", "articleSection": "Law and Order", "image": { "@type": "ImageObject", "url": "https://prod.cdn.publicnext.com/s3fs-public/405356-1737364493-room.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಲಂಚದ ಬೇಡಿಕೆಯ ಆರೋಪ ಜೊತೆಗೆ ಲೋಕಾಯುಕ್ತ ಕಚೇರಿಗೆ ಹಲವಾರು ದೂರುಗಳು ಬಂದ ಹಿನ್ನೆಲೆ ಮಾಪನ ಸೌಧದ ಮೇಲೆ ಉಪ ಲೋಕಾಯುಕ್ತರು ದಾಳಿ ನಡೆ...Read more" } ", "keywords": "Bengaluru, Lokayukta Raid, Measurement Shop, Corruption, Karnataka News, Bengaluru Crime, Lokayukta Investigation, Government Officials, Corruption Scandal, Measurement Scam.,Bangalore,Bangalore-Rural,Law-and-Order", "url": "https://publicnext.com/node" } ಬೆಂಗಳೂರು: ಮಾಪನ ಸೌಧದ ಮೇಲೆ ಉಪ ಲೋಕಾಯುಕ್ತರಿಂದ ದಾಳಿ... ಅಧಿಕಾರಿಗಳಿಗೆ ಫುಲ್ ಕ್ಲಾಸ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಾಪನ ಸೌಧದ ಮೇಲೆ ಉಪ ಲೋಕಾಯುಕ್ತರಿಂದ ದಾಳಿ... ಅಧಿಕಾರಿಗಳಿಗೆ ಫುಲ್ ಕ್ಲಾಸ್

ಬೆಂಗಳೂರು: ಲಂಚದ ಬೇಡಿಕೆಯ ಆರೋಪ ಜೊತೆಗೆ ಲೋಕಾಯುಕ್ತ ಕಚೇರಿಗೆ ಹಲವಾರು ದೂರುಗಳು ಬಂದ ಹಿನ್ನೆಲೆ ಮಾಪನ ಸೌಧದ ಮೇಲೆ ಉಪ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಉಪ ಲೋಕಾಯುಕ್ತರಾದ ಪಣೀಂದ್ರ ಮತ್ತು ಬಿ ವೀರಪ್ಪ ಸ್ಥಳಕ್ಕೆ ಖುದ್ದು ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಮೂವತ್ತಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ದಾಳಿಯಲ್ಲಿ ಭಾಗಿಯಾಗಿದ್ದಾರೆ...

ದಾಳಿ ವೇಳೆ ಅಧಿಕಾರಿಗಳು ಮುಂದಿನ ಹತ್ತು ದಿನಕ್ಕೂ ಮುಂಗಡವಾಗಿ ಹಾಜರಾತಿ ಹಾಕಿ ಹೋಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ...ಉಪ ಲೋಕಾಯುಕ್ತರಾದ ಪಣೀಂದ್ರ ಮತ್ತು ಬಿ ವೀರಪ್ಪ ರಿಜಿಸ್ಟರ್ ಬುಕ್ ಮುಂದೆ ಇಟ್ಕೊಂಡು ಅಧಿಕಾರಿಗಳನ್ನು ತರಾಟೆಗೆ ತೆಗದುಕೊಂಡಿದ್ದಾರೆ... ರೂಮ್ ಗಳನ್ನ ಯಾಕ್ರೀ ಬೀಗ ಹಾಕಿದ್ರಿ..? ರೂಮ್ ತೋರಿಸ್ಬೇಕು ಇವಾಗಲೇ.. ರೂಮ್ ಬೀಗ ಹಾಕೊಂಡ್ ಯಾಕ್ ಹೋಗಿದಾರೆ..? ಕೆಲಸದ ದಿನಗಳಲ್ಲಿ ಯಾಕೆ ಹಾಕಿದಾರೆ..? ಪಬ್ಲಿಕ್ ಆಫೀಸ್ ನಲ್ಲಿ ಯಾಕೆ ರಿಜಿಸ್ಟರ್ ಮೆಂಟೈನ್ ಇಲ್ಲ.. ಯಾಕೆ ಚೇಂಬರ್ ಗಳು, ರೂಮ್ ಗಳು ಲಾಕ್ ಹಾಕಿದಾರೆ..ಲಾಕ್ ಮಾಡ್ಕೊಂಡು ಹೋಗೋಕೆ ಯಾರು ಅಧಿಕಾರ ಕೊಟ್ಟಿದ್ದು..? ಗೌರ್ನಮೆಂಟ್ ನಲ್ಲಿ ರೂಲ್ಸ್ ಇದ್ಯಾ ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಎಲ್ಲಾ ಬೀಗ ಈಗಲೇ ತೆಗೆದುಕೊಂಡು ಬನ್ನಿ.. ಜನ್ರ ಟೈಮು ಯಾಕೆ ವೇಸ್ಟ್ ಮಾಡ್ತಿದೀರಾ ಎಂದು ಅಧಿಕಾರಿಗಳನ್ನ ಮುಂದೆ ನಿಲ್ಲಿಸಿಕೊಂಡು ಇಬ್ಬರು ಉಪ ಲೋಕಾಯುಕ್ತರು ಕ್ಲಾಸ್ ತೆಗೆದುಕೊಂಡಿದ್ದಾರೆ. ಇನ್ನು ಸಿಬ್ಬಂದಿ ಫೋನ್ ಪೇ ಚೆಕ್ ಮಾಡಿದ ಉಪಯುಕ್ತರಾದ ಬಿ ವೀರಪ್ಪ, ಜ್ಯೋತಿ ಎಂಬ ಸಿಬ್ಬಂದಿ ಫೋನ್ ಪೇ ಲಿಸ್ಟ್ ನೋಡಿ ಐವತ್ತು ಸಾವಿರ, ಒಂದು ಲಕ್ಷ ಹೇಗ್ರೀ ನಿಮ್‌ ಅಕೌಂಟ್ ಗೆ ಬಂತು..? ಏಳು ವರ್ಷಗಳಿಂದ ಕೆಲಸ ಮಾಡ್ತಿದೀರಾ..? ಟ್ರಾನ್ಸ್ ಫರ್ ಆಗಿಲ್ವಾ ಏಳು ವರ್ಷಗಳಿಂದ ಎಂದು ಕ್ಲಾಸ್ ತೆಗೆದುಕೊಂಡ್ರು.

Edited By : Vinayak Patil
PublicNext

PublicNext

20/01/2025 02:45 pm

Cinque Terre

19.3 K

Cinque Terre

2