ಬೆಂಗಳೂರು : ಆರ್.ಆರ್ ನಗರ ವಲಯ ಹೆಚ್.ಎಂ.ಟಿ ವ್ಯಾಪ್ತಿಯಲ್ಲಿ ಬಿಬಿಎಂಪಿ ಜೆಸಿಬಿ ಘರ್ಜಿಸಿವೆ. ಕಾಲುವೆ ಒತ್ತುವರಿ ತೆರವುಗೊಳಿಸಿದ ಪಾಲಿಕೆ ಅದರ ಮೇಲೆ ಅನಧಿಕೃತವಾಗಿ ನಿರ್ಮಿಸಿದ್ದ ಶೆಡ್ಅನ್ನು ತೆರವುಗೊಳಿಸಿದೆ.
ಈ ಭಾಗದಲ್ಲಿ ಒತ್ತುವರಿಯಾಗಿದ್ದ 100 ಮೀ. ಪ್ರದೇಶವನ್ನು ಪಾಲಿಕೆ ಅಧಿಕಾರಿಗಳು ಜೆಸಿಬಿ ಮೂಲಕ ತೆರವು ಮಾಡಿದ್ದಾರೆ.. ಸುಮಾರು 35 ರಿಂದ 45 ಶೆಡ್‌ಗಳು ಸೇರಿ ಒಂದು ಗ್ಯಾರೇಜ್ ನಿರ್ಮಾಣವಾಗಿದ್ದು, ಅವುಗಳನ್ನು
ಸಂಪೂರ್ಣವಾಗಿ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಮತ್ತೆ ಒತ್ತುವರಿ ಮಾಡದಂತೆ ಸ್ಥಳದಲ್ಲಿ ವಾಸವಿದ್ದ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ.
PublicNext
20/01/2025 10:52 pm