", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/235762-1737340673-Untitled-design-(81).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಬೆಂಗಳೂರು: ಬಿಗ್ ಬಾಸ್-11ರ ಸ್ಪರ್ಧಿಗೆ ದೊಡ್ಡ ರಜತ್ ಕುಟುಂಬಕ್ಕೆ ಟ್ರೋಲ್ ಪೇಜ್‌ಗಳು ದೊಡ್ಡ ತಲೆನೋವಾಗಿವೆ. ಕೆಲ ಟ್ರೊಲ್ ಪೇಜ್‌ಗಳು ರಜತ್ ಮಾ...Read more" } ", "keywords": "Bigg Boss Rajath, trolls, wife, money extortion, blackmailing, Bigg Boss contestant, Kannada Bigg Boss, reality TV show, social media trolls, online harassment, celebrity news, Rajath Bigg Boss. ,Bangalore,Bangalore-Rural,Crime", "url": "https://publicnext.com/node" } ಬೆಂಗಳೂರು: ಬಿಗ್ ಬಾಸ್ ರಜತ್ ಹಳೆ ಗೆಳತಿ ಫೋಟೋ ಹಾಕಿ ಪತ್ನಿಯಿಂದ ಹಣ ಪೀಕಿದ ಟ್ರೋಲರ್ಸ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಗ್ ಬಾಸ್ ರಜತ್ ಹಳೆ ಗೆಳತಿ ಫೋಟೋ ಹಾಕಿ ಪತ್ನಿಯಿಂದ ಹಣ ಪೀಕಿದ ಟ್ರೋಲರ್ಸ್

ಬೆಂಗಳೂರು: ಬಿಗ್ ಬಾಸ್-11ರ ಸ್ಪರ್ಧಿಗೆ ದೊಡ್ಡ ರಜತ್ ಕುಟುಂಬಕ್ಕೆ ಟ್ರೋಲ್ ಪೇಜ್‌ಗಳು ದೊಡ್ಡ ತಲೆನೋವಾಗಿವೆ. ಕೆಲ ಟ್ರೊಲ್ ಪೇಜ್‌ಗಳು ರಜತ್ ಮಾಜಿ ಗೆಳತಿ ಜೊತೆಗಿರೋ ಫೋಟೋ ವೈರಲ್ ಮಾಡಿವೆ.

ಫೋಟೋ ಡಿಲೀಟ್ ಮಾಡಿ ಎಂದು ಮೆಸೇಜ್ ಹಾಕಿದ ರಜತ್ ಪತ್ನಿ ಅಕ್ಷಿತಾ ಬಳಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಫೋಟೋ ಡಿಲಿಟ್ ಆದ್ರೆ ಸಾಕು ಅಂತ ಅಕ್ಷಿತಾ ಅಪರಿಚಿತ ವ್ಯಕ್ತಿ ನೀಡಿದ ಯುಪಿಐ ಐಡಿಗೆ ಹಣ ಹಾಕಿದ್ದಾರೆ. ಹಣ ಹಾಕಿದ‌ ನಂತರ ಬೇರೆ ಬೇರೆ ಟ್ರೋಲ್ ಪೇಜ್‌ನಲ್ಲಿ ಮತ್ತೆ ಫೋಟೋ ಅಪ್ಲೋಡ್ ಆಗಿದ್ದು ಮತ್ತೆ ಫೋಟೋ ಡಿಲೀಟ್ ಮಾಡಲು ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ.

ಟ್ರೋಲ್ ಪೇಜ್ ವಿರುದ್ಧ ಬೇಸತ್ತು ರಜತ್ ಪತ್ನಿ ಸೈಬರ್ ಠಾಣೆ ಮೆಟ್ಟಿಲೇರಿದ್ರು. ಪಶ್ಚಿಮ ವಿಭಾಗದ ಸೈಬರ್ ಠಾಣೆಯಲ್ಲಿ ಹತ್ತಕ್ಕೂ ಹೆಚ್ಚು ಟ್ರೋಲ್ ಪೇಜ್ ವಿರುದ್ಧ ಎಫ್.ಐ.ಆರ್ ದಾಖಲಿಸಿದ್ರು. ಎಫ್.ಐ.ಆರ್ ಆಗಿದ್ದಂತೆ ಟ್ರೋಲ್ ಪೇಜ್‌ನವರು ಫೋಟೋ ಡಿಲೀಟ್ ಮಾಡಿದ್ದಾರೆ.

ಫೋಟೋ ಅಪ್ಲೋಡ್ ಮಾಡಿದ ಅಕೌಂಟ್ ಕೂಡ ಡಿಆ್ಯಕ್ಟಿವ್ ಆಗಿದೆ. ಬ್ಲಾಕ್ ಮೇಲ್ ಮಾಡಿ ಹಣ ಸುಲಿಗೆ ಮಾಡಿದ ಅಪರಿಚಿತ ವ್ಯಕ್ತಿಯನ್ನ ಪೊಲೀಸ್ರು ವಶಕ್ಕೆ ಪಡೆದು ತಪ್ಪೊಪ್ಪಿಗೆ ಹೇಳಿಕೆ ಪಡೆದು ಬಿಟ್ಟು ಕಳುಹಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

20/01/2025 08:09 am

Cinque Terre

1.06 K

Cinque Terre

0