", "articleSection": "Sports,Cultural Activity", "image": { "@type": "ImageObject", "url": "https://prod.cdn.publicnext.com/s3fs-public/418299-1737260102-galipata.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Vishwanath" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಗಳೂರು: ಬಾನೆತ್ತರಕ್ಕೆ ನೋಡಿದರೆ ಬಾನಾಡಿಗಳಂತೆ ಹಾರುತ್ತಿರುವ ಗಾಳಿಪಟಗಳು... ಒಂದಕ್ಕಿಂತ ಮತ್ತೊಂದು ಆಕರ್ಷಣೀಯ. ಮತ್ತೊಂದಕ್ಕಿಂತ ಮಗದೊಂದು ಭಿ...Read more" } ", "keywords": "Mangaluru, International Kite Festival, Kite Flying, Mangalore News, Karnataka Tourism, Coastal Karnataka, Recreation Activities, Aero Sports, Kite Festival India.,Udupi,Mangalore,Sports,Cultural-Activity", "url": "https://publicnext.com/node" }
ಮಂಗಳೂರು: ಬಾನೆತ್ತರಕ್ಕೆ ನೋಡಿದರೆ ಬಾನಾಡಿಗಳಂತೆ ಹಾರುತ್ತಿರುವ ಗಾಳಿಪಟಗಳು... ಒಂದಕ್ಕಿಂತ ಮತ್ತೊಂದು ಆಕರ್ಷಣೀಯ. ಮತ್ತೊಂದಕ್ಕಿಂತ ಮಗದೊಂದು ಭಿನ್ನ. ಕಣ್ಣುಹಾಯಿಸಿದಷ್ಟು ದೂರ ಗಾಳಿಪಟಗಳದ್ದೇ ಕಾರುಬಾರು.
ಹೌದು... ಈ ದೃಶ್ಯ ಕಂಡು ಬಂದಿದ್ದು ಟೀಮ್ ಮಂಗಳೂರು ಆಶ್ರಯದಲ್ಲಿ ನಗರದ ತಣ್ಣೀರುಬಾವಿ ಬೀಚ್‌ನಲ್ಲಿ ನಡೆದ 8ನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ. ONGC MRPL ಪ್ರಾಯೋಜಕತ್ವದಲ್ಲಿ ದ.ಕ. ಜಿಲ್ಲಾಡಳಿತದ ಸಹಕಾರದೊಂದಿಗೆ ಶನಿವಾರ ಮತ್ತು ರವಿವಾರ ಮಧ್ಯಾಹ್ನ 3ರಿಂದ ರಾತ್ರಿ 9ರ ವರೆಗೆ ಗಾಳಿಪಟ ಹಾರಾಡುತ್ತದೆ. ಕುದುರೆ, ಕೋನ್ ಐಸ್‌ಕ್ರೀಂ, ಮೀನು, ಅಕ್ಟೋಪಸ್, ಹುಲಿ, ಗಣಪತಿ, ಕಥಕ್ಕಳಿ, ಸನ್‌ಫ್ಲವರ್, ಏರೋಪ್ಲೇನ್, ಚಿರತೆ, ಟೆಡ್ಡಿಬೇರ್, ಕ್ರಿಕೆಟ್, ಪಿನಾಕಿಯೋ, ಕೋಳಿ, ಡ್ರ್ಯಾಗನ್, ಇಂಡಿಯಾ ಫ್ಲ್ಯಾಗ್ ಹೀಗೆ ನೂರಾರು ವೈವಿಧ್ಯಮಯ ಗಾಳಿಪಟಗಳು ನೋಡುಗರ ಕಣ್ಮನ ಸೆಳೆಯುತ್ತಿತ್ತು.
ಪುಟ್ಟಪುಟ್ಟ ಗಾಳಿಪಟಗಳಿಂದ ಹಿಡಿದು ಬೃಹತ್ ಗಾತ್ರದ ಗಾಳಿಪಟಗಳು ಗಾಳಿಯ ಬೀಸುವಿಕೆಗೆ ತಕ್ಕಂತೆ ಓಲಾಡಿ, ಹಾರಾಡಿ, ಕುಲುಕಾಡಿ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿತ್ತು.
ಇಂಗ್ಲೆಂಡ್, ಜರ್ಮನಿ, ನೆದರ್ಲ್ಯಾಂಡ್, ಕ್ಲೋವೆನಿಯಾ, ಇಟಲಿ, ಸ್ವೀಡನ್, ಇಂಡೋನೇಶಿಯಾ, ಪೋರ್ಚುಗಲ್, ಈಸ್ಟೋನಿಯಾ, ಗ್ರೀಸ್‌ನ ಗಾಳಿಪಟ ತಂಡಗಳು ಮತ್ತು ಒಡಿಸ್ಸಾ, ರಾಜಸ್ತಾನ್, ಮಹಾರಾಷ್ಟ್ರ, ತೆಲಂಗಾಣ, ಕೇರಳ, ಗುಜರಾತ್ ರಾಜ್ಯಗಳಿಂದ ಆಗಮಿಸಿದ ಗಾಳಿಪಟ ತಂಡಗಳು ಈ ಉತ್ಸವದಲ್ಲಿ ಭಾಗವಹಿಸಿದೆ.
22 ಅಂತಾರಾಷ್ಟ್ರೀಯ ಗಾಳಿಪಟ ಹಾರಾಟಗಾರರು ಸೇರಿದಂತೆ 60ಕ್ಕೂ ಅಧಿಕ ಗಾಳಿಪಟ ಹಾರಾಟಗಾರರು ಇಲ್ಲಿದ್ದರು.
'ಒಂದೇ ಆಕಾಶ, ಒಂದೇ ಭೂಮಿ, ಒಂದೇ ಕುಟುಂಬ' ಎಂಬ ಧ್ಯೇಯ ವಾಕ್ಯದಲ್ಲಿ ಈ ಗಾಳಿಪಟ ಉತ್ಸವವು ಜರಗುತ್ತಿದ್ದು, ದೇಶ-ವಿದೇಶಗಳ ನಡುವೆ ಸಂಸ್ಕೃತಿಯನ್ನು ಬೆಸೆಯುವ ಉದ್ದೇಶ ಹೊಂದಿದೆ. ಬಾನಿನಲ್ಲಿ ಜಿಗಿದಾಡುವ ಸ್ಟಂಟ್ ಗಾಳಿಪಟಗಳು, ಏರೋಫಾಯ್ಸ್ ಗಾಳಿಪಟಗಳು(ಗಾಳಿ ತುಂಬಿ ಬಲೂನ್ ರೀತಿಯಲ್ಲಿ ಹಾರಾಡುವ ಬೃಹತ್ ಗಾಳಿಪಟಗಳು) ಸೀರೀಸ್ ಕೈಟ್(ಏಕ ದಾರದಲ್ಲಿ ನೂರಾರು ಗಾಳಿಪಟಗಳು) ರೆಕ್ಕೆಬಿಚ್ಚಿ ಹಕ್ಕಿಯಂತೆ ಹಾರಾಡುವ ಗಾಳಿಪಟಗಳು ಜನಾಕರ್ಷಣೆಗೆ ಪಾತ್ರವಾಯಿತು.
ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿ: ವಿಶ್ವನಾಥ ಪಂಜಿಮೊಗರು
PublicNext
19/01/2025 09:45 am