", "articleSection": "Crime,Cinema", "image": { "@type": "ImageObject", "url": "https://prod.cdn.publicnext.com/s3fs-public/405356-1737044876-togo.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿತ್ರದುರ್ಗ: ಸೋಶಿಯಲ್ ಮೀಡಿಯಾಗಳಲ್ಲಿ ದರ್ಶನ್ ಅವರನ್ನು ನಾವು ಭೇಟಿ ಮಾಡಿ ಹಣ ತೆಗೆದುಕೊಂಡಿದ್ದೇವೆ ಎಂದು ವದಂತಿಗಳು ಬರುತ್ತಿವೆ. ನಾವು ಯಾರನ್ನ...Read more" } ", "keywords": "Darshan, Renuka Swamy, Chitradurga, Sandalwood News, Kannada Film Industry, Actor Darshan, Renuka Swamy Father Statement,Chitradurga,Crime,Cinema", "url": "https://publicnext.com/node" } ಚಿತ್ರದುರ್ಗ: ನಟ ದರ್ಶನ್‌ಗೆ ನಾವು ಭೇಟಿಯಾಗಿಲ್ಲ - ಮೃತ ರೇಣುಕಾ ಸ್ವಾಮಿ ತಂದೆ ಹೇಳಿಕೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ನಟ ದರ್ಶನ್‌ಗೆ ನಾವು ಭೇಟಿಯಾಗಿಲ್ಲ - ಮೃತ ರೇಣುಕಾ ಸ್ವಾಮಿ ತಂದೆ ಹೇಳಿಕೆ

ಚಿತ್ರದುರ್ಗ: ಸೋಶಿಯಲ್ ಮೀಡಿಯಾಗಳಲ್ಲಿ ದರ್ಶನ್ ಅವರನ್ನು ನಾವು ಭೇಟಿ ಮಾಡಿ ಹಣ ತೆಗೆದುಕೊಂಡಿದ್ದೇವೆ ಎಂದು ವದಂತಿಗಳು ಬರುತ್ತಿವೆ. ನಾವು ಯಾರನ್ನೂ ಭೇಟಿ ಮಾಡಿಲ್ಲ. ಯಾರಿಂದಲೂ ಹಣ ಪಡೆದಿಲ್ಲ ಎಂದು ಮೃತ ರೇಣುಕಾ ಸ್ವಾಮಿಯ ತಂದೆ ಶಿವನಗೌಡ ತಿಳಿಸಿದ್ದಾರೆ‌.

ಚಿತ್ರದುರ್ಗ ನಗರದ ವಿಆರ್‌ಎಸ್ ಬಡಾವಣೆಯಲ್ಲಿರುವ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಈ ವಿಷಯ ತಿಳಿಸಿದ್ದಾರೆ.

ಹಲವು ದಿನಗಳಿಂದ ಫೇಸ್‌ಬುಕ್‌ನಲ್ಲಿ ಕೆಲವು ವಿಚಾರಗಳು ಬರುತ್ತಿವೆ. ನಾವು ದರ್ಶನ್ ಬಳಿ ಹೋಗಿದ್ದೇವೆ. ಅವರು ನಮ್ಮ ಬಳಿ ಬಂದಿದ್ದಾರೆ. ಅವ್ರೇನೋ ಹಣ ಕೊಟ್ಟಿದ್ದಾರೆ. ಇದರ ಬಗ್ಗೆ

ನಮಗೆ ಬಹಳಷ್ಟು ಜನ ಫೋನ್ ಮಾಡಿ ಕೇಳುತ್ತಿದ್ದಾರೆ. ನಾವು ಯಾರೂ ಅವ್ರನ್ನ ಭೇಟಿ ಮಾಡಿಲ್ಲ. ಅವ್ರು ಯಾರೂ ನಮ್ಮನ್ನ ಭೇಟಿ ಮಾಡಿ ಬಂದಿಲ್ಲ ಎಂದರು.

ನಾವು ಯಾರತ್ರನೂ ಹತ್ತು ಪೈಸೆ ಹಣ ಇಸ್ಕೊಂಡಿಲ್ಲ. ಅದೇನೋ ಕಾರು‌ ಬುಕ್‌ ಮಾಡಿದ್ದೇವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ನಮ್ಮ ಬಳಿ ಇರುವ ಹಳೇ ಸ್ಕೂಟರ್‌ಅನ್ನು ರಿಪೇರಿ ಮಾಡಿಸಲು ಆಗಿಲ್ಲ. ಈ ಫೇಸ್‌ಬುಕ್ ಅವಾಂತರ ಸೃಷ್ಠಿಯಿಂದ ನಮಗೆ ನೋವಾಗಿದೆ. ಕರ್ನಾಟಕದ ಜನತೆಗೆ ನಾವು ಈ‌ ಮೂಲಕ ಸ್ಪಷ್ಟನೆ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅಪೀಲ್ ಹಾಕಿದ್ದನ್ನ ನಾವು ಸ್ವಾಗತಿಸುತ್ತೇವೆ. ಸರ್ಕಾರಕ್ಕೆ ನಾವು ಧನ್ಯವಾದಗಳನ್ನ ತಿಳಿಸುತ್ತೇವೆ ಎಂದರು‌.

Edited By : Vinayak Patil
PublicNext

PublicNext

16/01/2025 09:58 pm

Cinque Terre

41.77 K

Cinque Terre

1

ಸಂಬಂಧಿತ ಸುದ್ದಿ