", "articleSection": "Astrology", "image": { "@type": "ImageObject", "url": "https://prod.cdn.publicnext.com/s3fs-public/222042-1736908990-Bhavishya-OK.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮೇಷ ರಾಶಿ: ಮಾನಸಿಕ ಕಿರಿಕಿರಿ ಉಂಟಾಗಬಹುದು. ಇಂದು ಕೆಲಸದಲ್ಲಿ ಹಿನ್ನಡೆಯಾಗಬಹುದು. ತಂದೆಯವರಿಗೆ ಅಪಘಾತ ಆಗುವ ಸಂಭವವಿದೆ. ವಾಹನದಿಂದ ತೊಂದರೆಯಾಗ...Read more" } ", "keywords": "Daily horoscope, astrology forecast, 15-01-2025, zodiac signs, horoscope today, daily predictions, astrological forecast, Indian astrology. ,,Astrology", "url": "https://publicnext.com/node" } ದಿನ ಭವಿಷ್ಯ: 15-01-2025
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ: 15-01-2025

ಮೇಷ ರಾಶಿ: ಮಾನಸಿಕ ಕಿರಿಕಿರಿ ಉಂಟಾಗಬಹುದು. ಇಂದು ಕೆಲಸದಲ್ಲಿ ಹಿನ್ನಡೆಯಾಗಬಹುದು. ತಂದೆಯವರಿಗೆ ಅಪಘಾತ ಆಗುವ ಸಂಭವವಿದೆ. ವಾಹನದಿಂದ ತೊಂದರೆಯಾಗಬಹುದು. ಹಣಕ್ಕೆ ಅಡಚಣೆ ಆಗಬಹುದು. ಔಷಧಿಗಾಗಿ ಹೆಚ್ಚು ಖರ್ಚು ಮಾಡುವುದರಿಂದ ಬೇಸರ ಆಗಲಿದೆ.

ವೃಷಭ: ಮನಸ್ಸಿಗೆ ಸಮಾಧಾನವಿದೆ ಆದರೆ ಜಾಣ್ಮೆಯಿಂದ ಎಲ್ಲಾ ಕೆಲಸಗಳನ್ನು ಮಾಡಿ. ಯಾವುದೇ ಕಠಿಣವಾದ ನಿರ್ಧಾರಗಳು ಬೇಡ. ಪ್ರಯಾಣ ಅಥವಾ ಪ್ರವಾಸಕ್ಕೆ ಆದ್ಯತೆಯನ್ನು ನೀಡಿ. ನಿಮ್ಮ ಮನಸ್ಸಿಗೆ ಸಮಾಧಾನ ಆಗುವ ಕೆಲಸಕ್ಕೆ ಆದ್ಯತೆ ನೀಡಿ.

ಮಿಥುನ: ಈ ದಿನ ಯಾವುದೇ ರೀತಿಯ ಅಹಿತವಾದ ಮಾತು ಬೇಡ. ನಿಮ್ಮ ವ್ಯವಹಾರದ ಬಗ್ಗೆ ಗಮನವಿರಲಿ. ಸ್ನೇಹಿತರ ಸಲಹೆ ಉಪಯೋಗಕ್ಕೆ ಬರುವುದಿಲ್ಲ. ತಂದೆಯವರ ಜೊತೆ ಜಗಳ ಆಗುವ ಸಂಭವವಿದೆ.

ಕಟಕ: ನೀವು ಅಂದುಕೊಂಡ ಕೆಲಸ ಸಾಧಿಸುವಲ್ಲಿ ಪ್ರಯತ್ನಿಸುತ್ತೀರಿ ಆದರೆ ಅಪಯಶಸ್ಸು. ನಂಬಿದವರಿಂದಲೇ ಮೋಸ ಆಗುವ ಸಾಧ್ಯತೆ. ಮನೆಯಲ್ಲಿ ಅಶಾಂತಿಯ ವಾತಾವರಣ ಇರಲಿದೆ. ನಿಮ್ಮ ಚಿಂತನೆ ಬೇರೆ ಕೆಲಸ ಆಗುವುದೇ ಬೇರೆ.

ಸಿಂಹ: ಪ್ರವಾಸದ ವಿಚಾರ ಮನಸ್ಸಿಗೆ ಖುಷಿ ಕೊಡಲಿದೆ. ಅದೃಷ್ಟದ ಬೆಂಬಲ ನಿಮಗೆ ಸಿಗಬಹುದಾದ ದಿನ. ಬೇರೆಯವರನ್ನು ಟೀಕೆ ಮಾಡಬಾರದು. ತಪ್ಪುಗಳನ್ನು ಗಮನಿಸಿ ಆದರೆ ಸುಮ್ಮನಿರುವುದು ಒಳಿತು. ವೈವಾಹಿಕ ಜೀವನದಲ್ಲಿ ಅಹಂನಿಂದ ಸಮಸ್ಯೆಯಾಗಬಹುದು.

