", "articleSection": "Cultural Activity", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/435956_1737264553_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Punith Mulki" }, "editor": { "@type": "Person", "name": "9448337190" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮುಲ್ಕಿ: ಕಾರ್ನಾಡ್ ಹಿಮಾಯತುಲ್ ಇಸ್ಲಾಂ ಸಮಿತಿಯ 48ನೇ ವಾರ್ಷಿಕೋತ್ಸವದ ಸಮಾರೋಪ ಕಾರ್ಯಕ್ರಮ,ಬಡ ಮುಸ್ಲಿಂ ಹೆಣ್ಣು ಮಕ್ಕಳ ಮದುವೆಗಾಗಿ ದನ ಸಹಾಯ, ...Read more" } ", "keywords": "Node,Mangalore,Cultural-Activity,Udupi", "url": "https://publicnext.com/node" }
ಮುಲ್ಕಿ: ಕಾರ್ನಾಡ್ ಹಿಮಾಯತುಲ್ ಇಸ್ಲಾಂ ಸಮಿತಿಯ 48ನೇ ವಾರ್ಷಿಕೋತ್ಸವದ ಸಮಾರೋಪ ಕಾರ್ಯಕ್ರಮ,ಬಡ ಮುಸ್ಲಿಂ ಹೆಣ್ಣು ಮಕ್ಕಳ ಮದುವೆಗಾಗಿ ದನ ಸಹಾಯ, ಧಾರ್ಮಿಕ ಮತ ಪ್ರವಚನ ಹಾಗೂ ಸಾಧಕರಿಗೆ ಗೌರವ ಕಾರ್ಯಕ್ರಮ ಕಾರ್ನಾಡ್ ದರ್ಗಾ ರಸ್ತೆಯ ಝಿಂದಾ ಮದರ್ ಷಾ ದರ್ಗಾ ವಠಾರದಲ್ಲಿ ಶನಿವಾರ ಸಂಜೆ ನಡೆಯಿತು.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಸಮಸ್ತ ಕೇಂದ್ರ ಮುಶಾವರ ಸದಸ್ಯ ಹಾಗೂ ಮುಲ್ಕಿ ಶಾಫಿ ಜುಮ್ಮಾ ಮಸೀದಿ ಖತಿಬ ಉಸ್ಮಾನುಲ್ ಫೈಝಿ ತೊಡಾರ್ ನೆರವೇರಿಸಿದರು. ಮುಖ್ಯ ಪ್ರಭಾಸಣಕಾರರಾಗಿ ಸಮಸ್ತ ಕೇರಳ ಜಂ ಇಯ್ಯತುಲ್ ಉಲಾಮಾ ಕೇಂದ್ರ ಮುಶಾವರದ ಸದಸ್ಯ ಖಾಝಿ ಬಂಬ್ರಾಣ ಬಿಕೆ ಅಬ್ದುಲ್ ಖಾದರ್ ಮುಸ್ಲಿಯಾರ್ ಮಾತನಾಡಿ ಯುವ ಸಮುದಾಯ ಮೊಬೈಲ್ ಸಾಮಾಜಿಕ ಜಾಲತಾಣ ದುಶ್ಚಟಗಳಿಂದ ದೂರವಿದ್ದು ಸಮಾಜದ ದುರ್ಬಲವರ್ಗದವರ ಏಳಿಗೆಗೆ ಶ್ರಮಿಸಿ ಸೌಹಾರ್ದತೆಗೆ ಒತ್ತು ನೀಡಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಕೇಂದ್ರ ಜುಮ್ಮಾ ಮಸೀದಿಯ ಅಧ್ಯಕ್ಷ ಸುಹೈಲ್ ಹೈದರ್ ಎಂ.ಕೆ. ವಹಿಸಿ ಮಾತನಾಡಿದರು
ವೇದಿಕೆಯಲ್ಲಿ ಕಾರ್ನಾಡ್ ಮಸ್ಜಿದುನ್ನೂರು ಖತೀಬ ಇಸ್ಮಾಯಿಲ್ ದಾರಿಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ, ರಾಜ್ಯ ವಿಧಾನಪರಿಷತ್ ಶಾಸಕ ಐವಾನ್ ಡಿಸೋಜಾ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮುಲ್ಕಿ ನ.ಪಂ ಸದಸ್ಯ ಪುತ್ತು ಬಾವ, ತಾಲೂಕು ಸಂವಿಧಾನ ಸಂರಕ್ಷಣಾ ಹೋರಾಟ ವೇದಿಕೆಯ ಅಧ್ಯಕ್ಷ ಇಕ್ಬಾಲ್ ಅಹ್ಮದ್, ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಡ ಮುಸ್ಲಿಂ ಹೆಣ್ಣು ಮಕ್ಕಳ ಮದುವೆಗಾಗಿ ದನ ಸಹಾಯ ಹಾಗೂ ಸಾಧಕರ ನೆಲೆಯಲ್ಲಿ ಯುವ ಉದ್ಯಮಿ ಅಬ್ದುಲ್ ಲತೀಫ್ ಗುರುಪುರ ರವರನ್ನು ಗೌರವಿಸಲಾಯಿತು. ಮೊಹಮದ್ ಗಝಾಲ್ ಕೋಲ್ನಾಡ್ ನಿರೂಪಿಸಿದರು.
ಕಾರ್ಯಕ್ರಮದ ಮೊದಲು ಕಾರ್ನಾಡ್ ಮಸೀದಿಯಿಂದ ದರ್ಗಾ ರಸ್ತೆಯಾಗಿ ದರ್ಗಾಗೆ ಸಂದಲ್ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.
Kshetra Samachara
19/01/2025 10:59 am