", "articleSection": "Public Feed,News,Public News", "image": { "@type": "ImageObject", "url": "https://prod.cdn.publicnext.com/s3fs-public/38854720250119043414filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "JayashekarKundapur" }, "editor": { "@type": "Person", "name": "9480206725" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕುಂದಾಪುರ: ಕೇಂದ್ರ ಗೃಹ ಸಚಿವ ಅಮಿತ್ ಷಾ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ಅವಹೇಳನಕಾರಿ ಮಾತಾಡಿರುವುದನ್ನು ಖಂಡಿಸಿ ಜನವರಿ ...Read more" } ", "keywords": "Node,Udupi,Public-Feed,News,Public-News", "url": "https://publicnext.com/node" }
ಕುಂದಾಪುರ: ಕೇಂದ್ರ ಗೃಹ ಸಚಿವ ಅಮಿತ್ ಷಾ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ಅವಹೇಳನಕಾರಿ ಮಾತಾಡಿರುವುದನ್ನು ಖಂಡಿಸಿ ಜನವರಿ 23ರಂದು ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘಟನೆಗಳ ಒಕ್ಕೂಟ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)ಅಂಬೇಡ್ಕರ್ ವಾದ ಕುಂದಾಪುರ ತಾಲೂಕು ಸಮಿತಿಯಿಂದ ಅತೀ ಹೆಚ್ಚು ಜನ ಭಾಗವಹಿಸಲು ನಿರ್ಧರಿಸಲಾಯಿತು.
ಈ ಕುರಿತು ಜನವರಿ 19ರಂದು ಕುಂದಾಪುರ ಅಂಬೇಡ್ಕರ್ ಭವನದಲ್ಲಿ ತಾಲೂಕು ಸಮಿತಿಯ ತುರ್ತು ಸಭೆ ನಡೆಸಲಾಯಿತು ಸಭೆಯಲ್ಲಿ ಪರಿಶಿಷ್ಟ ಜಾತಿ ಪಂಗಡಗಳಿಗರ ಭೂಮಿ ಹಂಚಿಯಲ್ಲಿ ಕಂದಾಯ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಮತ್ತು ತಾಲೂಕಿನ ಬಹುತೇಕ ಗ್ರಾಮ ಪಂಚಾಯತಿಗಳಲ್ಲಿ ಕುಲಷಿತ ಕುಡಿಯುವ ನೀರನ್ನು ಒದಗಿಸುತ್ತಿರುವುದನ್ನು ವಿರೋಧಿಸಿ ಕೂಡಲೇ ತಾಲೂಕು ಆಡಳಿತ ಪರಿಶಿಷ್ಟ ಜಾತಿ ಪಂಗಡಗಳ ವಿಶೇಷ ಸಭೆಯನ್ನು ಕರೆಯಬೇಕೆಂದು ಕುಂದಾಪುರ ದ ಸಂ ಸ ತಾಲೂಕು ಸಂಚಾಲಕ ಕೆ ಸಿ ರಾಜು ಬೆಟ್ಟಿನಮನೆ ಆಗ್ರಹಿಸಿದರು.
ಸಭೆಯಲ್ಲಿ ಜಲ್ಲಾ ಸಂಘಟನ ಸಂಚಾಲಕ ಸುರೇಶ್ ಹಕ್ಲಾಡಿ ಜಿಲ್ಲಾ ಸಮಿತಿ ಸದಸ್ಯ ಗೋಪಾಲಕೃಷ್ಣ ನಾಡ ತಾಲೂಕು ಕೋಶಾಧಿಕಾರಿ ಚಂದ್ರ ಕೊರ್ಗಿ ಸಂಘಟನ ಸಂಚಾಲಕರುಗಳಾದ ಚಂದ್ರ ಊಳ್ಳೂರು ಎಸ್ ಎಚ್ ಉದಯಕುಮಾರ್ ಅಶೋಕ ಮೊಳಹಳ್ಳಿ ಭಾಸ್ಕರ ಆಲೂರು, ಭವಾನಿ ನಾಯ್ಕ, ಶ್ರೀಕಾಂತ್ ಹಿಜಾಣ, ಸತೀಶ್ ರಾಮನಗರ, ಗ್ರಾಮ ಶಾಖೆ ಸಂಚಾಲಕರುಗಳಾದ ರಾಜು ಮೊಳಹಳ್ಳಿ, ಕುಷ್ಠ ಹರ್ಕೂರು, ಪ್ರದೀಪ್ ಹೊಸ್ಮಠ, ಸೂರ ನೈಕಂಭ್ಳಿ, ರಾಜು ಅಂಪಾರು, ಉದಯ ಮೋಳಹಳ್ಳಿ ಹಾಗೂ ಎಲ್ಲಾ ಗ್ರಾಮಶಾಖೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
19/01/2025 04:34 pm