ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು : ಸಹಕಾರ ಸಂಘದ ಎಲೆಕ್ಷನ್‌ಗೆ ಚುನಾವಣಾ ಅಧಿಕಾರಿ ಗೈರು

ಕೊಪ್ಪ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅತ್ತಿಕುಡಿಗೆ ಸಹಕಾರ ಪತ್ತಿನ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಇಂದು ನಿಗದಿಯಾಗಿತ್ತು. ಇದಕ್ಕೆ ಎಲ್ಲಾ ಸಿದ್ಧತೆಯನ್ನು ನಡೆಸಲಾಗಿತ್ತು, ಆದರೆ ಚುನಾವಣಾ ಅಧಿಕಾರಿ ಇಂದು ಬೆಳಿಗ್ಗೆ ಧೀಡಿರ್ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾರೆ.

ಚುನಾವಣಾ ಅಧಿಕಾರಿ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಒಂದು ಬಣದ ಸದಸ್ಯರು ಅಡ್ಮಿಟ್ ಆಗುವಂತೆ ಪಿತೂರಿ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. ನಾಮಪತ್ರ ಸಲ್ಲಿಕೆಗೆ ಇಂದು ಬೆಳಗ್ಗೆ 10:30 ರಿಂದ 12 ಗಂಟೆಯವರೆಗೆ ಸಮಯ ನಿಗದಿಯಾಗಿತ್ತು.

ಸಮಯ ಮುಗಿದ್ರು ಚುನಾವಣಾ ಅಧಿಕಾರಿಗಳು ಬರಲೇ ಇಲ್ಲ ಕೊನೆಗೆ ಚುನಾವಣಾಧಿಕಾರಿಗಳು ಅಡ್ಮಿಟ್ ಆಗಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಇದರ ಹಿಂದೆ ಪಿತೂರಿ ನಡೆದಿದೆ ಎಂದು ಬಿಜೆಪಿ ಬಣದ ಸದಸ್ಯರು ಆರೋಪಿಸಿದ್ದಾರೆ. ಅಲ್ಲದೇ ಇದು ಶಾಸಕರ ಅಧಿಕಾರ ದುರುಪಯೋಗ ಎಂದಿದ್ದಾರೆ.

Edited By : Vinayak Patil
Kshetra Samachara

Kshetra Samachara

20/01/2025 08:19 am

Cinque Terre

6.04 K

Cinque Terre

0

ಸಂಬಂಧಿತ ಸುದ್ದಿ