ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಅಧಿಕಾರ ಹಂಚಿಕೆ, ಡಿನ್ನರ್ ಪಾಲಿಟಿಕ್ಸ್ ಹೀಗೆ ಒಂದಲ್ಲ ಒಂದು ವಿಚಾರದಲ್ಲಿ ಕೈ ನಾಯಕರ ಬಹಿರಂಗ ಹೇಳಿಕೆ ಪಕ್ಷದಲ್ಲಿ ಸಾಕಷ್ಟು ಗೊಂದಲಕ್ಕೆ ಕಾರಣವಾಗಿತ್ತು. ಆದ್ರಲ್ಲೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹೇಳಿಕೆ ಮತ್ತು ಡಿನ್ನರ್ ಮೀಟಿಂಗ್ ಪಕ್ಷದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಹಾಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧವೇ ಪರೋಕ್ಷವಾಗಿ ಅಹಿಂದ ನಾಯಕರು ಟಾರ್ಗೆಟ್ ಮಾಡಲಾಗುತ್ತಿದ್ಯಾ ಎಂದು ಪಕ್ಷದಲ್ಲೇ ಚರ್ಚೆ ಶುರುವಾಗಿತ್ತು.
ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಕೆ.ಎನ್ ರಾಜಣ್ಣ ನೇರವಾಗಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಬಹಿರಂಗ ಹೇಳಿಕೆಗಳನ್ನ ಕೊಟ್ಟಿದ್ದರು. ಪೂರ್ಣ ಪ್ರಮಾಣದಲ್ಲಿ ಅಧ್ಯಕ್ಷರನ್ನ ನೇಮಕ ಮಾಡಬೇಕು ಎಂದೆಲ್ಲ ಹೇಳಿಕೆಗಳ ವಿಷಯ ತಾರಕ್ಕಕ್ಕೆ ಹೋಗಿತ್ತು. ಅಲ್ದೇ ಶಾಸಕಾಂಗ ಪಕ್ಷದ ಸಭೆಯಲ್ಲೂ ಬೆಳಗಾವಿ ಡಿಸಿಸಿ ಕಚೇರಿ ವಿಚಾರವಾಗಿ ಡಿಕೆಶಿ ಮತ್ತು ಸತೀಶ್ ಜಾರಕಿಹೊಳಿ ನಡುವೆ ಬಿಗ್ ಫೈಟ್ ನಡೆದಿತ್ತು. ಇದರ ಜೊತೆಗೆ ಮುಖ್ಯಮಂತ್ರಿ ಬದಲಾವಣೆ ಚರ್ಚೆಯೂ ಪಕ್ಷದಲ್ಲಿ ಸಾಕಷ್ಟು ಗೊಂದಲ ಸೃಷ್ಟಿಸಿತ್ತು ಸಿಎಂ ಸಿದ್ದರಾಮಯ್ಯನರವೇ ಐದು ವರ್ಷ ಸಿಎಂ ಅಂತ ಕೆಲವರು ಇನ್ನೂ ಕೆಲವರು ಡಿಕೆಶಿ ಸಿಎಂ ಆಗೇ ಆಗ್ತಾರೆ ಎಂಬ ಹೇಳಿಕೆ ರಾಜ್ಯ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸಂದೇಶ ರವಾನೆಯಾಗುತಿತ್ತು.
ಕೊನೆಗೂ ಈ ಗೊಂದಲಗಳನ್ನ ತೆರೆಎಳೆಯುವುದಕ್ಕಾಗಿ
ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಂಟ್ರಿಯಾಗಿದ್ದಾರೆ. ಮೊನ್ನೆ ಬೆಂಗಳೂರಿನಲ್ಲಿ ಎಲ್ಲಾ ಸಚಿವರು ಮತ್ತು ಶಾಸಕರಿಗೆ ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ ಎಂದು ಖಡಕ್ ವಾರ್ನಿಂಗ್ ಕೊಟ್ಟರು. ಯಾರಿಗೆ ಯಾವ ಕೆಲಸ ವಹಿಸಿದ್ದೇವೋ ಆ ಕೆಲಸ ಸರಿಯಾಗಿ ಮಾಡಿಕೊಂಡು ಹೋಗಿ ಎಂದು ಬಹಿರಂಗ ಹೇಳಿಕೆ ಕೊಡುತ್ತಿದ್ದ ಕೈ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ಕೊಟ್ಟರು.
ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ಬೆನ್ನಲ್ಲೇ ಎಲ್ಲಾ ಕೈ ನಾಯಕರು ಫುಲ್ ಸೈಲೆಂಟ್ ಆಗಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗಲಿ ಅಥಾವ ಮುಖ್ಯಮಂತ್ರಿಯ ಅಧಿಕಾರ ಹಂಚಿಕೆಯ ವಿಚಾರವಾಗಲಿ ಡಿನ್ನರ್ ಮೀಟಿಂಗ್ ಬಗ್ಗೆಯಾಗಲಿ ಯಾರು ಹೆಚ್ಚು ಮಾತನಾಡುತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆಯ ವಾರ್ನಿಂಗ್ ಗೆ ಸಧ್ಯಕ್ಕೆ ಎಲ್ಲಾ ಕೈ ನಾಯಕರು ಗಪ್ ಚುಪ್ ಆಗಿದ್ದಾರೆ ಆದ್ರೆ ಅದು ಎಷ್ಟು ದಿನ ? ಗೊತ್ತಿಲ್ಲ ಇದು ಹೀಗೆ ಮುಂದುವರೆಯಲಿದ್ಯಾ ಅಥವಾ ಮತ್ತೆ ಗೊಂದಲಗಳು ಶುರುವಾಗುತ್ವಾ ಅನ್ನೋದನ್ನ ಕಾದು ನೋಡಬೇಕಿದೆ ಸಧ್ಯಕ್ಕೆ ಎಲ್ಲರೂ ಬೆಳಗಾವಿಯಲ್ಲಿ ನಡೆಯುವ ಗಾಂಧಿ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ.
PublicNext
20/01/2025 11:22 am