", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/418299-1737186125-chellata.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Iranna Y Walikar" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ಈತ ನೋಡಲಿಕ್ಕೆ ಭಾರಿ ಸೈಲೆಂಟ್. ಆದ್ರೆ ಮಾಡೋದೆಲ್ಲಾ ಮಾತ್ರ ಹಲಕಟಗೇರಿ ಕೆಲಸ. ಬಡ ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡಿ, ಪ್ರೀತಿಸುವ...Read more" } ", "keywords": ",Hubballi-Dharwad,Crime,Law-and-Order", "url": "https://publicnext.com/node" } ಹುಬ್ಬಳ್ಳಿ: Exclusive | ಪ್ರೀತಿ, ಹಣದ ಆಸೆ ತೋರಿಸಿ ಮಂಚದಾಟ ಆಡಿದ ವಿಕೃತ ಕಾಮಿ ಪೊಲೀಸರ ಕೈಯಲ್ಲಿ ಅಂದರ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: Exclusive | ಪ್ರೀತಿ, ಹಣದ ಆಸೆ ತೋರಿಸಿ ಮಂಚದಾಟ ಆಡಿದ ವಿಕೃತ ಕಾಮಿ ಪೊಲೀಸರ ಕೈಯಲ್ಲಿ ಅಂದರ್

ಹುಬ್ಬಳ್ಳಿ: ಈತ ನೋಡಲಿಕ್ಕೆ ಭಾರಿ ಸೈಲೆಂಟ್. ಆದ್ರೆ ಮಾಡೋದೆಲ್ಲಾ ಮಾತ್ರ ಹಲಕಟಗೇರಿ ಕೆಲಸ. ಬಡ ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡಿ, ಪ್ರೀತಿಸುವ ನೆಪ ಹೇಳಿ ಮಂಚಕ್ಕೆ ಕರೆದು ಅವರೊಂದಗಿನ ಏಕಾಂತದ ಫೋಟೋ, ವಿಡಿಯೋಗಳನ್ನು ರೆಕಾರ್ಡ್ ಮಾಡುತ್ತಿದ್ದ ಈ ಸೈಕೋ ಕಾಮಿ. ಝರಾಕ್ಸ್ ಅಂಗಡಿ ಮಾಲೀಕನ ರಾಸಲೀಲೆಯ ಪುರಾಣವನ್ನ ಬಿಚ್ಚಿಟ್ಟಿದ್ದಾರೆ ಹುಬ್ಬಳ್ಳಿಯ ಕಸಬಾ ಠಾಣೆ ಪೊಲೀಸರು.

ಹೌದು... ಹೀಗೆ ಫೋಟೋದಲ್ಲಿ ಕಾಣುತ್ತಿರುವ ವಿಕೃತ ಕಾಮಿ ಅಶ್ಪಾಕ್ ಜೋಗನ್‌ಕೊಪ್ಪ ಹುಬ್ಬಳ್ಳಿಯ ಶರಾವತಿ ನಗರದ ಕೆಇಬಿ ಲೇಔಟ್ ನಿವಾಸಿ. ಇವನು ಹುಬ್ಬಳ್ಳಿಯ ಟಿಪ್ಪು ನಗರದಲ್ಲಿ ಝರಾಕ್ಸ್ ಮತ್ತು ಮೊಬೈಲ್ ರೀಚಾರ್ಜ್ ಸ್ಟೋರ್ ಇಟ್ಟುಕೊಂಡಿದ್ದಾನೆ. ಇದೇ ಅಂಗಡಿಗೆ ಬರುವ ಬಡ ಹೆಣ್ಣು ಮಕ್ಕಳನ್ನು ತನ್ನ ಕಾಮದಾಟಕ್ಕೆ ಬಳಸಿಕೊಂಡಿದ್ದಾನೆ ಈ ವಿಕೃತ ಕಾಮಿ. ಹಣದಾಸೆ ಮತ್ತು ಪ್ರೀತಿಸುವ ಆಟವಾಡಿ ಬಡ ಹೆಣ್ಣುಮಕ್ಕಳ ಜೊತೆಗೆ ಪಲ್ಲಂಗದಾಟದ ಆಡುವ, ವಿಡಿಯೋ ಕಾಲ್‌ನಲ್ಲಿ ಮಹಿಳೆಯರು ಬಟ್ಟೆ ಬಿಚ್ಚಿಸುವಂತ ಸೈಕೋ ಕಾಮಿ ಇವನು. ಮಹಿಳೆಯರ ಬಟ್ಟೆ ಬಿಚ್ಚಿಸಿ, ವಿಡಿಯೋ ಕಾಲ್‌ನಲ್ಲಿನ ನಗ್ನ ಚಿತ್ರ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ. ಇಗ ಈ ಸೈಕೋ ಕಾಮಿಗೆ ಕಸಬಾ ಠಾಣೆಯ ಇನ್ಸ್‌ಪೆಕ್ಟರ್ ರಾಘವೇಂದ್ರ ಹಳ್ಳೂರ ಹೆಡೆಮುರಿ ಕಟ್ಟಿದ್ದಾರೆ. ಮಹಿಳೆಯರ ಮೇಲೆ ಅಷ್ಟೇ ಅಲ್ಲದೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನಂತೆ. ಅಪ್ರಾಪ್ತ ಬಾಲಕಿಯ ಪೋಷಕರು ಈ ದುಷ್ಕರ್ಮಿಯ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ್ವಯ ಝರಾಕ್ಸ್ ಅಂಗಡಿ ಮಾಲೀಕನನ್ನ ಠಾಣೆಗೆ ಕರೆದುಕೊಂಡು ಬಂದು ಡ್ರಿಲ್ ಮಾಡಿದಾಗ, ವಿಚಾರಣೆ ವೇಳೆ ಸೈಕೋ ಕಾಮಿ ಮೊಬೈಲ್‌ನಲ್ಲಿ ಹತ್ತಕ್ಕೂ ಹೆಚ್ಚು ಮಹಿಳೆಯರೊಂದಿಗಿನ ರಾಸಲೀಲೆ ವಿಡಿಯೋ‌ಗಳು ಸಿಕ್ಕಿವೆ.

ಪೊಲೀಸರ ಹೆಚ್ಚಿನ ವಿಚಾರಣೆಯಿಂದ ಈ ಕಾಮ ಪಿಶಾಚಿಯ ಮುಖವಾಡ ಕಳಚಿ ಬಿದ್ದಿದೆ. ಸದ್ಯ ಪೊಲೀಸರ ತನಿಖೆಯಿಂದ ಅದೆಷ್ಟೋ ಬಡ ಹೆಣ್ಣು ಮಕ್ಕಳ ಜೀವ ಉಳಿದಿದೆ. ಅದೆಷ್ಟೋ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ ಈ ಸೈಕೋ ಕಾಮಿಗೆ ತಕ್ಕ ಶಿಕ್ಷೆಯಾಗಬೇಕೆಂದು ನೊಂದ ಮಹಿಳೆಯರ ಆಗ್ರಹವಾಗಿದೆ.

ವರದಿ: ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By : Ashok M
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

18/01/2025 01:12 pm

Cinque Terre

109.49 K

Cinque Terre

16

ಸಂಬಂಧಿತ ಸುದ್ದಿ