", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/405356-1737221484-hana.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Rahim Ujire Udupi" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕಾಪು: ಸೆಕೆಂಡ್ ಹ್ಯಾಂಡ್ ಬಸ್ಸನ್ನು ಮಾರಾಟ ಮಾಡಿ ಅದನ್ನು ಕದ್ದು ತರಲಾಗಿದೆ ಎಂದು ಕಾಪು ಪೊಲೀಸ್ ಠಾಣೆಯಲ್ಲಿ ಎರಡು ದಿನಗಳ ಹಿಂದೆ ಪ್ರಕರಣವೊಂದು ...Read more" } ", "keywords": "Kaup, Second Hand Bus Theft, Samir Arrested, Karnataka Crime News, Udupi Police, Bus Theft Case, Indian Crime Stories, Kaup News.,Udupi,Mangalore,Crime", "url": "https://publicnext.com/node" }
ಕಾಪು: ಸೆಕೆಂಡ್ ಹ್ಯಾಂಡ್ ಬಸ್ಸನ್ನು ಮಾರಾಟ ಮಾಡಿ ಅದನ್ನು ಕದ್ದು ತರಲಾಗಿದೆ ಎಂದು ಕಾಪು ಪೊಲೀಸ್ ಠಾಣೆಯಲ್ಲಿ ಎರಡು ದಿನಗಳ ಹಿಂದೆ ಪ್ರಕರಣವೊಂದು ದಾಖಲಾಗಿತ್ತು. ಕಾಪು ಮಲ್ಲಾರುವಿನ ಸಮೀರ್ ಎಂಬವರು ತಮಗೆ ಸೆಕೆಂಡ್ ಹ್ಯಾಂಡ್ ಬಸ್ಸನ್ನು ಮಾರಿದ್ದು, ಆದರೆ ಅದನ್ನು ಕದ್ದು ಮರಳಿ ತಂದಿದ್ದಾರೆ ಎಂದು ತುಮಕೂರಿನ ಗೌಸ್ ಎಂಬವರು ಕಾಪು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆದರೆ, ಸದ್ಯ ವಿದೇಶದಲ್ಲಿದ್ದು, ಆರೋಪ ಎದುರಿಸುತ್ತಿರುವ ಸಮೀರ್, ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದು ನಾನು ಹಳೆಯ ಬಸ್ಸನ್ನು ಮಾರಿ ಆರು ತಿಂಗಳ ತನಕ ಹಣಕ್ಕಾಗಿ ಕಾದಿದ್ದೇನೆ. ಆದರೆ, ತುಮಕೂರಿನ ಗೌಸ್ ಎಂಬವರು ತನಗೆ ನೀಡಿದ ಚೆಕ್ ಬೌನ್ಸ್ ಆಗಿತ್ತು. ಆರು ತಿಂಗಳ ತನಕ ಹಣಕ್ಕಾಗಿ ಕಾದು, ಕೊನೆಗೆ ಹಣ ಕೊಡದೇ ಇದ್ದಾಗ ಬಸ್ಸನ್ನು ಮರಳಿ ತಂದಿದ್ದೇನೆ. ನಾನು ಕದ್ದುಕೊಂಡು ಬಂದಿಲ್ಲ. ಅವರು ನನಗೆ ಕೊಡಬೇಕಾದ ಹಣ ಕೊಟ್ಟಿಲ್ಲ ಎಂದು ಕಳ್ಳತನ ಆರೋಪ ಎದುರಿಸುತ್ತಿರುವ ಸಮೀರ್ ಹೇಳಿಕೊಂಡಿದ್ದಾರೆ.
PublicNext
18/01/2025 11:01 pm