ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳವು, ಜಾಗತಿಕವಾಗಿ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ. ಜಗತ್ತಿನ ಅತಿ ದೊಡ್ಡ ಮಾನವರ ಸಮಾಗಮಕ್ಕೆ ಸಾಕ್ಷಿಯಾಗಿರುವ ಮಹಾಕುಂಭ ಮೇಳದ ತ್ರಿವೇಣಿ ಸಂಗಮದಲ್ಲಿ ಕೋಟ್ಯಾಂತರ ಜನ ಅಮೃತ ಸ್ನಾನ ಮಾಡಿ ಧನ್ಯತಾ ಭಾವದ ಅನುಭೂತಿ ಪಡೆಯುತ್ತಿದ್ದಾರೆ.
ಕೋಟಿಗಟ್ಟಲೆ ಭಕ್ತರು, ಸಂತರು, ಸನ್ಯಾಸಿಗಳು ಉತ್ಸವಕ್ಕೆ ಆಗಮಿಸುತ್ತಿದ್ದಾರೆ. ಪ್ರಯಾಗ್‌ರಾಜ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಕಿಕ್ಕಿರಿದು ತುಂಬಿವೆ. ಶೃಂಗವೇರಪುರ, ಚಿತ್ರಕೂಟ, ವಾರಣಾಸಿ, ಮಾ ವಿಂಧ್ಯವಾಸಿನಿ ಧಾಮ, ನೈಮಿಸಾರಣ್ಯ ಮತ್ತು ಅಯೋಧ್ಯೆಯಂತಹ ಪವಿತ್ರ ಸ್ಥಳಗಳಿಗೆ ಭೇಟಿ ನೀಡುವವರ ಸಂಖ್ಯೆಯೂ ಭಾರಿ ಏರಿಕೆ ಕಂಡಿದೆ.
ಸದ್ಯ ಅಘೋರಿಯೊಬ್ಬನನ್ನು ನೋಡಿದ ಜನ ಬೆಚ್ಚಿ ಬೀಳುತ್ತಿದ್ದಾರೆ. ವಿಷಪೂರಿತ ಹಾವು, ತಲೆಬುರುಡೆಗಳನ್ನು ಇಟ್ಟುಕೊಂಡು ಎಂಟ್ರಿ ನೀಡಿದ್ದಾನೆ. ಆದರೆ ಈ ವಿಡಿಯೋ ಯಾವಾಗಿಂದು ಅನ್ನೋದು ಸ್ಪಷ್ಟವಾಗಿಲ್ಲ.
ವಿಡಿಯೋ ವೈರಲ್ ಆಗ್ತಿದ್ದಂತೆಯೇ ಒಂದಷ್ಟು ಪ್ರಶ್ನೆಗಳು ಹುಟ್ಟಿಕೊಂಡಿವೆ.
ವಿಡಿಯೋದಲ್ಲಿ ಹಾವುಗಳು ಅಘೋರಿ ಬಾಬಾನನ್ನು ಕೆಣಕುತ್ತಿರುವುದು ಕಂಡು ಬರುತ್ತಿದೆ. ಆದರೆ ನಿಜವಾಗಲೂ ಆತ ಅಲ್ಲಿಗೆ ಬಂದಿದ್ದಾನಾ ಎಂಬುದು ಸ್ಪಷ್ಟವಾಗಿಲ್ಲ. ಕುಂಭಮೇಳದಲ್ಲಿ ವಿಚಿತ್ರ ಅಘೋರಿಗಳು ಮತ್ತು ಸಾಧುಗಳು ವಿಶೇಷ ಸಂತೆಯೇ ದೊಡ್ಡ ಆಕರ್ಷಣೆಯಾಗಿದೆ.
PublicNext
19/01/2025 01:43 pm