", "articleSection": "Politics,Infrastructure", "image": { "@type": "ImageObject", "url": "https://prod.cdn.publicnext.com/s3fs-public/405356-1737214476-aaaaa.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Shivaram Bramhavar" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬ್ರಹ್ಮಾವರ: ಆರೋಗ್ಯ ಮತ್ತು ಪ್ರವಾಸೋದ್ಯಮಕ್ಕೆ ಮಹತ್ವ ನೀಡುವ ಉದ್ದೇಶದಿಂದ ರೋಯಲ್ ಪಾರ್ಟ್ಸ್ ಮಾರ್ಕೆಟಿಂಗ್ ಬ್ರಹ್ಮಾವರ ಇವರಿಂದ ಆರ್‌ಪಿಎಂ ಒ...Read more" } ", "keywords": "Udupi Tourism, Brahmagiri, Karnataka Travel, Indian Tourism Industry,Udupi,Mangalore,Politics,Infrastructure", "url": "https://publicnext.com/node" } ಬ್ರಹ್ಮಾವರ: ಉಡುಪಿ ಜಿಲ್ಲೆ ಪ್ರವಾಸೋದ್ಯಮಕ್ಕೆ ಹೆಚ್ಚು ಮಹತ್ವ ನೀಡಬೇಕು - ಕೋಟ ಶ್ರೀನಿವಾಸ ಪೂಜಾರಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಉಡುಪಿ ಜಿಲ್ಲೆ ಪ್ರವಾಸೋದ್ಯಮಕ್ಕೆ ಹೆಚ್ಚು ಮಹತ್ವ ನೀಡಬೇಕು - ಕೋಟ ಶ್ರೀನಿವಾಸ ಪೂಜಾರಿ

ಬ್ರಹ್ಮಾವರ: ಆರೋಗ್ಯ ಮತ್ತು ಪ್ರವಾಸೋದ್ಯಮಕ್ಕೆ ಮಹತ್ವ ನೀಡುವ ಉದ್ದೇಶದಿಂದ ರೋಯಲ್ ಪಾರ್ಟ್ಸ್ ಮಾರ್ಕೆಟಿಂಗ್ ಬ್ರಹ್ಮಾವರ ಇವರಿಂದ ಆರ್‌ಪಿಎಂ ಒಸಿಯನ್ 69 ರೆಸಾರ್ಟ್ನ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಶನಿವಾರ ಉದ್ಘಾಟಿಸಿದರು.

ಅವರು ಈ ಸಂದರ್ಭ ಮಾತನಾಡಿ ಕರಾವಳಿ ಜಿಲ್ಲೆಯ ಪ್ರಕೃತಿ ಸೌಂದರ್ಯ ,ಜನಪದ, ಕಲೆ, ಸಂಸ್ಕೃತಿ, ಶಿಕ್ಷಣ, ನದಿತೊರೆ,ಕಡಲು ನಾನಾ ಧಾರ್ಮಿಕ ಕೇಂದ್ರ, ದೇವಸ್ಥಾನಗಳನ್ನು ಹೊರ ಜಗತ್ತಿಗೆ ಪರಿಚಯಿಸುವ ಕಾರ್ಯ ಹೆಚ್ಚು ನಡೆಯಬೇಕಾಗಿದೆ ಎಂದರು. ಇದೇ ಸಂದರ್ಭದಲ್ಲಿ ಸಂಸದರನ್ನು ಸಂಸ್ಥೆಯ ಮುಖ್ಯಸ್ಥ ಪ್ರಶಾಂತ ಪೂಜಾರಿ ಮತ್ತು ಆರತಿ ಪೂಜಾರಿ ಸಂಸ್ಥೆಯ ವತಿಯಿಂದ ಗೌರವಿಸಿದರು. ಸಂಸ್ಥೆ ಪ್ರಗತಿ ಸಾಧಿಸಲು ಕಾರಣರಾದ ಅನೇಕರನ್ನು ಪುರಸ್ಕರಿಸಲಾಯಿತು. ಕೆನರಾ ಬ್ಯಾಂಕ್ ಅಧಿಕಾರಿಗಳಾದ ಸಂಜಯ್ ಏ. ಭಟಾಲೆ,ಪ್ರತಿಭಾ ಪಾಮಿಡಿ, ಬೆಂಗಳೂರು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನದ ಧರ್ಮದರ್ಶಿ ನಾಗೇಂದ್ರ ಕಾಮತ್, ಕಾರ್ಯಕ್ರಮ ವ್ಯವಸ್ಥಾಪಕ ರಸೂಲ್ ಕಟಪಾಡಿ ಉಪಸ್ಥಿತರಿದ್ದರು. ಅನೇಕ ಗಣ್ಯರು ಆಗಮಿಸಿ ಸಂಸ್ಥೆಗೆ ಶುಭ ಹಾರೈಸಿದರು.

Edited By : Vinayak Patil
PublicNext

PublicNext

18/01/2025 09:04 pm

Cinque Terre

24.69 K

Cinque Terre

1

ಸಂಬಂಧಿತ ಸುದ್ದಿ