", "articleSection": "Infrastructure,Crime,Law and Order,Government,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1737198404-V9~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "JayashekarKundapur" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕುಂದಾಪುರ: ಭಾರತದಲ್ಲಿ ಯಾವುದೇ ಕಾರಣಕ್ಕೂ ಬಡವರಾಗಿ ಹುಟ್ಟಬಾರದು ಎನ್ನುವುದು ಇದಕ್ಕೆ ಇರಬೇಕು. ನ್ಯಾಯಾಲಯ, ಕಾನೂನು, ಬಡವರ ಪರವಾಗಿದ್ದರೂ ಶ್ರೀಮ...Read more" } ", "keywords": ",Udupi,Mangalore,Infrastructure,Crime,Law-and-Order,Government,News,Public-News", "url": "https://publicnext.com/node" }
ಕುಂದಾಪುರ: ಭಾರತದಲ್ಲಿ ಯಾವುದೇ ಕಾರಣಕ್ಕೂ ಬಡವರಾಗಿ ಹುಟ್ಟಬಾರದು ಎನ್ನುವುದು ಇದಕ್ಕೆ ಇರಬೇಕು. ನ್ಯಾಯಾಲಯ, ಕಾನೂನು, ಬಡವರ ಪರವಾಗಿದ್ದರೂ ಶ್ರೀಮಂತರ ದಬ್ಬಾಳಿಕೆ ದೌರ್ಜನ್ಯಕ್ಕೆ ಅಧಿಕಾರಿಗಳೂ ಹಿಮ್ಮೆಟ್ಟಿ ಕುಳಿತುಕೊಳ್ಳುವ ವ್ಯವಸ್ಥೆ ಇರುವವರೆಗೂ ಬಡವರಿಗೆ, ದುರ್ಬಲರಿಗೆ ನ್ಯಾಯ ಮರೀಚಿಕೆಯಾಗಿಯೇ ಉಳಿಯುತ್ತದೆ ಎನ್ನುವ ಮಾತುಗಳು ಹೆಬ್ರಿ ತಾಲೂಕಿನ ಶೇಡಿಮನೆ ವ್ಯಾಪ್ತಿಯ ಕೆಸ್ಕಾರ್ ಜೆಡ್ಡು ನಿವಾಸಿಯಾಗಿರುವ ಈ ಮಹಿಳೆಗೆ ನಡೆಯುತ್ತಿರುವ ದೌರ್ಜನ್ಯದಿಂದ ಸಾಬೀತಾದಂತಿದೆ.
ಈಕೆಯ ಹೆಸರು ಸುಮತಿ ಹಾಂಡ್ತಿ. ಕಳೆದ ಇಪ್ಪತ್ತೈದು ವರ್ಷಗಳಿಂದ ಶೇಡಿಮನೆಯ ಕೆಸ್ಕಾರ್ ಜೆಡ್ಡು ಎಂಬಲ್ಲಿ ಮನೆ ಕಟ್ಟಿ ಕುಳಿತುಕೊಂಡಿದ್ದಾರೆ. 90 ವರ್ಷ ಪ್ರಾಯದ ಅಮ್ಮ ಅಜ್ಜಿಯಾಗಿ ದಿನ ಲೆಕ್ಕ ಹಾಕುತ್ತಿದ್ದಾರೆ. ಗಂಡ ಮಾನಸಿಕ ಅಸ್ವಸ್ಥ. ಇರುವ ಒಬ್ಬನೇ ಮಗನಿಗಾಗಿ ಹೋರಾಟ ಮಾಡುತ್ತಿರುವ ಸುಮತಿ ಹಾಂಡ್ತಿ, ಕಳೆದ ಸುಮಾರು ಆರೇಳು ವರ್ಷಗಳಿಂದ ಮನೆ ಬಾಗಿಲಿಗೆ ಬರುವ ಸಂಪರ್ಕವನ್ನೇ ಕಳೆದುಕೊಂಡಿದ್ದಾರೆ. ಮನೆ ಸಮೀಪದ ಕೃಷ್ಣ ಕುಲಾಲ್ ಎಂಬುವರು ಸುಮತಿ ಹಾಂಡ್ತಿಯವರ ಮನೆಗೆ ಬರುವ ಸರ್ಕಾರಿ ಜಾಗದಲ್ಲಿದ್ದ ರಸ್ತೆಯನ್ನು ಮುಚ್ಚಿ ಅಕ್ರಮವಾಗಿ ಅಡಿಕೆ, ತೆಂಗಿನ ಗಿಡಗಳನ್ನು ನೆಟ್ಟು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ನ್ಯಾಯಾಲಯ, ಪೊಲೀಸ್ ಠಾಣೆ, ಕಾನೂನು ಅಂತ ಅಲೆದ ಸುಮತಿ ಹಾಂಡ ಅವರಿಗೆ ಎಲ್ಲಾ ಕಡೆ ಗೆಲುವು ಸಿಕ್ಕಿದೆ. ಆದರೆ ಕೃಷ್ಣ ಕುಲಾಲ್ ಮನೆಯವರು ನೀಡುತ್ತಿರುವ ಟಾರ್ಚರ್‌ನಿಂದ ಸುಮತಿ ಅಸಾಹಯಕರಾಗಿದ್ದಾರೆ. ಅಲ್ಲದೇ ಅಕ್ರಮ ತೆರವುಗೊಳಿಸಿ ರಸ್ತೆಗೆ ಅವಕಾಶ ನೀಡಬೇಕಾಗಿದ್ದ ಅಧಿಕಾರಿಗಳು ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಪಬ್ಲಿಕ್ ನೆಕ್ಸ್ಟ್ ಮೊರೆ ಬಂದಿದ್ದಾರೆ ಸುಮತಿ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ, ಸಂತ್ರಸ್ತೆ ಸುಮತಿ ಹಾಂಡ್ತಿಗೆ ನ್ಯಾಯ ದೊರಕಿಸಿಕೊಡುವರೇ ಕಾದು ನೋಡಬೇಕಿದೆ. ಅಧಿಕಾರಿಗಳು ಮತ್ತು ಸಂಬಂಧಪಟ್ಟ ಇಲಾಖೆಗಳು ಮಹಿಳಾ ದೌರ್ಜನ್ಯ ಅಡಿಯಲ್ಲಿ ತಪ್ಪಿಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಆ ಮೂಲಕ ಕಾನೂನು ಮತ್ತು ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಬೇಕಿದೆ ಎನ್ನುವುದೇ ಪಬ್ಲಿಕ್ ನೆಕ್ಸ್ಟ್ ಆಶಯ.
ಜಯಶೇಖರ್ ಮಡಪ್ಪಾಡಿ, ಪಬ್ಲಿಕ್ ನೆಕ್ಸ್ಟ್ ಕುಂದಾಪುರ'
Kshetra Samachara
18/01/2025 04:36 pm