುತ್ತಿದ್ದೇವೆ ಎಂದು ನಂಬಿಸಿದ್ದರು.ಬಳಿಕ ಹೊಸ ಸಿಮ್ ಕಾರ್ಡ್‌ನ್ನ ಒಂದನ್ನ ಖರೀದಿಸಿ ಅದರ ನಂಬರ್ ನೀಡುವಂತೆ ಕೇಳಿ ಪಡೆದುಕೊಂಡಿದ್ದರು.
ಇದಾದ ಬಳಿಕ ಡಿಸೆಂಬರ್ ಮೊದಲ ವಾರದಲ್ಲಿ ದೂರುದಾರರ ವಿಳಾಸಕ್ಕೆ ತಾವೇ ಹೊಸ ಮೊಬೈಲ್ ಫೋನ್‌ವೊಂದನ್ನ ಕಳಿಸಿದ್ದರು.ವಂಚಕರ ಕುರಿತು ಸುಳಿವಿರದ ದೂರುದಾರರು ಹೊಸ ಮೊಬೈಲ್ ಫೋನ್‌ನಲ್ಲಿ ತಾವು ಖರೀದಿಸಿದ್ದ ಹೊಸ ಸಿಮ್ ಕಾರ್ಡ್ ಹಾಕಿ ಬಳಸಲಾರಂಭಿಸಿದ್ದಾರೆ.
ಆದರೆ ಹೊಸ ಸಿಮ್ ಕಾರ್ಡ್ ಆ್ಯಕ್ಟಿವೇಟ್ ಆಗುತ್ತಿದ್ದಂತೆ ವಂಚಿಸಲು ಅಗತ್ಯವಿರುವಂತೆ ಕ್ಲೋನಿಂಗ್ ಮತ್ತು ಆ್ಯಪ್‌ಗಳನ್ನ ಇನ್‌ಸ್ಟಾಲ್ ಮಾಡಿಟ್ಟಿದ್ದ ವಂಚಕರು, ಬ್ಯಾಂಕ್‌ನಿಂದ ಯಾವುದೇ ಸಂದೇಶ ಅಥವಾ ಮೇಲ್ ಬಾರದಂತೆ ಮೊಬೈಲ್ ಫೋನ್‌ನಲ್ಲಿ ಸೆಟ್ ಮಾಡಿಟ್ಟಿದ್ದಾರೆ. ಒಂದು ವಾರದ ಬಳಿಕ ತಮ್ಮ ಎಫ್‌ಡಿ ಖಾತೆಯಲ್ಲಿ ಹಣ ಕಡಿತವಾಗಿರುವುದನ್ನ ಗಮನಿಸಿದ ದೂರುದಾರರು ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ ಹಣ ವಂಚಕರ ಪಾಲಾಗಿರುವುದು ತಿಳಿದು ಬಂದಿದೆ.
ಹಣ ಕಳೆದುಕೊಂಡಿದ್ದ ವ್ಯಕ್ತಿ ತಕ್ಷಣ ವೈಟ್ ಫೀಲ್ಡ್ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಅದರನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಂಚಕರು ಕಳಿಸಿದ್ದ ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಹಾಗೂ ಹಣ ವರ್ಗಾವಣೆಯಾದ ಖಾತೆಗಳ ವಿವರವನ್ನ ಕಲೆಹಾಕುತ್ತಿದ್ದಾರೆ.
PublicNext
19/01/2025 07:07 pm