", "articleSection": "Politics,Law and Order,Government", "image": { "@type": "ImageObject", "url": "https://prod.cdn.publicnext.com/s3fs-public/418299-1737368045-DARODE.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ರಾಜ್ಯದ ಬೀದರ್ ಮತ್ತು ಮಂಗಳೂರು ದರೋಡೆಕೋರರನ್ನ ಶೀಘ್ರದಲ್ಲೇ ಬಂಧಿಸುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಬೆಂಗಳ...Read more" } ", "keywords": "Bangalore, Bidar, Mangalore, Robbery Case, Arrests, Parameshwara, Karnataka News, Crime News, Police Investigation, Theft Case, Karnataka Police ¹.,Bangalore-Rural,Politics,Law-and-Order,Government", "url": "https://publicnext.com/node" }
ಬೆಂಗಳೂರು : ರಾಜ್ಯದ ಬೀದರ್ ಮತ್ತು ಮಂಗಳೂರು ದರೋಡೆಕೋರರನ್ನ ಶೀಘ್ರದಲ್ಲೇ ಬಂಧಿಸುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಅವರು, ಬೀದರ್,ಮಂಗಳೂರು ದರೋಡೆ ಪ್ರಕರಣದ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಶೀಘ್ರದಲ್ಲೇ ಬಂಧಿಸುತ್ತೇವೆ. ಪ್ರಕರಣ ತನಿಖೆ ನಡೆಯುತ್ತಿರುವುದರಿಂದ ಎಲ್ಲ ಮಾಹಿತಿಗಳನ್ನ ಮಾಧ್ಯಮಗಳ ಮುಂದೆ ಹೇಳುವುದಕ್ಕೆ ಆಗುವುದಿಲ್ಲ. ನಮ್ಮ ಟೀಂ ಈಗ ಎಲ್ಲಾ ಕಡೆ ಹೋಗಿದ್ದಾರೆ ಒಂದಿಷ್ಟು ನಿಖರ ಮಾಹಿತಿ ಸಿಕ್ಕಿದೆ ಎಂದರು.
ಈಗ ನಮಗೆ ಆರಂಭಿಕವಾಗಿ ಸಿಕ್ಕಿರುವ ಮಾಹಿತಿ ಪ್ರಕಾರ ಬೇರೆ ರಾಜ್ಯದವರು ಎನ್ನಲಾಗಿದೆ ಆದ್ರೆ ಯಾವ ರಾಜ್ಯ ಎಂದು ತಿಳಿದುಬಂದಿಲ್ಲ. ಆದ್ರೆ ನಮಗೆ ಒಂದಿಷ್ಟು ನಿಖರ ಮಾಹಿತಿ ಸಿಕ್ಕಿದೆ. ಅದರ ಆಧಾರದ ಮೇಲೆ ನಾವು ದರೋಡೆಕೋರರನ್ನ ಬಂಧಿಸುತ್ತೇವೆ ಎಂದು ತಿಳಿಸಿದರು.
ನಾವು ಈಗಾಗಲೇ ರಾಜ್ಯದ ಎಲ್ಲಾ ಕಡೆ ಎಟಿಎಂ ಮತ್ತು ಬ್ಯಾಂಕ್ ಗಳಲ್ಲಿ ಭದ್ರತೆಗೆ ಸೂಚಿಸಿದ್ದೇವೆ, ಎಟಿಎಂ ಮತ್ತು ಬ್ಯಾಂಕ್‌ನಲ್ಲಿ ಆರ್ಮಡ್ ಗಾರ್ಡ್ ಇರ್ತಾರೆ. ಆದ್ರೆ ಅವರು ಇಲ್ಲದ ಸಮಯ ನೋಡಿಕೊಂಡು ದರೋಡೆ ಮಾಡಿದ್ದಾರೆ. ಅವರು ಇದೆಲ್ಲದರ ಸೆಕ್ಯುರಿಟಿ ಟೈಟ್ ಮಾಡಿದ್ರೆ ಇದು ಎಲ್ಲರಿಗೂ ಅನುಕೂಲವಾಗುತ್ತೆ ಎಂದು ತಿಳಿಸಿದರು.
PublicNext
20/01/2025 03:44 pm