", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/229640-1737289468-NEW.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Praveen Onkari" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಧಾರವಾಡ ಶಹರ ಠಾಣೆ ಪೊಲೀಸರು ಅಂತರ ಜಿಲ್ಲಾ ಮನೆಗಳ್ಳನನ್ನು ಬಂಧಿಸಿ, ಆತನಿಂದ ಅಂದಾಜು 6.09ಲಕ್ಷ ರೂಪಾಯಿ ಮೌಲ್ಯದ 87‌ಗ್ರಾಂ‌ ಚಿನ್ನಾಭರಣ ಮತ್ತು ...Read more" } ", "keywords": "Dharwad, Interstate Burglar Arrested, Police Crackdown, Crime News, Karnataka Police, Dharwad News, Burglary, Law and Order, Crime Prevention.,Hubballi-Dharwad,Crime,Law-and-Order", "url": "https://publicnext.com/node" } ಧಾರವಾಡ : ಅಂತರ್‌ ಜಿಲ್ಲಾ ಮನೆಗಳ್ಳನ ಬಂಧನ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಅಂತರ್‌ ಜಿಲ್ಲಾ ಮನೆಗಳ್ಳನ ಬಂಧನ

ಧಾರವಾಡ ಶಹರ ಠಾಣೆ ಪೊಲೀಸರು ಅಂತರ ಜಿಲ್ಲಾ ಮನೆಗಳ್ಳನನ್ನು ಬಂಧಿಸಿ, ಆತನಿಂದ ಅಂದಾಜು 6.09ಲಕ್ಷ ರೂಪಾಯಿ ಮೌಲ್ಯದ 87‌ಗ್ರಾಂ‌ ಚಿನ್ನಾಭರಣ ಮತ್ತು 36ಸಾವಿರ ರೂಪಾಯಿ ಮೌಲ್ಯದ 507 ಗ್ರಾಂ ಬೆಳ್ಳಿ‌ ಸಾಮಗ್ರಿ ವಶಪಡಿಸಿಕೊಂಡಿದ್ದಾರೆ.

ಗದುಗಿನ ಸುನೀಲ ಎಸ್. ಮುಳಗುಂದ ಎಂಬಾತನೇ ಬಂಧಿತನಾಗಿದ್ದು, ಇನ್ನೋರ್ವ ಪರಾರಿಯಾಗಿದ್ದಾನೆ.

ಬಂಧಿತನು ತನ್ನ ಸಹಚರನೊಂದಿಗೆ ಜ.‌8ರಂದು ಧಾರವಾಡ ಗಾಂಧಿನಗರದ ಕವಲಗೇರಿ ರಸ್ತೆ ಬದಿಯ ಉಮಾಕಾಂತ ಕರ್ಚಕಟ್ಟಿ ಎಂಬುವರ ಮನೆಯ ಕೀಲಿ‌ ಮುರಿದು, ಅಂದಾಜು 6.45ಲಕ್ಷ ರೂಪಾಯಿ ಮೌಲ್ಯದ ನಗ-ನಾಣ್ಯ ಕಳವು ಮಾಡಿದ್ದ. ಈ ಕುರಿತು ಉಮಾಕಾಂತರು ಧಾರವಾಡ ಶಹರ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಠಾಣೆಯ ಇನ್ಸಪೆಕ್ಟರ್‌ ಎನ್.ಸಿ.‌ ಕಾಡದೇವರಮಠ ನೇತೃತ್ವದಲ್ಲಿ ಸಿಬ್ಬಂದಿಯು ಮನೆಗಳ್ಳನನ್ನು ಕಳುವಿನ ಸಾಮಗ್ರಿಗಳೊಂದಿಗೆ‌‌ ಬಂಧಿಸಿ, ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ. ಇವುಗಳಲ್ಲಿ ಧಾರವಾಡ ಶಹರ ಪೊಲೀಸ್ ಠಾಣೆಯ ಒಟ್ಟು ಎರಡು ಪ್ರಕರಣಗಳು ಪತ್ತೆಯಾಗಿದ್ದು, ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ. ಆತನ ಪತ್ತೆಗೆ ತಂಡ ರಚಿಸಲಾಗಿದೆ.

Edited By : Manjunath H D
Kshetra Samachara

Kshetra Samachara

19/01/2025 05:54 pm

Cinque Terre

18.98 K

Cinque Terre

0

ಸಂಬಂಧಿತ ಸುದ್ದಿ