", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/235762-1737287406-WhatsApp-Image-2025-01-19-at-5.18.23-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಕತಿಹಾರ್: ಬಿಹಾರದ ಕತಿಹಾರ್ ಜಿಲ್ಲೆಯ ಗಂಗಾ ನದಿಯಲ್ಲಿ ದೋಣಿ ದುರಂತ ಸಂಭವಿಸಿದೆ. ಕತಿಹಾರ್‌ನ ಅಹಮದಾಬಾದ್‌ನಲ್ಲಿ ಈ ದುರಂತ ಸಂಭವಿಸಿದ್ದು ಮೂವರ...Read more" } ", "keywords": "Kathihar boat tragedy, Ganga river accident, boat capsizes in Ganga, Bihar boat accident, river Ganga tragedy, boat accident in Kathihar, Ganga river boat tragedy, India boat accident, river accident news, boat capsizes in India. ,,Crime", "url": "https://publicnext.com/node" } VIDEO: ಕತಿಹಾರ್ ಗಂಗಾ ನದಿಯಲ್ಲಿ ದೋಣಿ ದುರಂತ - ಮೂವರು ಸಾವು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಕತಿಹಾರ್ ಗಂಗಾ ನದಿಯಲ್ಲಿ ದೋಣಿ ದುರಂತ - ಮೂವರು ಸಾವು

ಕತಿಹಾರ್: ಬಿಹಾರದ ಕತಿಹಾರ್ ಜಿಲ್ಲೆಯ ಗಂಗಾ ನದಿಯಲ್ಲಿ ದೋಣಿ ದುರಂತ ಸಂಭವಿಸಿದೆ. ಕತಿಹಾರ್‌ನ ಅಹಮದಾಬಾದ್‌ನಲ್ಲಿ ಈ ದುರಂತ ಸಂಭವಿಸಿದ್ದು ಮೂವರು ಮೃತಪಟ್ಟಿದ್ದಾರೆ.

ದೋಣಿಯಲ್ಲಿ ಒಟ್ಟು 17 ಜನರಿದ್ದು, ಅದರಲ್ಲಿ ಮೂವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೂ ಅನೇಕ ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ನಾಲ್ಕು ಜನರು ಈಜುವ ಮೂಲಕ ತಮ್ಮ ಜೀವವನ್ನು ಉಳಿಸಿಕೊಂಡರು. ಎಲ್ಲಾ ಜನರು ದಕ್ಷಿಣ ಕರಿಮುಲ್ಲಾಪುರದ ಮೇಘು ಘಾಟ್‌ನಿಂದ ದೋಣಿ ಹತ್ತಿ ಗಡ್ಡೈ ದಿಯಾರಾಗೆ ಹೋಗುತ್ತಿದ್ದರು. ದೋಣಿ ಅಪಘಾತದ ಬಗ್ಗೆ ಮಾಹಿತಿ ಪಡೆಯುತ್ತಿದ್ದಂತೆ, ಎಸ್‌ಡಿಆರ್‌ಎಫ್ ಮತ್ತು ಪೊಲೀಸರು ಸ್ಥಳಕ್ಕೆ ತಲುಪಿದ್ದು, ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಯುತ್ತಿದೆ. ಇವರೆಲ್ಲ ಕೃಷಿ ಕೆಲಸಕ್ಕಾಗಿ ತೆರಳುತ್ತಿದ್ದರು ಎನ್ನಲಾಗಿದೆ.

ದೋಣಿಯಲ್ಲಿದ್ದ ಜನರುಕೃಷಿ ಕೆಲಸ ಮಾಡಲು ಡಯಾರಾ ಪ್ರದೇಶಕ್ಕೆ ಹೋಗುತ್ತಿದ್ದರು ಎಂದು ಹೇಳಲಾಗುತ್ತಿದೆ. ಆದರೆ ನದಿಯಯಲ್ಲಿ ದೋಣಿ ಮುಳುಗಿ ಮೂವರು ಸಾವನ್ನಪ್ಪಿದ್ದಾರೆ. ದೋಣಿ ಅಪಘಾತದಲ್ಲಿ ರಕ್ಷಿಸಲ್ಪಟ್ಟ ಜನರನ್ನು ಅಹಮದಾಬಾದ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.

Edited By : Nagaraj Tulugeri
PublicNext

PublicNext

19/01/2025 05:20 pm

Cinque Terre

83.4 K

Cinque Terre

1