ಮಕ್ಕಳಿಗೆ ಪಾಠ ಮಾಡಬೇಕಿದ್ದ ಶಿಕ್ಷಕರೆ ಹಾದಿ ತಪ್ಪಿದ್ದಾರೆ. ಶಿಕ್ಷಕರು ಕಾಮತೃಷೆ ತೀರಿಸಿಕೊಳ್ಳಲು ಶಾಲೆಯನ್ನೇ ಬಳಸಿಕೊಂಡಿದ್ದಾರೆ. ಶಾಲೆಗೆ ರಜೆ ಇದ್ದರೂ ಹೆಡ್ ಮೇಷ್ಟ್ರು-ಶಿಕ್ಷಕಿ ಇವರಿಬ್ಬರೂ ಶಾಲೆಗೆ ಬಂದು ರಾಸಲೀಲೆ ಶುರು ಮಾಡಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ರಾಜಸ್ಥಾನದ ಚಿತ್ತೋರ್‌ಗಢ ಜಿಲ್ಲೆಯಲ್ಲಿ ನಡೆದಿದ್ದು, ಇಲ್ಲಿನ ಗಂಗ್ರಾರ್ ಬ್ಲಾಕ್‌ನ ಸಲೇರಾ ಎಂಬಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆಡ್ ಮಾಸ್ಟರ್ ಮತ್ತು ಲೇಡಿ ಟೀಚರ್ ಕರ್ತವ್ಯ ಪ್ರಜ್ಞೆಯನ್ನು ಮರೆತು ರೊಮ್ಯಾನ್ಸ್ ಮಾಡಿದ್ದಾರೆ.
ಪ್ರಿನ್ಸಿಪಾಲ್ ಕೊಠಡಿಯಲ್ಲಿ ಈ ಇಬ್ಬರು ಮುದ್ದಾಡುತ್ತಾ ಸರಸ ಸಲ್ಲಾಪದಲ್ಲಿ ತೊಡಗಿದ್ದು, ಈ ದೃಶ್ಯ ಅಲ್ಲಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯವನ್ನು ಯಾರೋ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದು, ವಿದ್ಯಾ ದೇಗುಲದಲ್ಲಿ ನಾಚಿಕೆಗೇಡಿನ ವರ್ತನೆಯನ್ನು ತೋರಿದ ಈ ಇಬ್ಬರೂ ಶಿಕ್ಷಕರನ್ನು ಅಮಾನತು ಮಾಡುವಂತೆ ಆಗ್ರಹಿಸಲಾಗಿದೆ.
ಘಟನೆಯ ನಂತರ ಜಿಲ್ಲಾ ಶಿಕ್ಷಣಾಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಿದ್ದಾರೆ.
PublicNext
19/01/2025 03:10 pm