", "articleSection": "Crime,Human Stories", "image": { "@type": "ImageObject", "url": "https://prod.cdn.publicnext.com/s3fs-public/235762-1737290462-Untitled-design-(75).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಕೋಲ್ಕತ್ತಾ: ಆರ್.ಜಿ ಕರ್ ವೈದ್ಯಕೀಯ ಕಾಲೇಜ್‌ಗೆ ನುಗ್ಗಿ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದ ಸಂಜಯ್ ರಾಯ್ ಈ ಪ್ರಕರಣದಲ್ಲಿ ದೋಷಿ...Read more" } ", "keywords": "Sanjay Raut's mother, punish my son if he's wrong, zero tolerance for wrongdoing, mother's statement on son's actions, strong message from Sanjay Raut's mother, Indian politician's mother, honesty and accountability, moral values in politics. ,,Crime,Human-Stories", "url": "https://publicnext.com/node" } 'ನನ್ನ ಮಗ ತಪ್ಪು ಮಾಡಿದ್ದರೆ ಗಲ್ಲಿಗೇರಿಸಿ' ಎಂದ ಸಂಜಯ್ ರಾಯ್ ತಾಯಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ನನ್ನ ಮಗ ತಪ್ಪು ಮಾಡಿದ್ದರೆ ಗಲ್ಲಿಗೇರಿಸಿ' ಎಂದ ಸಂಜಯ್ ರಾಯ್ ತಾಯಿ

ಕೋಲ್ಕತ್ತಾ: ಆರ್.ಜಿ ಕರ್ ವೈದ್ಯಕೀಯ ಕಾಲೇಜ್‌ಗೆ ನುಗ್ಗಿ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದ ಸಂಜಯ್ ರಾಯ್ ಈ ಪ್ರಕರಣದಲ್ಲಿ ದೋಷಿ ಎಂದು ಸೆಷನ್ಸ್ ನ್ಯಾಯಾಲಯ ಹೇಳಿದೆ. ಮತ್ತು ಈತನ ಶಿಕ್ಷೆಯನ್ನು ಕಾದಿರಿಸಿದೆ. ಈ ಬಗ್ಗೆ ಅಪರಾಧಿಯ ತಾಯಿ ಮಾಲತಿ ರಾಯ್ 'ನನ್ನ ಮಗ ತಪ್ಪು ಮಾಡಿದ್ದು ನಿಹವೇ ಆದರೆ ಆತನಿಗೆ ಗಲ್ಲು ಶಿಕ್ಷೆ ವಿಧಿಸಿ' ಎಂದು ಹೇಳಿದ್ದಾರೆ.

ನನ್ನ ಮಗನನ್ನು ನೇಣುಗಂಬಕ್ಕೆ ಏರಿಸಿದರೂ ಚೆಂತೆಯಿಲ್ಲ. ಅದಕ್ಕಾಗಿ ಯಾರೂ ದುಃಖಿಸಬೇಕಿಲ್ಲ. ನಾನೊಬ್ಬಳೇ ದುಃಖಿಸುತ್ತೇನೆ. ಆದ್ರೆ ಶಿಕ್ಷೆಯನ್ನು ಸಮರ್ಥಿಸಿಕೊಳ್ಳುತ್ತೇನೆ. ಒಮದು ವೇಳೆ ನನ್ನ ಮಗನ ಮೇಲಿನ ಎಲ್ಲ ಆರೋಪಗಳು ಸುಳ್ಳು ಎಂದಾದರೆ ನಾನು ಕೂಡ ಕೋರ್ಟ್ ವಿಚಾರಣೆಗೆ ಹೋಗುತ್ತಿದ್ದೆ ಎಂದು ಮಾಲತಿ ಹೇಳಿದ್ದಾರೆ.

'ನನಗೂ ಹೆಣ್ಣು ಮಕ್ಕಳಿದ್ದಾರೆ. ಅದರಲ್ಲಿ ಓರ್ವ ಮಗಳು ಕೆಲವು ವರ್ಷಗಳ ಹಿಂದೆ ನಿಧನಳಾಗಿದ್ದಾಳೆ. ಹೆಣ್ಣುಮಗಳ ಕಷ್ಟ, ನೋವು ಏನೆಂಬುದು ನನಗೂ ಅರ್ಥವಾಗುತ್ತೆ' ಎಂದು ಮಾಲತಿ ರಾಯ್ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

19/01/2025 06:13 pm

Cinque Terre

48.35 K

Cinque Terre

3