", "articleSection": "Politics,Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/387839-1737391767-Untitled-design---2025-01-20T221921.680.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಸಿಟಿ ರವಿ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಆ ಪದ ಬಳಸಿದ್ದು‌‌, ನಿಜ‌. ನಾನು ಅದನ್ನ ಸ್ಪಷ್ಟವಾಗಿ ಕೇಳಿಸಿಕೊಂಡಿದ್ದೇನೆ ಎಂದು ಸಿಐಡಿ ಅಧ...Read more" } ", "keywords": "CID Investigation, Yatindra Statement, CT Ravi Controversy, Hebbalkar Case, Karnataka Politics, Exclusive Interview, CID Probe, Political Controversy, Yatindra Clarifies, CT Ravi Remark.,,Politics,Crime,Law-and-Order", "url": "https://publicnext.com/node" } (Exclusive): ಹೆಬ್ಬಾಳ್ಕರ್‌ಗೆ ಸಿ.ಟಿ ರವಿ ಆ ಪದ ಬಳಸಿದ್ದು‌‌ ನಿಜ‌, ನಾನು ಸ್ಪಷ್ಟವಾಗಿ ಕೇಳಿಸಿಕೊಂಡಿದ್ದೇನೆ, - CID ಮುಂದೆ ಹೇಳಿಕೆ ದಾಖಲಿಸಿದ ಯತೀಂದ್ರ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

(Exclusive): ಹೆಬ್ಬಾಳ್ಕರ್‌ಗೆ ಸಿ.ಟಿ ರವಿ ಆ ಪದ ಬಳಸಿದ್ದು‌‌ ನಿಜ‌, ನಾನು ಸ್ಪಷ್ಟವಾಗಿ ಕೇಳಿಸಿಕೊಂಡಿದ್ದೇನೆ, - CID ಮುಂದೆ ಹೇಳಿಕೆ ದಾಖಲಿಸಿದ ಯತೀಂದ್ರ

ಬೆಂಗಳೂರು: ಸಿಟಿ ರವಿ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಆ ಪದ ಬಳಸಿದ್ದು‌‌, ನಿಜ‌. 'ನಾನು ಅದನ್ನ ಸ್ಪಷ್ಟವಾಗಿ ಕೇಳಿಸಿಕೊಂಡಿದ್ದೇನೆ ಎಂದು ಸಿಐಡಿ ಅಧಿಕಾರಿಗಳ ಮುಂದೆ ಯತೀಂದ್ರ ಸಿದ್ದರಾಮಯ್ಯ ತಮ್ಮ ಸ್ವ ಇಚ್ಚಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮೇಲ್ಮನೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಿಟಿ ರವಿ ಅವಾಚ್ಯ ಶಬ್ದ ಬಳಕೆ ಪ್ರಕರಣ ಸಂಬಂಧ ಇಂದು ಸಿಐಡಿ ಎದುರು ಯತೀಂದ್ರ ಸಿದ್ದರಾಮಯ್ಯ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆಯ Exclusive ಮಾಹಿತಿ ಪಬ್ಲಿಕ್ ನೆಕ್ಸ್ಟ್ ಗೆ ಲಭ್ಯವಾಗಿದೆ.

ಇಂದು ಸಿಐಡಿ ಕಚೇರಿ ಗುಪ್ತವಾಗಿ ಆಗಮಿಸಿದ ಯತೀಂದ್ರ ತನಿಖಾಧಿಕಾರಿಯಾದ ಡಿವೈಎಸ್ಪಿ ಕೇಶವಮೂರ್ತಿ ಮುಂದೆ ತಮ್ಮ ಹೇಳಿಕೆ ದಾಖಲಿಸಿದ್ದಾರೆ.

ಮೇಲ್ಮನೆಯಲ್ಲಿ ನಾನು ಆ ದಿನ ಲಕ್ಷ್ಮೀ ಹೆಬ್ಬಾಳ್ಕರ್ ಪಕ್ಕದಲ್ಲೆ ಕುಳಿತಿದ್ದೆ, ರಾಹುಲ್ ಗಾಂಧಿ ವಿಚಾರವಾಗಿ ಬಿಜೆಪಿಯವರು ಗಲಾಟೆ ಮಾಡಿದ್ರು. ಈ ವೇಳೆ ನಾವೂ ಮಾತಿಗೆ ಇಳಿದೆವು. ಈ ವೇಳೆ ಸಿ.ಟಿ ರವಿ ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ. ನಾನು ಅದನ್ನ ಸ್ಪಷ್ಟವಾಗಿ ಕೇಳಿಸಿಕೊಂಡಿದ್ದೇನೆ, ಎಂದು ಸಿಐಡಿ ಅಧಿಕಾರಿಗಳ‌ ಮುಂದೆ ಯತೀಂದ್ರ ಸಿದ್ದರಾಮಯ್ಯ ತಮ್ಮ ಹೇಳಿಕೆ ದಾಖಲಿಸಿದ್ದಾರೆ.‌

ಎಂಎಲ್‌ಸಿ ಬಿ.ಟಿ ಶ್ರೀನಿವಾಸ್‌ಗೂ ನೋಟಿಸ್ ನೀಡಿದ್ದು ನಾಳೆ ಬಿ.ಟಿ‌ ಶ್ರೀನಿವಾಸ್ ತಮ್ಮ ಹೇಳಿಕೆ ದಾಖಲಿಸೋ ಸಾಧ್ಯತೆಯಿದೆ.

Edited By : Abhishek Kamoji
PublicNext

PublicNext

20/01/2025 10:19 pm

Cinque Terre

48 K

Cinque Terre

5

ಸಂಬಂಧಿತ ಸುದ್ದಿ