", "articleSection": "Accident", "image": { "@type": "ImageObject", "url": "https://prod.cdn.publicnext.com/s3fs-public/405356-1737217920-tank.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Rahim Ujire Udupi" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಉಡುಪಿ: ರಾಷ್ಟ್ರೀಯ ಹೆದ್ದಾರಿಯ ನಡುವೆ ಮುಗುಚಿ ಬಿದ್ದ ಗ್ಯಾಸ್ ಟ್ಯಾಂಕರ್ ತೆರವು ಕಾರ್ಯಾಚರಣೆ ನಡೆದಿದೆ.‌ ಉಡುಪಿ ಕಿನ್ನಿಮುಲ್ಕಿ ಬಳಿ ಹಾದುಹೋಗು...Read more" } ", "keywords": "Udupi, Hazardous Gas Tanker, Scientific Highway Project, Infrastructure Development, Karnataka News, Road Safety, Gas Tanker Removal, Indian Highway Authority,Mangalore,Accident", "url": "https://publicnext.com/node" } ಉಡುಪಿ: ಅಪಾಯಕಾರಿ ಗ್ಯಾಸ್ ಟ್ಯಾಂಕರ್ ತೆರವು - ವೈಜ್ಞಾನಿಕ ಹೆದ್ದಾರಿ ಕಾಮಗಾರಿಗೆ ಇಲಾಖೆ ಒತ್ತು ನೀಡಲಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅಪಾಯಕಾರಿ ಗ್ಯಾಸ್ ಟ್ಯಾಂಕರ್ ತೆರವು - ವೈಜ್ಞಾನಿಕ ಹೆದ್ದಾರಿ ಕಾಮಗಾರಿಗೆ ಇಲಾಖೆ ಒತ್ತು ನೀಡಲಿ

ಉಡುಪಿ: ರಾಷ್ಟ್ರೀಯ ಹೆದ್ದಾರಿಯ ನಡುವೆ ಮುಗುಚಿ ಬಿದ್ದ ಗ್ಯಾಸ್ ಟ್ಯಾಂಕರ್ ತೆರವು ಕಾರ್ಯಾಚರಣೆ ನಡೆದಿದೆ.‌ ಉಡುಪಿ ಕಿನ್ನಿಮುಲ್ಕಿ ಬಳಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ನಡೆದ ಈ‌ ಅವಘಡದಿಂದ ಭಾರೀ ಅನಾಹುತ ತಪ್ಪಿಹೋಗಿದ್ದು ಸದ್ಯ ಟ್ಯಾಂಕರ್ ನ್ನು ಕ್ರೇನ್ ಮೂಲಕ ತೆರವು ಮಾಡಲಾಗಿದೆ.

ಒಂದೆಡೆ ಅಂಬಲಪಾಡಿ ಜಂಕ್ಷನ್‌ನಲ್ಲಿ ಫ್ಲೈ ಓವರ್ ಕಾಮಗಾರಿಗೆ ರಾತ್ರೋರಾತ್ರಿ ಹೆದ್ದಾರಿ ಅಗೆದು ರಸ್ತೆ ಕ್ಲೋಸ್ ಮಾಡಿ ಎಲ್ಲಾ ವಾಹನಗಳನ್ನು ಸರ್ವಿಸ್ ರಸ್ತೆಗೆ ಬಿಡಲಾಗಿದೆ. ಸರ್ವಿಸ್ ರಸ್ತೆ ಕೂಡ ಅವೈಜ್ಞಾನಿಕವಾಗಿರೋದ್ರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವಘಡಗಳು ನಡೆಯುತ್ತಲೇ ಇವೆ.‌ ಈಗ ಗ್ಯಾಸ್ ಟ್ಯಾಂಕರ್ ಮುಗಿಚಿ ಬಿದ್ದಿದ್ದು ಎಚ್ಚರಿಕೆ ಗಂಟೆಯಾಗಿದೆ. ಮುಂದೆ ಯಾವುದೇ ಅವಘಡ ನಡೆಯದಂತೆ ಹೆದ್ದಾರಿ ಕಾಮಗಾರಿಯನ್ನು ವೈಜ್ಞಾನಿಕ ರೀತಿಯಲ್ಲೇ ನಡೆಸುವಂತೆ ಜಿಲ್ಲಾಡಳಿತ ಅಧಿಕಾರಿಗಳ ಕಿವಿಹಿಂಡುವ ಅನಿವಾರ್ಯತೆ ಇದೆ.

Edited By : Vinayak Patil
PublicNext

PublicNext

18/01/2025 10:03 pm

Cinque Terre

32.53 K

Cinque Terre

0

ಸಂಬಂಧಿತ ಸುದ್ದಿ