", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/43595620250118095529filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Punith Mulki" }, "editor": { "@type": "Person", "name": "9448337190" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಗಳೂರು: ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಹೆಸರಿನಲ್ಲಿ ಮಹಿಳೆಗೆ 15.27 ಲಕ್ಷ ರೂ. ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ತನ್ನ ಫೇಸ್...Read more" } ", "keywords": "Node,Mangalore,Crime", "url": "https://publicnext.com/node" }
ಮಂಗಳೂರು: ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಹೆಸರಿನಲ್ಲಿ ಮಹಿಳೆಗೆ 15.27 ಲಕ್ಷ ರೂ. ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ತನ್ನ ಫೇಸ್‌ಬುಕ್‌ಗೆ ಆನ್‌ಲೈನ್ ಟ್ರೇಡಿಂಗ್‌ನ ಮಾಹಿತಿಯುಳ್ಳ ಮೆಸೇಜ್ ಬಂದಿತ್ತು. ಅದರಲ್ಲಿರುವ ಸಂಖ್ಯೆಗೆ ತಾನು ಸಂಪರ್ಕಿಸಿದಾಗ ವಾಟ್ಸ್ಆ್ಯಪ್‌ಗೆ ಲಿಂಕ್ ಬಂದಿತ್ತು. ಆ ಲಿಂಕ್‌ನ್ನು ತೆರೆದಾಗ ತನಗೆ ಆನ್‌ಲೈನ್ ಟ್ರೇಡಿಂಗ್ ಹಾಗೂ ಲಾಭದ ಆಮಿಷ ನೀಡಲಾಗಿತ್ತು. ಅದನ್ನು ನಂಬಿದ ತಾನು ಹಂತ ಹಂತವಾಗಿ 15,27,535 ರೂ.ಗಳನ್ನು ಹೂಡಿಕೆ ಮಾಡಿದ್ದೆ. ಅದನ್ನು ವಾಪಸ್ ಪಡೆಯಲು ಯತ್ನಿಸಿದಾಗ ಇನ್ನೂ ಹೆಚ್ಚುವರಿಯಾಗಿ 5 ಲಕ್ಷ ರೂ.ವನ್ನು ಹೂಡಿಕೆ ಮಾಡುವಂತೆ ತಿಳಿಸಲಾಯಿತು.
ತನ್ನ ಬಳಿ ಅಷ್ಟು ಹಣವಿಲ್ಲದ ಕಾರಣ ತಾನು ಮನೆಯವರಲ್ಲಿ ವಿಷಯ ತಿಳಿಸಿದೆ. ಅದರಂತೆ ಮನೆ ಮಂದಿ ಪರಿಶೀಲನೆ ನಡೆಸಿದಾಗ ತನಗೆ ನಕಲಿ ಟ್ರೇಡಿಂಗ್ ಆ್ಯಪ್ ಮೂಲಕ ಮಾಯಾಂಕ್ ಸಿಂಗ್ ಚಾಂದೇಲ್ ಮತ್ತು ರಜನಿಕಾಂತ್ ಥ್ಯಾಕರ್ ಎಂಬವರು ವಂಚನೆ ಮಾಡಿರುವುದು ತಿಳಿದು ಬಂದಿದೆ. ಬಂದರ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
Kshetra Samachara
18/01/2025 09:55 pm