", "articleSection": "Public Feed,News,Public News", "image": { "@type": "ImageObject", "url": "https://prod.cdn.publicnext.com/s3fs-public/38854720250119042554filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "JayashekarKundapur" }, "editor": { "@type": "Person", "name": "9480206725" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕುಂದಾಪುರ: ಮಕ್ಕಳೇ ಹೊಸ ಜಗತ್ತಿನ ನಿಜವಾದ ಸೃಷ್ಟಿಕರ್ತರು. ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಶಿಕ್ಷಣ ಮತ್ತು ಮೌಲ್ಯಯುತವಾದ ಮಾಹಿತಿ ಪಡೆದರೆ ಉತ್ತ...Read more" } ", "keywords": "Node,Udupi,Public-Feed,News,Public-News", "url": "https://publicnext.com/node" }
ಕುಂದಾಪುರ: ಮಕ್ಕಳೇ ಹೊಸ ಜಗತ್ತಿನ ನಿಜವಾದ ಸೃಷ್ಟಿಕರ್ತರು. ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಶಿಕ್ಷಣ ಮತ್ತು ಮೌಲ್ಯಯುತವಾದ ಮಾಹಿತಿ ಪಡೆದರೆ ಉತ್ತಮ ವ್ಯಕ್ತಿತ್ವವನ್ನು ಹೊಂದಲು ಸಾಧ್ಯವಾಗುತ್ತದೆ.
ಮಾನಸಿಕ ಒತ್ತಡಗಳನ್ನು ನಿಭಾಯಿಸಲು ಅಗತ್ಯ ಮಾರ್ಗದರ್ಶನ ಕಾಲ ಕಾಲಕ್ಕೆ ನೀಡಬೇಕು. ಪೋಷಕರು ಪರೀಕ್ಷೆ ಸಮಯದಲ್ಲಿ ಸಾಧ್ಯವಾದಷ್ಟು ಮನೆಯಲ್ಲಿ ಉತ್ತಮ ವಾತಾವರಣ ಕಲ್ಪಿಸಬೇಕು ಮತ್ತು ಮಕ್ಕಳ ಮನಸಿನ ಮೇಲೆ ಧನಾತ್ಮಕ ಒತ್ತಡ ಹಾಕಬೇಕು. ಪರೀಕ್ಷೆ ಸಮೀಪಿಸಿದಂತೆ ಹೆಚ್ಚು ಒತ್ತಡಕ್ಕೆ ಒಳಗಾಗುವುದನ್ನು ತಪ್ಪಿಸಲು ಸಮಯ ಹೊಂದಾಣಿಕೆ ಮಾಡಿಕೊಳ್ಳುವುದು ಬಹಳ ಮುಖ್ಯ"ಎಂದು ಖ್ಯಾತ ಮನೋವೈದ್ಯ, ಸಂಪನ್ಮೂಲ ವ್ಯಕ್ತಿ ಡಾ.ವಿರೂಪಾಕ್ಷ ದೇವರಮನೆ ಹೇಳಿದರು. ಅವರು ಯಡಾಡಿ- ಮತ್ಯಾಡಿ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಪೋಷಕ- ಶಿಕ್ಷಕ ಒರಿಯೆಂಟೇಶನ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಾ.ರಮೇಶ್ ಶೆಟ್ಟಿ ಮಾತನಾಡಿ, "ಯಾವುದೇ ಒಂದು ಸಂಸ್ಥೆಯ ಪ್ರಗತಿಯಲ್ಲಿ ಪೋಷಕರು ಪಾತ್ರ ಮಹತ್ತರವಾಗಿರುತ್ತದೆ.ಪೋಷಕರು ಶಾಲೆಯ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿದಾಗ ಉತ್ತಮ ಯಶಸ್ಸು ಕಾಣಲು ಸಾಧ್ಯವಾಗುತ್ತದೆ" ಎಂದರು.
ಇದೇ ಸಂದರ್ಭ ಹೃದಯ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿ ತ್ರಿಶಿಕಾಳ ಹೃದಯ ಶಸ್ತ್ರ ಚಿಕಿತ್ಸೆಗೆ ಶಾಲಾ ಆಡಳಿತ ಮಂಡಳಿ, ಪೋಷಕರು ಮತ್ತು ಶಿಕ್ಷಕಿ ವೃಂದದವರು ನೀಡಿದ ದೇಣಿಗೆ ಸಹಾಯಧನ ಒಟ್ಟು 3 ಲಕ್ಷ ಮೊತ್ತವನ್ನು ಹಸ್ತಾಂತರಿಸಲಾಯಿತು.
ಶಾಲಾ ಆಡಳಿತ ಮಂಡಳಿಯ ಖಜಾಂಚಿ ಭರತ್ ಶೆಟ್ಟಿ ಪ್ರಾಸ್ತಾವಿಸಿದರು. ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಪ್ರದೀಪ್ ಕೆ.ಉಪಸ್ಥಿತರಿದ್ದರು. ಸಹಶಿಕ್ಷಕಿ ಪ್ರೇಮ ನಿರೂಪಿಸಿದರು. ಸಹಶಿಕ್ಷಕಿ ವಿನುತ ಸ್ವಾಗತಿಸಿ, ಸಹ ಶಿಕ್ಷಕ ರಜತ್ ಭಟ್ ವಂದಿಸಿದರು.
Kshetra Samachara
19/01/2025 04:25 pm