", "articleSection": "Law and Order", "image": { "@type": "ImageObject", "url": "https://prod.cdn.publicnext.com/s3fs-public/405356-1737288238-da.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Praveen Onkari" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಧಾರವಾಡ: ಬೀದರ್ ಹಾಗೂ ಮಂಗಳೂರಿನಲ್ಲಿ ಬ್ಯಾಂಕ್ ದರೋಡೆ ಆದ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಧಾರವಾಡದ ವಿವಿಧ...Read more" } ", "keywords": "Dharwad, Bank Robbery, High Alert, Police Vigilance, Karnataka Crime, Indian Bank Security, Dharwad Police, Robbery Investigation, Crime Alert,Hubballi-Dharwad,Law-and-Order", "url": "https://publicnext.com/node" } ಧಾರವಾಡ : ಬ್ಯಾಂಕ್ ದರೋಡೆ ಹಿನ್ನೆಲೆ, ಧಾರವಾಡದಲ್ಲಿ ಹೈ ಅಲರ್ಟ್ ಆದ ಪೊಲೀಸರು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಬ್ಯಾಂಕ್ ದರೋಡೆ ಹಿನ್ನೆಲೆ, ಧಾರವಾಡದಲ್ಲಿ ಹೈ ಅಲರ್ಟ್ ಆದ ಪೊಲೀಸರು

ಧಾರವಾಡ: ಬೀದರ್ ಹಾಗೂ ಮಂಗಳೂರಿನಲ್ಲಿ ಬ್ಯಾಂಕ್ ದರೋಡೆ ಆದ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.

ಧಾರವಾಡದ ವಿವಿಧ ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಜೊತೆ ಎಸಿಪಿ ಪ್ರಶಾಂತ ಸಿದ್ಧನಗೌಡರ ಅವರು ಸಭೆ ನಡೆಸಿ, ಬ್ಯಾಂಕ್ ಮಾನದಂಡಗಳು ಹಾಗೂ ಆರ್‌ಬಿಐ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಸೂಚನೆ ನೀಡಿದರು.

ರಾಜ್ಯದಲ್ಲಿ ಬ್ಯಾಂಕ್ ದರೋಡೆಗಳು ದೊಡ್ಡ ಪ್ರಮಾಣದಲ್ಲಿ ಅದೂ ಹಾಡಹಗಲೇ ನಡೆಯುತ್ತಿದ್ದು, ಬ್ಯಾಂಕ್ ಸಿಬ್ಬಂದಿ ಬ್ಯಾಂಕ್ ಆವರಣದಲ್ಲಿ ಒಳ್ಳೆಯ ಗುಣಮಟ್ಟದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಬ್ಯಾಂಕ್‌ಗೆ ಸೆಕ್ಯುರಿಟಿಗಳನ್ನು ಹೆಚ್ಚಿಸಬೇಕು. ಯಾವುದೇ ಸಂದರ್ಭಲ್ಲೂ ಬ್ಯಾಂಕ್ ಸಿಬ್ಬಂದಿ ಏನಾದರೂ ಮಾಹಿತಿ ಮುಟ್ಟಿಸುವುದಿದ್ದರೆ ಪೊಲೀಸರಿಗೆ ಆ ಮಾಹಿತಿ ಮುಟ್ಟಿಸಬೇಕು. ಎಟಿಎಂಗೆ ಹಣ ಹಾಕಲು ಹೋಗುವಾಗ ಸೆಕ್ಯುರಿಟಿಯೊಂದಿಗೆ ತೆರಳಬೇಕು ಎಂದು ಎಸಿಪಿ ಪ್ರಶಾಂತ ಸಿದ್ಧನಗೌಡರ ಬ್ಯಾಂಕ್ ಸಿಬ್ಬಂದಿಗೆ ಸೂಚನೆ ನೀಡಿದರು.

ಧಾರವಾಡ ಶಹರ ಠಾಣೆ, ವಿದ್ಯಾಗಿರಿ ಠಾಣೆ ಹಾಗೂ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬ್ಯಾಂಕ್ ಸಿಬ್ಬಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಇನ್‌ಸ್ಪೆಕ್ಟರ್‌ಗಳಾದ ದಯಾನಂದ, ಸಂಗಮೇಶ ದಿಡ್ಡಿಗನಾಳ, ಎಸ್.ಸಿ.ಕಾಡದೇವರಮಠ ಕೂಡ ಸಭೆಯಲ್ಲಿ ಪಾಲ್ಗೊಂಡು ಬ್ಯಾಂಕ್ ಸಿಬ್ಬಂದಿಗೆ ಕೆಲವೊಂದಿಷ್ಟು ಸಲಹೆ, ಸೂಚನೆ ನೀಡಿದರು.

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

19/01/2025 05:34 pm

Cinque Terre

25.67 K

Cinque Terre

1

ಸಂಬಂಧಿತ ಸುದ್ದಿ