", "articleSection": "Government", "image": { "@type": "ImageObject", "url": "https://prod.cdn.publicnext.com/s3fs-public/405356-1737338744-plat.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SiddharthBng" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಬಿಡಿಎ ಫ್ಲ್ಯಾಟ್ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸ್ಥಳದಲ್ಲೇ ಠೇವಣಿ ಪಾವತಿ, ಅಲ್ಲೇ ಹಂಚಿಕೆ ಪತ್ರ ಜನ ಪಡೆದಿದ್ದಾರೆ. ಶನ...Read more" } ", "keywords": "BDA Flats, Bangalore Development Authority, Bengaluru, Affordable Housing, Flat Sales, BDA Flat Scheme, Karnataka Real Estate, Bangalore Properties, Housing Demand,Bangalore,Bangalore-Rural,Government", "url": "https://publicnext.com/node" }
ಬೆಂಗಳೂರು: ಬಿಡಿಎ ಫ್ಲ್ಯಾಟ್ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸ್ಥಳದಲ್ಲೇ ಠೇವಣಿ ಪಾವತಿ, ಅಲ್ಲೇ ಹಂಚಿಕೆ ಪತ್ರ ಜನ ಪಡೆದಿದ್ದಾರೆ. ಶನಿವಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿನ್ನೆ ಕಣಿಮಿಣಿಕೆಯಲ್ಲಿ ಫ್ಲ್ಯಾಟ್ ಮೇಳ ಆಯೋಜಿಸಿತ್ತು. ನಿರೀಕ್ಷೆಗೂ ಮೀರಿ ಸಾರ್ವಜನಿಕರು ಭಾಗಿಯಾಗಿದ್ದರು.ಮೇಳದಲ್ಲಿ ಸುಮಾರು 500ಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸಿದ್ದರು. ಈ ಪೈಕಿ 175 ಮಂದಿ ಫ್ಲ್ಯಾಟ್‌ಗಳನ್ನು ಖರೀದಿಸಿದ್ದಾರೆ.
ಇದರಲ್ಲಿ 75 ಮಂದಿ ಪ್ರಾರಂಭಿಕ ಠೇವಣಿಯನ್ನು ಸ್ಥಳದಲ್ಲಿಯೇ ಪಾವತಿಸಿದ್ದಾರೆ. ಹಂಚಿಕೆ ಪತ್ರ ಸಹ ಪಡೆದುಕೊಂಡಿದ್ದಾರೆ. 25 ಮಂದಿ ಚೆಕ್ ನೀಡಿದ್ದು, ಸೋಮವಾರ ಆರ್‌ಟಿಜಿಎಸ್ ಮೂಲಕ ಪಾವತಿಯಾದ ಬಳಿಕ ಹಂಚಿಕೆ ಪತ್ರವನ್ನು ಪಡೆಯುತ್ತಾರೆ. ಮೇಳದಲ್ಲಿ ಕಣಿಮಿಣಿಕೆ ಹಂತ 1 ಮತ್ತು 2ರಲ್ಲಿ 2 ಬಿಎಚ್‌ಕೆ ಮನೆಗಳನ್ನು ಮಾರಾಟ ಮಾಡಲಾಯಿತು. ಕಣಿಮಿಣಿಕೆ ಹಂತ-2 ರಲ್ಲಿ 2 ಬಿಎಚ್‌ಕೆ 650 ಚದರ ಅಡಿ ವಿಸ್ತೀರ್ಣದ ಫ್ಲ್ಯಾಟ್‌ಗಳ ದರ 25 ಲಕ್ಷ ರೂ ಆಗಿದ್ದು ಕಣಿಮಿಣಿಕೆ ಹಂತ -3 ರಲ್ಲಿ 2 ಬಿ ಎಚ್ ಕೆ 800 ಚ. ಅಡಿ ವಿಸ್ತೀರ್ಣದ ಫ್ಲ್ಯಾಟ್‌ಗಳ ದರ 30 ಲಕ್ಷ ರೂ ಆಗಿತ್ತು.
PublicNext
20/01/2025 07:37 am