ಬೆಂಗಳೂರು: ಇಂದು ಬೆಳ್ಳಂಬೆಳಿಗ್ಗೆ ಬಿಎಂಟಿಸಿ ಬಸ್ ಬ್ರೇಕ್ ಫೇಲ್ ಆಗಿ ಅಂಗಡಿ ಒಳಗೆ ನುಗ್ಗಿತ್ತು. ಅನೇಕರ ಎದೆ ಬಡಿತಕ್ಕೆ ಕಾರಣ ಆದ ಈ ಘಟನೆಯಲ್ಲಿ ಸಾವು ನೋವು ಸಂಭವಿಸಿಲ್ಲ. ಆದ್ರೆ ನಾಗ ದೇವನಹಳ್ಳಿ ಅಂಗಡಿಗೆ ನುಗ್ಗಿದ ಬಸ್ ಎಫೆಕ್ಟ್ ಅಂಗಡಿ ಮಾಲೀಕನಿಗೆ ಸಾಕಷ್ಟು ಲಾಸ್ ಆಗಿದೆ.
ಈ ಡೆಡ್ಲಿ ಸ್ಪಾಟ್ ನಲ್ಲಿ 3-4 ಆ್ಯಕ್ಸಿಡೆಂಟ್ ನಡೆಯುತ್ತಂತೆ. ಆ್ಯಕ್ಸಿಡೆಂಟ್ ರಭಸಕ್ಕೆ ಅಂಗಡಿಯ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿ ಆಗಿದ್ದು ಒಂದು ಲಕ್ಷದಷ್ಟು ಹಣ ಲಾಸ್ ಆಗಿದೆ ಅಂತ ಬೀಡ ಅಂಗಡಿ ಮಾಲೀಕ ಮಾಹಿತಿ ಕೊಟ್ಟಿದ್ದಾರೆ. ಅದೃಷ್ಟವಶಾತ್ ಅಂಗಡಿ ಓಪನ್ ಮಾಡುವ ಮುಂಚೆ ಆಗಿದೆ. ಇಲ್ಲದಿದ್ರೆ ಮತ್ತಷ್ಟು ದುರಂತ ನಡೀತ್ತಿತ್ತು. ನಿತ್ಯವೂ ಅಂಗಡಿ ಮುಂದೆ ನೂರಾರು ಜನರು ಇರ್ತಾರೆ.
ಬೆಳಗ್ಗೆ 6:30ಗೆ ಘಟನೆ ಆಗಿರೋದರಿಂದ ಆಗೋ ಅವಾಂತರ ತಪ್ಪಿದ ಹಾಗಾಗಿದೆ.
PublicNext
19/01/2025 07:41 pm