", "articleSection": "Infrastructure,Government,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1737199520-A10~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Rahim Ujire Udupi" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಉಡುಪಿ: ಸರ್ಕಾರಿ ಬಸ್ ದರ ಏರಿಕೆ ಬೆನ್ನಲ್ಲೇ ಇದೀಗ, ಖಾಸಗಿ ಬಸ್ ಪ್ರಯಾಣ ದರ ಹೆಚ್ಚಳದ ಎಲ್ಲಾ ಸಾಧ್ಯತೆಗಳಿವೆ. ಮುಂದಿನ 10 ದಿನಗಳಲ್ಲಿ ದರ ಪರಿಷ್...Read more" } ", "keywords": ",Udupi,Mangalore,Infrastructure,Government,News,Public-News", "url": "https://publicnext.com/node" }
ಉಡುಪಿ: ಸರ್ಕಾರಿ ಬಸ್ ದರ ಏರಿಕೆ ಬೆನ್ನಲ್ಲೇ ಇದೀಗ, ಖಾಸಗಿ ಬಸ್ ಪ್ರಯಾಣ ದರ ಹೆಚ್ಚಳದ ಎಲ್ಲಾ ಸಾಧ್ಯತೆಗಳಿವೆ. ಮುಂದಿನ 10 ದಿನಗಳಲ್ಲಿ ದರ ಪರಿಷ್ಕರಣೆಗೆ ಅವಕಾಶ ಸಿಗಲಿದೆ ಎಂದು ಖಾಸಗಿ ಬಸ್ ಮಾಲಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಚಿವರನ್ನು ಭೇಟಿಯಾಗಿ ಈ ಕುರಿತು ಚರ್ಚಿಸಿದ್ದಾರೆ.
ಖಾಸಗಿ ಬಸ್ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಸುರೇಶ್ ನಾಯಕ್ ಮಾತನಾಡಿ ,ಸಾರಿಗೆ ಸಚಿವರನ್ನು ಖಾಸಗಿ ಬಸ್ ಮಾಲಕರು ಭೇಟಿಯಾಗಿದ್ದೇವೆ. ನಮ್ಮ ಸಮಸ್ಯೆ ಸಚಿವರಿಗೂ ಗೊತ್ತಿದೆ. ದರ ಪರಿಷ್ಕರಣೆ ಅನಿವಾರ್ಯತೆಯ ಬಗ್ಗೆ ಮನವರಿಕೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಈ ಹಿಂದೆ ಸರ್ಕಾರ ಒಂದು ನೋಟಿಫಿಕೇಶನ್ ಮಾಡ್ತಾ ಇತ್ತು. ಆ ನೋಟಿಫಿಕೇಶನ್ ಪ್ರಕಾರ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ಇಬ್ಬರಿಗೂ ದರ ಏರಿಕೆಗೆ ಅವಕಾಶ ಇತ್ತು. ಆದರೆ ಈ ಬಾರಿ ತರಾತುರಿಯಲ್ಲಿ ಕೆಎಸ್‌ಆರ್‌ಟಿಸಿ ದರ ಏರಿಕೆ ಮಾಡಿಲಾಗಿದೆ.ನಮ್ಮ ಮನವಿಗೆ ಸ್ಪಂದಿಸಿ ಶೀಘ್ರ ಕ್ರಮ ಕೈಗೊಳ್ಳುವ ಭರವಸೆಯನ್ನು ಸಚಿವರು ಹಾಗೂ ಕಾರ್ಯದರ್ಶಿಗಳು ನೀಡಿದ್ದಾರೆ.
ಶೀಘ್ರವೇ ಖಾಸಗಿ ಬಸ್ ದರ ಏರಿಕೆಗೆ ನೋಟಿಫಿಕೇಶನ್ ಬರಬಹುದು. ನೋಟಿಫಿಕೇಶನ್ ಬಂದ ನಂತರ ಯಾವ ಭಾಗದಲ್ಲಿ ಎಷ್ಟು ದರ ಏರಿಕೆ ಮಾಡಬಹುದು ಎಂದು ತೀರ್ಮಾನ ಮಾಡುತ್ತೇವೆ. ಖಾಸಗಿ ಬಸ್‌ನವರು ಕೂಡ ಶೇಕಡ 15 ರಷ್ಟು ಏರಿಕೆಗೆ ಅವಕಾಶ ಕೇಳಿದ್ದೇವೆ ಎಂದು ಹೇಳಿದ್ದಾರೆ.
PublicNext
18/01/2025 04:55 pm