", "articleSection": "Astrology", "image": { "@type": "ImageObject", "url": "https://prod.cdn.publicnext.com/s3fs-public/222042-1737164837-Bhavishya-OK.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಮೇಷ ರಾಶಿ: ಹೊಸ ಹೂಡಿಕೆಯಲ್ಲಿ ಹಣವನ್ನು ಹೂಡಿಕೆ ಮಾಡಬಹುದು. ಹಿರಿಯರ ಆಶೀರ್ವಾದವನ್ನು ಪಡೆಯಿರಿ ಒಳ್ಳೆಯದಿದೆ. ಅಗತ್ಯ ಕಾರ್ಯಗಳು ಸಮಯಕ್ಕಿಂತ ಮ...Read more" } ", "keywords": "Daily horoscope, astrology, zodiac signs, horoscope today, 18-01-2025, daily predictions, astrology forecast, rashifal, janam kundali. ,,Astrology", "url": "https://publicnext.com/node" }
ಮೇಷ ರಾಶಿ: ಹೊಸ ಹೂಡಿಕೆಯಲ್ಲಿ ಹಣವನ್ನು ಹೂಡಿಕೆ ಮಾಡಬಹುದು. ಹಿರಿಯರ ಆಶೀರ್ವಾದವನ್ನು ಪಡೆಯಿರಿ ಒಳ್ಳೆಯದಿದೆ. ಅಗತ್ಯ ಕಾರ್ಯಗಳು ಸಮಯಕ್ಕಿಂತ ಮುಂಚೆ ಆಗಬಹುದು. ಕೆಲಸದ ಸ್ಥಳದಲ್ಲಿ ನೀವು ಪ್ರಬಲರಾಗುತ್ತೀರಿ
ವೃಷಭ: ಅನಗತ್ಯವಾದ ಖರ್ಚು ನಿಮ್ಮನ್ನು ಬಾಧಿಸುತ್ತದೆ. ಮನೆಯಲ್ಲಿ ವಾತಾವರಣ ಚೆನ್ನಾಗಿರುವುದಿಲ್ಲ ಆರೋಗ್ಯ ಸಮಸ್ಯೆ ಕಾಡಬಹುದು. ಮಕ್ಕಳ ಚಟುವಟಿಕೆ ಖುಷಿ ಕೊಡಬಹುದು. ದೂರದೂರಿಗೆ ಪ್ರಯಾಣ ಮಾಡುವ ಸಾಧ್ಯತೆ ಹೆಚ್ಚಿದೆ.
ಮಿಥುನ: ಚೆನ್ನಾಗಿರುವ ಸಮಯವನ್ನು ದುರುಪಯೋಗ ಮಾಡಿಕೊಳ್ಳಬೇಡಿ. ಸಾಂಸಾರಿಕವಾಗಿ ಜಗಳ ಆಗುವ ಸಂಭವವಿದೆ. ಪತಿ-ಪತ್ನಿಯರ ವಿಚಾರ ಮಕ್ಕಳ ಮೇಲೆ ಪ್ರಭಾವ ಬೀರಲಿದೆ. ನಿಮ್ಮ ಆಲೋಚನೆ ಒಂದಾದರೆ, ನಡೆಯುವುದೇ ಬೇರೆ.
ಕಟಕ: ಚೆನ್ನಾಗಿ ನಡೆಯುತ್ತಿದ್ದ ವ್ಯವಹಾರಕ್ಕೆ ಅಡ್ಡಿಯಾಗಬಹುದು. ಶತ್ರುಗಳಿಂದ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು. ನಿಮ್ಮ ಆಸ್ತಿ ವಿಚಾರ ಮತ್ತು ಮನೆ ಕಟ್ಟುವ ವಿಚಾರದಲ್ಲಿ ಸಮಸ್ಯೆಯಾಗಬಹುದು. ಸಾಂಸಾರಿಕವಾದ ಅಸಂತೋಷ ಎದ್ದು ಕಾಣಲಿದೆ.
ಸಿಂಹ: ಕಾನೂನಾತ್ಮಕವಾದ ಹೋರಾಟದಲ್ಲಿ ಜಯವಿದೆ. ಅಧಿಕಾರಿಗಳು, ಹಿರಿಯರು ನಿಮ್ಮನ್ನು ಹೊಗಳುತ್ತಾರೆ. ಸಾಂಸಾರಿಕ ಜೀವನ ತುಂಬಾ ಚೆನ್ನಾಗಿರಲಿದೆ. ತಂದೆಯವರ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಬಹುದು ಗಾಬರಿಬೇಡ.
ಕನ್ಯಾ: ಸಮಾಜದಲ್ಲಿ ಅಪಖ್ಯಾತಿಯನ್ನು ಹೊಂದುತ್ತೀರಿ. ಇಂದು ಯಾವುದೇ ದೊಡ್ಡ ಹೂಡಿಕೆಗಳು ಬೇಡ. ಮನೆಗೆ ಅತಿಥಿಗಳ ಆಗಮನ ಆಗುವುದರಿಂದ ಬೇಸರ ಆಗಬಹುದು. ವೃತ್ತಿ ಜೀವನದಲ್ಲಿ ಮುನ್ನಡೆಗೆ ಅವಕಾಶವಿದೆ.
