ಬೆಂಗಳೂರು: ರಾಜ್ಯದಲ್ಲಿ ಗೋಹತ್ಯೆ ತಡೆಗೆ ಏನಾದರೂ ಉಪಾಯ ಕಂಡು ಹಿಡಿಯಬೇಕಿದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಈ ಕುರಿತಂತೆ ಮಾತನಾಡಿದ ಅವರು ಇತ್ತೀಚೆಗೆ ರಾಜ್ಯದಲ್ಲಿ ಗೋಹತ್ಯೆ ಕುರಿತು ವರದಿಗಳು ಹೆಚ್ಚಾಗುತ್ತಿವೆ. ಇದಕ್ಕೆ ಏನಾದ್ರೂ ಉಪಾಯ ಕಂಡು ಹಿಡಿಯಬೇಕಿದೆ. ಇಂಥ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಇಂತಹ ಮನಸ್ಥಿತಿ ಇರುವವರನ್ನ ಗುರುತಿಸಬೇಕು. ಅಲ್ಲದೇ ಇದರ ಹಿಂದೆ ಯಾವುದಾದರೂ ಸಂಘಟನೆ ಇದ್ಯಾ ನೋಡಬೇಕು. ಅಥವಾ ವೈಯಕ್ತಿಕವಾಗಿ ಇದ್ದಾರಾ ನೋಡಬೇಕು ಎಂದರು.
ನಿನ್ನೆ ಹೊನ್ನಾವರದಲ್ಲಿ ಗೋಹತ್ಯೆ ನಡೆದ ಘಟನೆ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಯಾರು ಇದರ ಹಿಂದೆ ಇದ್ದಾರೆ? ಯಾರಾದ್ರು ಪ್ರಚೋದನೆ ಮಾಡ್ತಿದ್ದಾರಾ? ಎಂಬುದನ್ನು ತನಿಖೆ ಮಾಡಿ ಕಂಡುಹಿಡಿಯಲಿದ್ದೇವೆ ಎಂದು ತಿಳಿಸಿದರು.
PublicNext
20/01/2025 06:52 pm