ಕನ್ಯಾ: ಸಾಂಸಾರಿಕ ಸಾಮರಸ್ಯವನ್ನು ಕಾಪಾಡಿಕೊಳ್ಳಿ. ಸರ್ಕಾರಿ ಸೇವೆಗೆ ಸಂಬಂಧಿಸಿದಂತೆ ಅನುಕೂಲವಿದೆ. ಬೇರೆಯವರ ಸಲಹೆಗಿಂತ ನಿಮ್ಮ ಆಲೋಚನೆ ಬಹಳ ಮುಖ್ಯ. ಇಂದು ನೀವು ಪ್ರಿಯರಾದವರನ್ನು ಭೇಟಿಯಾಗಬಹುದು. ವ್ಯಾವಹಾರಿಕವಾದ ಅನುಕೂಲತೆಗಳು ನಿಮ್ಮ ಪರವಾಗಿದೆ.

ತುಲಾ: ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಗಮನವಿರಲಿ. ಗುರಿ ಸಾಧಿಸಿ ನಿಟ್ಟುಸಿರು ಬಿಡುತ್ತೀರಿ. ತಮಾಷೆ ಅಥವಾ ನಗುವಿನಿಂದ ದಿನ ಕಳೆಯುತ್ತೀರಿ. ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಗಮನಕೊಡಿ. ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಇದೆ.

ವೃಶ್ಚಿಕ: ವ್ಯಾವಹಾರಿಕವಾಗಿ ಅದೃಷ್ಟವಶಾತ್ ನೀವು ಅಪಾಯದಿಂದ ಪಾರಾಗುತ್ತೀರಿ. ಉದ್ಯೋಗದಲ್ಲಿ ಒತ್ತಡವನ್ನು ತಪ್ಪಿಸಿಕೊಳ್ಳಬೇಕು. ಸಾಮಾಜಿಕ ಕಾರ್ಯಗಳಿಗೆ ನಿಮ್ಮ ಕೊಡುಗೆ ಅಗತ್ಯ. ಚಿಕ್ಕ ಪುಟ್ಟ ಸಮಸ್ಯೆಗಳನ್ನು ಮೊದಲು ದೂರ ಮಾಡಿಕೊಳ್ಳಿ.

ಧನಸ್ಸು: ಪ್ರಯಾಣದಿಂದ ತೊಂದರೆಯಾಗುವ ಸೂಚನೆ ಇದೆ. ಮಧ್ಯಾಹ್ನದ ನಂತರ ದಿನ ಚೆನ್ನಾಗಿದೆ. ಮಾತನಾಡುವಾಗ ಹೆಚ್ಚು ಗಮನವಿರಲಿ. ಸ್ನೇಹಿತರ ಜೊತೆ ಸಂಬಂಧ ಚೆನ್ನಾಗಿರುವುದಿಲ್ಲ. ಅತಿಯಾದ ಆಸೆಯನ್ನು ನಿಯಂತ್ರಿಸಿ.

ಮಕರ: ಹಿರಿಯರ ಮಾತಿಗೆ ಬೆಲೆ ಇರಲಿ. ಬೇರೆಯವರನ್ನು ದುರುಪಯೋಗ ಮಾಡಿಕೊಳ್ಳಬೇಡಿ. ಸಾಮಾಜಿಕ ಕ್ಷೇತ್ರದಲ್ಲಿ ಭಯದಿಂದಲೇ ಕಾರ್ಯ ನಿರ್ವಹಿಸಬೇಕಾಗಲಿದೆ. ವೃತ್ತಿ ಬಗ್ಗೆ ಗೌರವವಿರಲಿ ಯಶಸ್ಸನ್ನು ಹೊಂದುತ್ತೀರಿ. ಮನೆಗೆ ಹೊಸ ವಸ್ತು ಖರೀದಿಸುವುದರಿಂದ ಸಂತಸ ಆಗಲಿದೆ.

ಕುಂಭ: ಉದ್ಯೋಗಿಗಳಿಗೆ ಹಣದ ವಿಚಾರದಲ್ಲಿ ಸಮಸ್ಯೆಯಾಗಬಹುದು. ಹಣ ಹೂಡಿಕೆಗೆ ಸಮಯ ಒಳ್ಳೆಯದಾಗಿದೆ. ಭವಿಷ್ಯದ ಯೋಚನೆಯನ್ನಿಟ್ಟುಕೊಂಡು ಕೆಲಸ ಮಾಡಿದರೆ ಒಳ್ಳೆಯದು. ಶಿಸ್ತು ಪಾಲನೆ ಇರಲಿ. ಇಂದು ಶಾಂತಿಯಿಂದ ವರ್ತಿಸಬೇಕು ಶುಭವಿದೆ.

ಮೀನ: ಕೆಲಸದ ಒತ್ತಡಗಳಿಂದ ಹೊರ ಬರುತ್ತೀರಿ. ನಿಮ್ಮ ಜೀವನದ ಮುಖ್ಯವಾದ ಮೌಲ್ಯಗಳನ್ನು ತಿಳಿಯಿರಿ. ನಿಮ್ಮ ಕೆಲಸದ ರೀತಿಯಿಂದ ನಿಮಗೆ ಅನುಮಾನ ಬರಲಿದೆ. ಸ್ವಾರ್ಥ ಅಥವಾ ಕೋಪ ನಿಮ್ಮಿಂದ ದೂರ ಆದರೆ ಮಾತ್ರ ಶುಭವಿದೆ.

Edited By : Vijay Kumar
PublicNext

PublicNext

15/01/2025 08:16 am

Cinque Terre

18.55 K

Cinque Terre

0