", "articleSection": "Law and Order,Accident", "image": { "@type": "ImageObject", "url": "https://prod.cdn.publicnext.com/s3fs-public/286525-1737210011-WhatsApp-Image-2025-01-18-at-7.50.01-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "VinayakHubballi" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ : ಇತ್ತೀಚಿನ ದಿನಗಳಲ್ಲಿ ರಸ್ತೆಗಳಲ್ಲಿ ವಾಹನ ಸವಾರರು ಸಂಚಾರಿ ನಿಯಮಗಳನ್ನು ಮೀರಿ ವಾಹನ ಚಾಲನೆ ಮಾಡುವ ಕಾರಣ ಸಾಕಷ್ಟು ಅಪಘಾತಗಳು ಸಂಭ...Read more" } ", "keywords": "Dharwad District, Road Safety, Two-Wheeler Accidents, Traffic Rules, Karnataka Accident Statistics, Dharwad News, Road Accident Deaths, Traffic Awareness, Safety Measures.,Hubballi-Dharwad,Law-and-Order,Accident", "url": "https://publicnext.com/node" }
ಹುಬ್ಬಳ್ಳಿ : ಇತ್ತೀಚಿನ ದಿನಗಳಲ್ಲಿ ರಸ್ತೆಗಳಲ್ಲಿ ವಾಹನ ಸವಾರರು ಸಂಚಾರಿ ನಿಯಮಗಳನ್ನು ಮೀರಿ ವಾಹನ ಚಾಲನೆ ಮಾಡುವ ಕಾರಣ ಸಾಕಷ್ಟು ಅಪಘಾತಗಳು ಸಂಭವಿಸಿ ವಾಹನ ಸವಾರರು ಪ್ರಾಣವನ್ನು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ವಾಹನ ಚಾಲಕರಿಗೆ ಜಾಗೃತಿಯನ್ನು ಮೂಡಿಸವ ಸಲುವಾಗಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಜಾಗೃತಿ ಮಾಸಾಚಾರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ನಿಟ್ಟಿನಲ್ಲಿ ಹುಬ್ಬಳ್ಳಿಯ ಗಬ್ಬುರಿನಲ್ಲಿರುವ ಸಾರಿಗೆ ಕಚೇರಿಯ ಮುಂಭಾಗದಲ್ಲಿ ಸಾರ್ವಜನಿಕರಿಗೆ ಅಧಿಕಾರಿಗಳು ಸಂಚಾರಿ ನಿಯಮಗಳ ಬಗ್ಗೆ ಜಾಗೃತಿಯನ್ನು ಮೂಡಿಸಿದರು,ಮಣ್ಣು,ಎಂ ಸ್ಯಾಂಡ್,ಮರಳು ಸಾಗಾಟ ಮಾಡುವಾಗ ಅದನ್ನು ಸಾಗಾಟ ಮಾಡುವ ವಿಧಾನವನ್ನು ಅನುಸರಿಸಬೇಕು ಇಲ್ಲವಾದ್ರೆ ಯಾವೆಲ್ಲ ಅನಾಹುತಗಳು ಸಂಭವಿಸುತ್ತದೆ ಎಂಬುದರ ಕುರಿತು RTO ಇನ್ಸ್ಪೆಕ್ಟರ್ ಬೆಲ್ಲದ್ ಜಾಗೃತಿ ಮೂಡಿಸಿದರು ಅಷ್ಟೇ ಅಲ್ಲದೇ ಸಂಚಾರಿ ನಿಯಮ ಮೀರಿ ಹೊರಟಿದ್ದ ಎಂ ಸ್ಯಾಂಡ್ ಸಾಗಾಟದ ಲಾರಿಯನ್ನು ಕೂಡಾ ಸೀಜ್ ಮಾಡಿದರು.
ಕೇವಲ ದೊಡ್ಡ ದೊಡ್ಡ ವಾಹನಗಳ ಚಾಲಕರು ಮಾತ್ರ ಸಂಚಾರಿ ನಿಯಮಗಳನ್ನು ಮೀರುತ್ತಿಲ್ಲ ಬದಲಿಗೆ ದ್ವಿಚಕ್ರ ವಾಹನ ಸವಾರರು ಕೂಡಾ ಸಂಚಾರಿ ನಿಯಮ ಉಲ್ಲಂಘನೆ ಮಾಡಿ ತಮ್ಮ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ.
ಹೀಗಾಗಿ ಕಳೆದ ಒಂದು ವರ್ಷದಲ್ಲಿ ಧಾರವಾಡ ಜಿಲ್ಲೆಯಲ್ಲಿ ಬೈಕ್ ಅಪಘಾತದಲ್ಲಿ 500 ಕ್ಕೂ ಹೆಚ್ಚು ಬೈಕ್ ಸವಾರರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಎಲ್ಲಾ ವಾಹನದ ಸವಾರರು ಸಂಚಾರಿ ನಿಯಮಗಳನ್ನು ಪಾಲನೆ ಮಾಡಬೇಕು ಎಂಬ ಅರಿವನ್ನು ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಅಂತಾರೆ ಸಾರಿಗೆ ಇಲಾಖೆಯ ಅಧಿಕಾರಿ ಜಿ ವಿ ದಿನಮನಿ
ಒಟ್ಟಿನಲ್ಲಿ ರಸ್ತೆಯಲ್ಲಿ ಸಂಚಾರ ಮಾಡುವ ವಾಹನ ಸವಾರರಿಗೆ ಸಂಚಾರಿ ನಿಯಮಗಳನ್ನು ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದೆ,ಆದ್ರೆ ಇದರ ಬಗ್ಗೆ ಪ್ರತಿಯೊಬ್ಬ ವಾಹನ ಸವಾರರು ತಮ್ಮಷ್ಟಕ್ಕೆ ತಾವೇ ಈ ಸಂಚಾರಿ ನಿಯಮಗಳ ಬಗ್ಗೆ ಜಾಗ್ರತಿಯನ್ನು ವಹಿಸಿ ತಮ್ಮ ಪ್ರಾಣದ ಜೊತೆ ಬೇರೆ ವಾಹನ ಸವಾರರ ಪ್ರಾಣವನ್ನು ಉಳಿಸುವ ಕಾರ್ಯಕ್ಕೆ ಮುಂದಾದಾಗ ಇಂತಹ ಅಪಘಾತಗಳನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲು ಸಾಧ್ಯ ಎಂಬುದು ನಮ್ಮ ಆಶಯವಾಗಿದೆ.
-ವಿನಯ ರೆಡ್ಡಿ ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
18/01/2025 07:53 pm