ತುಲಾ: ಅಪರಿಚಿತರನ್ನು ವಿನಾಕಾರಣ ನಂಬಬಾರದು ಅವರಿಂದ ವಂಚನೆಯಾಗಬಹುದು. ಯೋಜಿತ ಕೆಲಸಗಳು ಸಕಾಲದಲ್ಲಿ ಪೂರ್ಣವಾಗದೆ ಬೇಸರ ಆಗಲಿದೆ. ನಿಮ್ಮ ಸಲಹೆಯಿಂದ ಬೇರೆ ಜನರಿಗೆ ಅನುಕೂಲವಿದೆ. ಇಂದು ಆರ್ಥಿಕವಾದ ಲಾಭವಿದೆ.
ವೃಶ್ಚಿಕ: ವ್ಯಾವಹಾರಿಕವಾಗಿ ಕೆಲವು ಸಮಸ್ಯೆಗಳು ಉಂಟಾಗಲಿದೆ. ನಿಮ್ಮ ಗೌರವಕ್ಕೆ ಧಕ್ಕೆ ಬರಬಹುದು. ಹೊಟ್ಟೆ ಅಥವಾ ಎದೆಗೆ ಸಂಬಂಧಿಸಿದಂತೆ ನೋವು ಕಾಣಬಹುದು. ಸಾಮಾಜಿಕವಾಗಿ ಹೇಳಿಕೆ ಕೊಡುವಾಗ ಎಚ್ಚರವಿರಲಿ. ಬೇರೆಯವರಿಗೆ ಕೊಟ್ಟ ಸಾಲವನ್ನು ಹಿಂಪಡೆಯಲು ಕಷ್ಟವಾಗಬಹುದು.
ಧನಸ್ಸು: ಹೊಸ ಆದಾಯದ ಮೂಲಗಳು ಕಾಣಬಹುದು. ಸಮಯ ವ್ಯರ್ಥ ಮಾಡಬೇಡಿ ಮುಂದಿನ ದಿನದಲ್ಲಿ ತೊಂದರೆಯಾಗಬಹುದು. ದಿನಚರಿಯನ್ನು ಶಿಸ್ತು ಬದ್ಧವಾಗಿ ಇಡಲು ಪ್ರಯತ್ನಿಸಿ. ಬೇರೆ ಜನರು ನಿಮ್ಮ ವರ್ತನೆಯನ್ನು ನೋಡಿ ಬೇಸರ ಪಡುತ್ತಾರೆ.
ಮಕರ: ವ್ಯಾವಹಾರಿಕವಾಗಿ ಹಣ ಬಾಕಿ ಬರುವುದಿದ್ದರೆ ಈ ದಿನ ನಿಮ್ಮ ಕೈ ಸೇರಬಹುದು. ಮನೆಯಲ್ಲಿ ಸಂತೋಷ ಕಾಣುತ್ತೀರಿ. ಕುಟುಂಬದ ಸಂಬಂಧಗಳನ್ನು ಬಲಪಡಿಸಿಕೊಳ್ಳಬೇಕು. ಕಾರ್ಯಕ್ಷೇತ್ರದಲ್ಲಿ ಅನಿರೀಕ್ಷಿತ ಬದಲಾವಣೆಯಾಗಬಹುದು.
ಕುಂಭ: ಹಳೆಯ ಸ್ನೇಹಿತರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೀರಿ. ವಿದ್ಯಾರ್ಥಿಗಳಿಗೆ ಹಿನ್ನಡೆಯಾಗಬಹುದು. ಉತ್ತಮ ಸಮಯವನ್ನು ಸದುಪಯೋಗ ಮಾಡಿಕೊಳ್ಳಿ. ವ್ಯಾವಹಾರಿಕವಾಗಿ ಉತ್ತಮವಾದ ಫಲಿತಾಂಶವಿದೆ. ತಮ್ಮದೇ ಆದ ನಿರ್ಧಾರಕ್ಕೆ ಕಟ್ಟು ಬಿದ್ದು ಸೋಲುತ್ತೀರಿ.
ಮೀನ: ನಿಮ್ಮ ನಿರೀಕ್ಷೆಗೆ ತಕ್ಕಂತೆ ವ್ಯಾವಹಾರಿಕವಾಗಿ ಫಲವಿಲ್ಲ. ಕೆಲವು ಸಂಕಷ್ಟಕ್ಕೆ ಸಿಲುಕುತ್ತೀರಿ. ನಿಮ್ಮ ವ್ಯವಹಾರಕ್ಕೆ ಬೇರೆಯವರ ಹಸ್ತಕ್ಷೇಪ ಅನಗತ್ಯವಾಗಿರಲಿದೆ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಉದ್ಯಮಿಗಳಿಗೆ ಈ ದಿನ ಚೆನ್ನಾಗಿದೆ.
PublicNext
18/01/2025 07:17 am